ಮೆಟ್ರೋ ನಿಲ್ದಾಣದಲ್ಲಿ ಎಸ್ಕಲೇಟರ್‌ನಿಂದ ಬಿದ್ದ ಮಗು ಸಾವು

Published : Jan 28, 2019, 11:36 AM ISTUpdated : Jan 28, 2019, 02:17 PM IST
ಮೆಟ್ರೋ ನಿಲ್ದಾಣದಲ್ಲಿ ಎಸ್ಕಲೇಟರ್‌ನಿಂದ ಬಿದ್ದ ಮಗು ಸಾವು

ಸಾರಾಂಶ

ಬೆಂಗಳೂರಿನ ಶ್ರೀರಾಮಪುರ  ಮೆಟ್ರೋ ನಿಲ್ದಾಣದ ಎಸ್ಕಲೇಟರ್ ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಒಂದು ವರ್ಷದ ಮಗು ಚಿಕಿತ್ಸೆ ಫಲಿಸದೇ ಮೃತಪಟ್ಟಿದೆ. 

ಬೆಂಗಳೂರು : ಶ್ರೀರಾಮಪುರ ಮೆಟ್ರೋ ನಿಲ್ದಾಣದಲ್ಲಿ ಕೈ ತಪ್ಪಿ ಎಸ್ಕಲೇಟರ್ ನಿಂದ ಕೆಳಕ್ಕೆ ಬಿದ್ದಿದ್ದ ಮಗು ಚಿಕಿತ್ಸೆ ಫಲಿಸದೇ ಮೃತಪಟ್ಟಿದೆ. 

"

ಒಂದೂವರೆ ವರ್ಷದ ಮಗು ಹಾಸಿಕಿ ಅಜ್ಜಿಯ ಕೈ ತಪ್ಪಿ ಕೆಳಕ್ಕೆ ಬಿದ್ದಿತ್ತು. ಸುಮಾರು 32 ಅಡಿ ಎತ್ತರದಿಂದ ಮಗು ಕೆಳಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿತ್ತು. ಬಳಿಕ ತಕ್ಷಣವೇ ಮಗುವನ್ನು ಇಂದಿರಾ ಗಾಂಧಿ‌ ಮಕ್ಕಳ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ. 

ಎಸ್ಕಲೇಟರ್‌ ಮೇಲಿಂದ ಬಿದ್ದು ಮಗು ಗಂಭೀರ

ಮೆಟ್ರೋ ನಿಲ್ದಾಣದ ಎಸ್ಕಲೇಟರ್ ಪಕ್ಕದಲ್ಲಿದ್ದ ತೆರೆದ ಜಾಗದಿಂದ ಭಾನುವಾರ ರಾತ್ರಿ ಮಗು ಕೆಳಕ್ಕೆ ಬಿದ್ದು, ತಲೆಗೆ ಗಂಭೀರ ಗಾಯಗಳಾಗಿತ್ತು. ಮಗುವಿನ ಸಾವಿನಿಂದ ಆಸ್ಪತ್ರೆ ಮುಂಭಾಗ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. 

ಎಫ್ ಐ ಆರ್ :   ಘಟನೆ ಸಂಬಂಧ ಸುಬ್ರಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಅಲ್ಲದೇ  ಮೆಟ್ರೋ ಆಧಿಕಾರಿಗಳ ನಿರ್ಲಕ್ಷ್ಯದ  ಬಗ್ಗೆ ಆರೋಪ ಮಾಡಲಾಗಿದ್ದು, ಸುರಕ್ಷತಾ ಕ್ರಮ ಕೈಗೊಂಡಿಲ್ಲವೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. 

PREV
click me!

Recommended Stories

Karnataka Covid-19 Cases: ಕರ್ನಾಟಕದಲ್ಲಿ Covid-19 ಮತ್ತೆ ಏರಿಕೆ; 5 ಹೊಸ ಕೇಸ್ ದಾಖಲು, ಬೆಂಗಳೂರಿನಲ್ಲಿ ಒಂದು ಸಾವು!
Marathahalli Incident: ದೇವರ ಹೆಸರಲ್ಲಿ ಹಣಕ್ಕೆ ಡಿಮ್ಯಾಂಡ್; ಕೊಡದಿದ್ದಕ್ಕೆ ಯುವಕನ ಮೇಲೆ ಹಲ್ಲೆ!