ಎಸ್ಕಲೇಟರ್‌ ಮೇಲಿಂದ ಬಿದ್ದು ಮಗು ಗಂಭೀರ

By Web DeskFirst Published Jan 28, 2019, 7:47 AM IST
Highlights

ಶ್ರೀರಾಮಪುರ ಮೆಟ್ರೋ ನಿಲ್ದಾಣದಲ್ಲಿ ಎಕ್ಸಲೇಟರ್‌ನಿಂದ ಕೆಳಗೆ ಇಳಿಯುವಾಗ ವೃದ್ಧೆಯೊಬ್ಬರ ಕಂಕುಳಿನಲ್ಲಿದ್ದ ಮಗು ಕೆಳಗೆ ಬಿದ್ದು, ಗಂಭೀರವಾಗಿ ಗಾಯಗೊಂಡಿದೆ.

ಬೆಂಗಳೂರು :  ಶ್ರೀರಾಮಪುರ ಮೆಟ್ರೋ ನಿಲ್ದಾಣದಲ್ಲಿ ಎಕ್ಸಲೇಟರ್‌ನಿಂದ ಕೆಳಗೆ ಇಳಿಯುವಾಗ ವೃದ್ಧೆಯೊಬ್ಬರ ಕಂಕುಳಿನಲ್ಲಿದ್ದ ಮಗು ಕೆಳಗೆ ಬಿದ್ದು, ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.

ಘಟನೆಯಲ್ಲಿ ಪ್ರಕಾಶ್‌ ನಗರದ ನಿವಾಸಿ, ಒಂದೂವರೆ ವರ್ಷದ ಮಗು ಹರಿಣಿ ಗಂಭೀರವಾಗಿ ಗಾಯಗೊಂಡಿದೆ. ಹರಿಣಿಯ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹರಿಣಿ ತನ್ನ ತಾಯಿ ಹಾಗೂ ಅಜ್ಜಿ ಭಾನುವಾರ ಜತೆ ಮೆಟ್ರೋದಲ್ಲಿ ಹೋಗಿದ್ದರು. ಈ ವೇಳೆ ಅಜ್ಜಿ ತನ್ನ ಕಂಕಳಿನಲ್ಲಿ ಮೊಮ್ಮಗಳನ್ನು ಎತ್ತಿಕೊಂಡಿದ್ದರು. ಶ್ರೀರಾಮಪುರ ಮೆಟ್ರೋ ರೈಲು ನಿಲ್ದಾಣದಲ್ಲಿ ಎಕ್ಸಲೇಟರ್‌ ಮೂಲಕ ಕೆಳಗೆ ಇಳಿಯುತ್ತಿದ್ದರು. ಎಕ್ಸಲೇಟರ್‌ನಿಂದ ಕೆಳಗೆ ಬರುವಾಗ ಏಕಾಏಕಿ ಅಜ್ಜಿಯ ಕಂಕಳಿನಲ್ಲಿದ್ದ ಮಗು ಕೆಳಗೆ ಬಿದ್ದಿದೆ. ಮಗು ಕೆಳಗೆ ಬೀಳುವುದನ್ನು ಕಂಡ ಮೆಟ್ರೋ ಸಿಬ್ಬಂದಿ ಕೂಡಲೇ ಎಕ್ಸಲೇಟರ್‌ ಸ್ಥಗಿತಗೊಳಿಸಿದ್ದಾರೆ.

ರಾತ್ರಿ 9ರ ಸುಮಾರಿಗೆ ಘಟನೆ ಸಂಭವಿಸಿದ್ದು, ಮೆಟ್ರೋ ಸಿಬ್ಬಂದಿ ತಕ್ಷಣವೇ ಮಗುವನ್ನು ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗುವಿನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಘಟನೆ ನಡೆದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಈ ಬಗ್ಗೆ ದೂರು ದಾಖಲಾಗಿಲ್ಲ. ಮಗುವಿನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ ಎಂದು ಸುಬ್ರಹ್ಮಣ್ಯ ನಗರ ಠಾಣೆ ಇನ್ಸ್‌ಪೆಕ್ಟರ್‌ ತಿಳಿಸಿದರು.

click me!