ಲಾಲ್‌ಬಾಗ್‌ನಲ್ಲಿ ಜುಟ್ಟು ಹಿಡಿದು ಹೊಡೆದಾಡಿಕೊಂಡ ಹುಡುಗಿಯರು: ಜಗಳ ಬಿಡಿಸಿದ್ದಕ್ಕಿಂತ ವಿಡಿಯೋ ಮಾಡಿದವರೇ ಹೆಚ್ಚು!

Published : Nov 29, 2026, 12:27 PM IST
Bengaluru Lalbagh girls fight

ಸಾರಾಂಶ

ಬೆಂಗಳೂರಿನ ಪ್ರಸಿದ್ಧ ಲಾಲ್‌ಬಾಗ್ ಉದ್ಯಾನದಲ್ಲಿ ಅನ್ಯರಾಜ್ಯದ ಯುವತಿಯರು ಪರಸ್ಪರ ಕೈ ಕೈ ಮಿಲಾಯಿಸಿ ಹೊಡೆದಾಡಿಕೊಂಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜಗಳಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಇಂತಹ ಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಬೆಂಗಳೂರು (ನ.26): ನಗರದ ಪ್ರಸಿದ್ಧ ಲಾಲ್‌ಬಾಗ್ ಉದ್ಯಾನದ ಒಳಗೆ ಯುವತಿಯರ ಗುಂಪೊಂದರ ನಡುವೆ ಜಗಳ ನಡೆದು, ಪರಸ್ಪರ ಕೈ ಕೈ ಮಿಲಾಯಿಸಿ ಹೊಡೆದಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಅನ್ಯರಾಜ್ಯದ ಯುವತಿಯರು ಎನ್ನಲಾದ ಈ ಯುವತಿಯರ ನಡುವಿನ ಮಾರಾಮಾರಿಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿವೆ.

ಲಾಲ್‌ಬಾಗ್ ಆವರಣದಲ್ಲಿ ಯುವತಿಯರು ಏಕಾಏಕಿ ಜಗಳಕ್ಕಿಳಿದು ದಾಂಧಲೆ ನಡೆಸಿದ್ದಾರೆ ಎನ್ನಲಾಗಿದೆ. ಜಗಳಕ್ಕೆ ನಿಖರ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲವಾದರೂ, ಪರಸ್ಪರ ಹೊಡೆದಾಡಿಕೊಂಡ ದೃಶ್ಯಗಳು ಸ್ಥಳದಲ್ಲಿದ್ದವರನ್ನು ಅಚ್ಚರಿಗೊಳಿಸಿವೆ.

ಘಟನೆಯ ಪ್ರಮುಖ ಅಂಶಗಳು ಹೀಗಿವೆ:

ಕೈ ಕೈ ಮಿಲಾಯಿಸಿ ಹೊಡೆದಾಟ: ಲಾಲ್‌ಬಾಗ್ ಒಳಗೆ ಯುವತಿಯರು ಪರಸ್ಪರ ಜಗಳವಾಡಿಕೊಂಡು ಹೊಡೆದಾಡಿಕೊಂಡಿದ್ದು, ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ನಿಖರ ಕಾರಣ ಅಸ್ಪಷ್ಟ: ಈ ಜಗಳ ಯಾವ ವಿಚಾರಕ್ಕಾಗಿ ನಡೆಯಿತು ಎಂಬುದರ ಕುರಿತು ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ವಿಡಿಯೋ ಚಿತ್ರೀಕರಣವೇ ಮುಖ್ಯ: ಜಗಳ ನಡೆಯುತ್ತಿದ್ದ ವೇಳೆ ಪರಿಸ್ಥಿತಿಯನ್ನು ಶಾಂತಗೊಳಿಸಿ ಜಗಳ ಬಿಡಿಸುವುದಕ್ಕಿಂತ ಹೆಚ್ಚಾಗಿ, ಸುತ್ತಮುತ್ತಲಿದ್ದ ಜನರು ಮೊಬೈಲ್‌ಗಳಲ್ಲಿ ವಿಡಿಯೋ ಚಿತ್ರೀಕರಣ ಮಾಡುವುದರಲ್ಲೇ ಹೆಚ್ಚು ಮಗ್ನರಾಗಿದ್ದರು.

