ಕೆರೆಗಳಿಗೆ ಬಫರ್ ಜೋನ್ ನಿಗದಿ-ಬೆಂಗಳೂರು ಪ್ರತಿಷ್ಠಾನ ಬೆಂಬಲಿಸಿ : ಆರ್ ಸಿ

By Web DeskFirst Published Jan 8, 2019, 11:17 AM IST
Highlights

ಕರ್ನಾಟಕ ಸರ್ಕಾರ ಮತ್ತು ದೊಡ್ಡ ಬಿಲ್ಡರ್‌ಗಳ ವಿರುದ್ಧ ನಮ್ಮ ಬೆಂಗಳೂರು ಪ್ರತಿಷ್ಠಾನವು ಬೆಂಗಳೂರಿನ ಉಳಿವಿಗಾಗಿ ನಡೆಸುತ್ತಿರುವ ಹೋರಾಟಕ್ಕೆ ನಾಗರಿಕ ಸಮಾಜ ಬೆಂಬಲವಾಗಿ ನಿಲ್ಲಬೇಕು ಎಂದು ರಾಜೀವ್ ಚಂದ್ರಶೇಖರ್ ಕೋರಿದ್ದಾರೆ.

ಬೆಂಗಳೂರು :  ಸುಪ್ರೀಂಕೋರ್ಟ್‌ನಲ್ಲಿ ಮಂಗಳವಾರ ಬೆಂಗಳೂರಿನ ಕೆರೆ ಮತ್ತು ಜಲ ಕಾಲುವೆಗಳಿಗೆ ಬಫರ್ ಜೋನ್ ನಿಗದಿ ಪಡಿಸಿರುವ ರಾಷ್ಟ್ರೀಯ ಹಸಿರು ನ್ಯಾಯಾಧಿರಕಣದ ತೀರ್ಪನ್ನು ಪ್ರಶ್ನಿಸಿರುವ ಅರ್ಜಿಗಳ ವಿಚಾರಣೆ ನಡೆಯಲಿದ್ದು, ಇದು ಬಿಗ್ ಡೇವಿಡ್ ಹಾಗೂ ಗೋಲಿಯತ್ ನಡುವಿನ ಕದನ ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಬಣ್ಣಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, 2016 ರ ಮೇ 4 ರಂದು ರಾಷ್ಟ್ರೀಯ ಹಸಿರು ನ್ಯಾಯಧಿಕರಣವು ಕೆರಗಳಿಂದ 75 ಮೀಟರ್, ಪ್ರಾಥಮಿಕ ರಾಜಕಾಲುವೆಗಳಿಂದ 50 ಮೀಟರ್, ದ್ವಿತೀಯ ಕಾಲುವೆಗಳಿಂದ ೩೫ ಮೀಟರ್ ಮತ್ತು ಮೂರನೇ ಕಾಲುವೆಗಳಿಂದ 25 ಮೀಟರ್ ಅಂತರವನ್ನು ಬಫರ್ ಜೋನ್ ಎಂದು ಘೋಷಿಸಿ ಆ ಪ್ರದೇಶದಲ್ಲಿ ಯಾವುದೇ ನಿರ್ಮಾಣ ಕಾಮಗಾರಿ ನಡೆಯುವಂತಿಲ್ಲ ಎಂದಿತ್ತು. 

