ಜೈಲಿನಲ್ಲಿ ದರ್ಶನ್ ಭೇಟಿಯಾದ ವಿಜಯಲಕ್ಷ್ಮೀ, ತಾಯಿ ಮೀನಾ: ಧನ್ವೀರ್ ಕೂಡ ಭೇಟಿ, ಕುತೂಹಲ!

Published : Aug 18, 2026, 06:22 PM IST
viajyalakshami darshan and dhanveer

ಸಾರಾಂಶ

ಕಾನೂನು ಹೋರಾಟದಲ್ಲಿ ಹಿನ್ನಡೆ, ಸೊಳ್ಳೆ ಕಾಟ, ಜೈಲಲ್ಲಿನ ಕಿರಿಕಿರಿ ಸೇರಿದಂತೆ ಅನೇಕ ನೋವುಗಳನ್ನು ಅನುಭವಿಸುತ್ತಿದ್ದ ನಟ ದರ್ಶನ್‌ಗೆ ಇವತ್ತು ಕೊಂಚ ಸಮಾಧಾನ ಸಿಕ್ಕಿದೆ. ಕುಟುಂಬಸ್ಥರ ಭೇಟಿ ಹಿನ್ನೆಲೆಯಲ್ಲಿ ಮಾನಸಿಕವಾಗಿ ಗಟ್ಟಿಯಾಗಿದ್ದಾರೆ.

ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ (Renukaswamy Case) ಜೈಲು ಸೇರಿರುವ ನಟ ದರ್ಶನ್ ಭೇಟಿಗೆ ಅವರ ಕುಟುಂಬ ಆಗಮಿಸಿತ್ತು.

ಒಂದೇ ಬಾರಿಗೆ ಜೈಲಿಗೆ ಬಂದ ಪತ್ನಿ, ತಾಯಿ ಮತ್ತು ಧನ್ವೀರ್!

ಇಂದು ಬೆಳಿಗ್ಗೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ (Vijayalakshmi) ಮತ್ತು ತಾಯಿ ಮೀನಾ (Meena) ಅವರು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದರು. ಮಗನ ಆರೋಗ್ಯ ಮತ್ತು ಜೈಲಿನ ಸ್ಥಿತಿಗತಿ ವಿಚಾರಿಸಲು ತಾಯಿ ಮೀನಾ ಅವರು ಕಾರಿನಲ್ಲಿ ಆಗಮಿಸಿದರೆ ಪತ್ನಿ ವಿಜಯಲಕ್ಷ್ಮೀ ಅವರು ಚೆಕ್ ಪೋಸ್ಟ್‌ನಿಂದ ನಡೆದುಕೊಂಡೇ ಜೈಲು ಆವರಣದತ್ತ ತೆರಳಿದರು. ಇದೇ ಸಮಯದಲ್ಲಿ ಸ್ಯಾಂಡಲ್‌ವುಡ್ ನಟ ಧನ್ವೀರ್ (Dhanveer) ಕೂಡ ಜೈಲಿಗೆ ಆಗಮಿಸಿದ್ದು ಹಲವು ಚರ್ಚೆಗಳಿಗೆ ಕಾರಣವಾಗಿದೆ.

ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್‌ಗೆ ಸತತ ಹಿನ್ನಡೆ ಆಗ್ತಿದೆ. ಜೈಲಿನಲ್ಲಿ ಸಾಮಾನ್ಯ ಕೈದಿಯಂತೆ ಬದುಕುತ್ತಿರುವ ದರ್ಶನ್, ಕಾನೂನು ಹೋರಾಟದಲ್ಲಿ ಮತ್ತೆ ಮತ್ತೆ ಫೇಲ್ ಆಗುತ್ತಿದ್ದಾರೆ. ಇದರ ಮಧ್ಯೆ ಅವರ ಗ್ಯಾಂಗ್‌ನಲ್ಲಿರುವ ಕೆಲವು ಸದಸ್ಯರು ದರ್ಶನ್ ವಿರುದ್ಧವೇ ಸಾಕ್ಷ್ಯ ಹೇಳಲು ತಿರುಗಿಬಿದ್ದಿದ್ದಾರೆ. ಇದು ದರ್ಶನ್‌ಗೆ ದೊಡ್ಡ ಆಘಾತ ತಂದಿದೆ.

ಜೊತೆಗೆ ದರ್ಶನ್‌ ಅವರು ಜೈಲಿನಲ್ಲಿ ಕೆಲವು ವ್ಯವಸ್ಥೆಗಳನ್ನ ಕೇಳಿದ್ದರು. ಜೈಲಿನ ಕಠಿಣ ನಿಯಮಗಳ ಪ್ರಕಾರ ಅದೂ ಕೂಡ ಅವರಿಗೆ ಸಿಕ್ಕಿಲ್ಲ. ಇದರ ಮಧ್ಯೆ ಸೊಳ್ಳೆ ಕಾಟದಿಂದ ನಿದ್ದೆ ಕೂಡ ಬರುತ್ತಿಲ್ಲ. ಇದರಿಂದಾಗಿ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ ಎಂಬ ವರದಿಗಳಿವೆ. ಇದೀಗ ಕುಟುಂಬಸ್ಥರ ಭೇಟಿ ಹಿನ್ನೆಲೆಯಲ್ಲಿ ದರ್ಶನ್‌ಗೆ ಕೊಂಚ ಸಮಾಧಾನ ತಂದಿದೆ.

PREV
Read more Articles on
click me!

Recommended Stories

ಯಶವಂತಪುರ, KSR ಬೆಂಗಳೂರು ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಕನಿಷ್ಠ ಸೌಲಭ್ಯಗಳೇ ಇಲ್ಲ: ರೈಲ್ವೆ ಇಲಾಖೆಗೆ CAG ತರಾಟೆ
ದೆಹಲಿ ₹60, ಮುಂಬೈ ₹80 ಆದ್ರೆ, ಎಳನೀರಿಗೆ ವಿಶ್ವ ಪ್ರಸಿದ್ಧವಾಗಿರುವ ಮದ್ದೂರು ಪಕ್ಕದಲ್ಲಿರೋ ಬೆಂಗಳೂರಲ್ಲಿ ₹120!