ಸಾರ್ವಜನಿಕ ಸ್ಥಳಗಳು ಹಾಗೂ ರಸ್ತೆಗಳಲ್ಲಿ ಇತ್ತೀಚೆಗೆ ಇಂತಹ ಜಗಳ ಮತ್ತು ಗಲಾಟೆಯ ಪ್ರಕರಣಗಳು ಕಂಡುಬರುತ್ತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

ವಿಧಾನಸೌಧ ಎದುರೂ ಜಡೆ ಹಿಡಿದು ಹೊಡೆದಾಟ:

ಇನ್ನು ಅನ್ಯ ರಾಜ್ಯದಿಂದ ಕೆಲಸಕ್ಕೆ ಬಂದ ಯುವತಿಯರ ಗುಂಪು ಬೆಂಗಳೂರಿನ ಸಾರ್ವಜನಿಕ ಮತ್ತು ಪ್ರೇಕ್ಷಣೀಯ ಸ್ಥಳಗಳ ಮುಂದೆ ಹೊಡೆದಾಡಿಕೊಳ್ಳುವುದು ಹೊಸದೇನಲ್ಲ. ಈ ಹಿಂದೆಯೂ ರಾಜ್ಯದ ಶಕ್ತಿಕೇಂದ್ರ ವಿಧಾನ ಸೌಧದ ಮುಂದೆಯೂ ಹೀಗೆಯೇ ವಿನಾಕಾರಣ ಕೂದಲು, ಜಡೆ ಹಿಡಿದುಕೊಂಡು ಪರಸ್ಪರ ಜೋರಾಗಿ ಹೊಡೆದಾಡಿಕೊಂಡಿದ್ದರು. ಆಗಲೂ ಯುವತಿಯರ ಗುಂಪಿನ ವಿಡಿಯೋ ಭಾರೀ ವೈರಲ್ ಆಗಿತ್ತು. ಇದೀಗ ಪುನಃ ಲಾಲ್‌ ಬಾಗ್ ನಲ್ಲಿ ಜುಟ್ಟು ಹಿಡಿದು ಹೊಡೆದಾಡಿಕೊಂಡಿದ್ದಾರೆ. ಇವರು ವೈರಲ್ ಆಗುವುದಕ್ಕೆಂತಲೇ ಹೀಗೆ ಪ್ರೇಕ್ಷಣೀಯ ಸ್ಥಳಕ್ಕೆ ಬಂದು ಹೊಡೆದಾಡಿಕೊಳ್ಳುತ್ತಿದ್ದಾರೆ ಎಂಬ ಅನುಮಾನಗಳೂ ಜನರಲ್ಲಿ ವ್ಯಕ್ತವಾಗುತ್ತಿದೆ. ಪೊಲೀಸರು ಇಂತವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಹಾಗೂ ಲಾಲ್‌ಬಾಗ್ ನಡಿಗೆದಾರರು ಆಗ್ರಹಿಸಿದ್ದಾರೆ.

PREV
Read more Articles on
click me!

Recommended Stories

ಆಶಾ ಕಾರ್ಯಕರ್ತೆಯರ ಧರಣಿಗೆ ಸಿಕ್ತು ಜಯ: ₹2,000 ಗೌರವಧನ ಹೆಚ್ಚಳಕ್ಕೆ 'ಲಿಖಿತ ಆದೇಶ' ಹೊರಡಿಸಿದ ಸರ್ಕಾರ!
ಪೊಲೀಸರು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಶಾಮೀಲಾದರೆ ಹುಷಾರ್; ಚೀಫ್ ಕಮಿಷನರ್ ಹಿತೇಂದ್ರ ವಾರ್ನಿಂಗ್!