ತೀರ್ಪು ಪ್ರಕಟಗೊ ಳ್ಳುವ ಮೊದಲೇ ನಿರ್ಮಾಣ ಚಟುವಟಿಕೆಗಳಿಗೆ ನೀಡಿದ್ದ ಅನು ಮತಿಗಳಿಗೂ ಇದು ಅನ್ವಯಿಸುತ್ತದೆ ಎಂದು ಯಾಧಿಕರಣ ಆದೇಶಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರ, ಮಂತ್ರಿಟೆಕ್ ಜೋನ್, ಕೋರ್‌ಮೈಂಡ್ ಸಾಫ್ಟ್‌ವೇರ್‌ಗಳು ಸೇರಿದಂತೆ ಅನೇಕ ಬಿಲ್ಡರ್‌ಗಳು ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ಈ ಅರ್ಜಿಗಳ ವಿಚಾರಣೆ ಮಂಗಳವಾರ ನ್ಯಾ| ಎ.ಕೆ. ಸಿಕ್ರಿ ನೇತೃತ್ವದ ನ್ಯಾಯಪೀಠದಲ್ಲಿ ನಡೆಯಲಿದೆ. ಕರ್ನಾಟಕ ಸರ್ಕಾರ ಮತ್ತು ದೊಡ್ಡ ಬಿಲ್ಡರ್‌ಗಳ ವಿರುದ್ಧ ನಮ್ಮ ಬೆಂಗಳೂರು ಪ್ರತಿಷ್ಠಾನವು ಬೆಂಗಳೂರಿನ ಉಳಿವಿಗಾಗಿ ನಡೆಸುತ್ತಿರುವ ಹೋರಾಟಕ್ಕೆ ನಾಗರಿಕ ಸಮಾಜ ಬೆಂಬಲವಾಗಿ ನಿಲ್ಲಬೇಕು ಎಂದು ರಾಜೀವ್ ಚಂದ್ರಶೇಖರ್ ಕೋರಿದ್ದಾರೆ.

ಕರ್ನಾಟಕ ಸರ್ಕಾರ ಮತ್ತು ಬಿಲ್ಡರ್‌ಗಳ ಗುಂಪು ದೊಡ್ಡ ದೊಡ್ಡ ವಕೀಲರನ್ನು ನೇಮಿಸಿ ವಾದ ಮಂಡನೆ ನಡೆಸಲು ಮುಂದಾಗಿವೆ. ಇದು ದೊಡ್ಡ ಡೇವಿಡ್ ಮತ್ತು ಗೋಲಿಯತ್‌ನ ಕದನವಾಗಿ ಸುಪ್ರೀಂಕೋರ್ಟ್‌ನಲ್ಲಿ ಮಾರ್ಪಾಡುಗೊಳ್ಳಲಿದೆ. ರಾಹುಲ್ ಗಾಂಧಿ ಬೆಂಬಲವಿರುವ ಕರ್ನಾಟಕ ಸರ್ಕಾರವು ಬಿಲ್ಡರ್‌ಗಳ ಜೊತೆ ಸೇರಿಕೊಂಡು ಹಸಿರು ನ್ಯಾ ಯಾಧಿಕರಣದ ತೀರ್ಪನ್ನು ರದ್ದುಗೊಳಿಸಲು ಪ್ರಯತ್ನಿಸುತ್ತಿದೆ. 

ಬೆಂಗಳೂರಿನ ರಕ್ಷಣೆಗೆ ನಾಗರಿಕರ ಗುಂಪುಗಳಾದ ನಮ್ಮ ಬೆಂಗಳೂರು ಪ್ರತಿಷ್ಠಾನ ಮಾತ್ರ ಇದೆ. ಕರ್ನಾಟಕ ಸರ್ಕಾರ ಮತ್ತು ಜಿ.ಪರಮೇಶ್ವರ್ ಈ ದೊಡ್ಡ ಬಿಲ್ಡರ್‌ಗಳ ಬೆಂಬಲಕ್ಕೆ ನಿಂತಿದ್ದು, ರಾಹುಲ್ ಗಾಂಧಿ ಇಬ್ಬಂದಿತನ, ಬೆಂಗಳೂರನ್ನು ಶೋಷಿಸುತ್ತಿರುವ ಮತ್ತು ನಾಶ ಪಡಿಸುತ್ತಿರುವ ಬಿಲ್ಡರ್‌ಗಳು ಹಾಗೂ ಗುತ್ತಿಗೆದಾರರ ಮಧ್ಯೆ ಕರ್ನಾಟಕ ಸರ್ಕಾರದ ಸಂಬಂಧ ಇರುವುದನ್ನು ಇದು ತೋರಿಸುತ್ತದೆ ಎಂದು ತಿಳಿಸಿದರು.

click me!