ಕ್ಯಾಬ್ ಬುಕ್ ಆಗಲ್ಲ, ಬೈಕ್ ಟ್ಯಾಕ್ಸಿ ಇಲ್ಲ, ಬೆಂಗಳೂರಿನಲ್ಲಿ ಸಾರಿಗೆ ಮಾಫಿಯಾ ಎಂದ ಪ್ರಯಾಣಿಕ

Published : Jul 07, 2025, 01:44 PM IST
Taxi

ಸಾರಾಂಶ

ಬೆಂಗಳೂರಲ್ಲಿ ಮೊದಲು ಬೈಕ್ ಟ್ಯಾಕ್ಸಿ ಬ್ಯಾನ್ ಮಾಡಿದ್ದರೆ, ಇದೀಗ ಯೂನಿಯನ್ ಓಲಾ ಉಬರ್ ಸೇರಿದಂತೆ ಟ್ಯಾಕ್ಸಿ ಎಗ್ರೇಟರ್‌ಗಳನ್ನೇ ಬ್ಯಾನ್ ಮಾಡಲು ಮುಂದಾಗಿದೆ ಎಂದು ಪ್ರಯಾಣಿಕನೊಬ್ಬ ಆಕ್ರೋಶ ಹೊರಹಾಕಿದ್ದಾನೆ.ಅಷ್ಟಕ್ಕೂ ಈ ಪ್ರಯಾಣಿಕ ಆಕ್ರೋಶ ಯಾಕೆ?

ಬೆಂಗಳೂರು (ಜು.07) ಭಾಷೆ, ಟ್ರಾಫಿಕ್, ಸಾರಿಗೆ, ಗುಂಡಿ ಬಿದ್ದ ರಸ್ತೆ ಸೇರಿದಂತೆ ಹಲವು ಕಾರಣಗಳಿಂದ ಬೆಂಗಳೂರು ಇತ್ತೀಚಿನ ದಿನಗಳಲ್ಲಿ ಸದಾ ಸುದ್ದಿಯಲ್ಲಿದೆ. ಇತ್ತ ಬೆಂಗಳೂರು ಟ್ರಾಫಿಕ್ ದಿನದಿಂದ ದಿನಕ್ಕೆ ತಲೆನೋವು ಹೆಚ್ಚಿಸುತ್ತಿದೆ. ಪ್ರತಿ ದಿನ ಓಡಾಡುವರಿಗೆ ಸಾರಿಗೆ ಪ್ರಯಾಸವಾಗುತ್ತಿದೆ. ಒಂದೆಡೆ ಬೈಕ್ ಟ್ಯಾಕ್ಸಿ ಬ್ಯಾನ್ ಮಾಡಿದ್ದರೆ, ಮತ್ತೊಂದೆಡೆ ಯೂನಿಯನ್ ಓಲಾ, ಉಬರ್ ಸೇವೆಯನ್ನೇ ಕಡಿತಗೊಳಿಸಲು ಮುಂದಾಗುತ್ತಿದೆ ಎಂದು ಪ್ರಯಾಣಿಕನೊಬ್ಬ ತನ್ನ ಆಕ್ರೋಶ ಹೊರಹಾಕಿದ್ದಾನೆ. ಬೆಂಗಳೂರಿನಲ್ಲಿ ಸಾರಿಗೆ ಮಾಫಿಯಾ ನಡೆಯುತ್ತಿದೆ ಎಂದಿದ್ದಾನೆ.

ರಿಷಬ್ ಅನ್ನೋ ಬೆಂಗಳೂರಿಗ ಟ್ವೀಟ್ ಮೂಲಕ ತನ್ನ ಆಕ್ರೋಶ ಹೊರಹಾಕಿದ್ದಾನೆ. ಬೆಂಗಳೂರು ಇತ್ತೀಚೆಗೆ ಸಹಿಸಿಕೊಳ್ಳಲು ಸಾಧ್ಯವಾಗದ ಮಟ್ಟಿಗೆ ತಲುಪಿದೆ. ಕಳೆದ 30 ನಿಮಿಷದಿಂದ ಕ್ಯಾಬ್ ಬುಕ್ ಮಾಡಲು ಪ್ರಯತ್ನಿಸುತ್ತಿದ್ದೇನೆ, ಒಂದೇ ಒಂದು ಕ್ಯಾಬ್ ಬುಕ್ ಆಗುತ್ತಿಲ್ಲ. ಇದರ ಹಿಂದೆ ಯೂನಿಯನ್ ಕೈವಾಡವಿದೆ. ಮೊದಲು ಯೂನಿಯನ್ ಬೈಕ್ ಟ್ಯಾಕ್ಸಿಯನ್ನು ನಿಷೇಧ ಮಾಡಿದರು, ಇದೀಗ ಓಲಾ, ಉಬರ್ ನಿಷೇಧ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದು ಯಾವ ರೀತಿಯ ಮಾಫಿಯಾ ಎಂದು ರಿಷಬ್ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ. ಸರಿಯಾದ ಮೂಲಸೌಕರ್ಯವಿಲ್ಲ, ಸಾರಿಗೆ ವ್ಯವಸ್ಥೆ ಸರಿಯಾಗಿಲ್ಲ, ಇದರ ಜೊತೆಗೆ ಭಾಷಾ ಸಮಸ್ಯೆ ಹೆಚ್ಚಾಗಿದೆ. ಇದಕ್ಕಿಂತ ರಾಜ್ಯ ಎಲ್ಲಾ ಕಂಪನಿಗಳು, ಕಚೇರಿಗಳನ್ನು ಮುಚ್ಚಲಿ, ನಾವು ಬ್ಯಾಗ್ ಪ್ಯಾಕ್ ಮಾಡಿ ತೆರಳುತ್ತೇವೆ ಎಂದು ಟ್ವೀಟ್ ಮಾಡಿದ್ದಾನೆ.

ಈತನ ಟ್ವೀಟ್‌ಗೆ ಬಾರಿ ಪರ ವಿರೋಧ ಕಮೆಂಟ್‌ಗಳು ವ್ಯಕ್ತವಾಗುತ್ತಿದ್ದಂತೆ ರಿಷಬ್ ಸ್ಪಷ್ಟನೆ ನೀಡಿದ್ದಾರೆ. ನನ್ನ ಆಕ್ರೋಶ ಬೆಂಗಳೂರು ಕುರಿತಲ್ಲ, ಬೆಂಗಳೂರಿನ ವ್ಯವಸ್ಥೆ ಕುರಿತು ಎಂದಿದ್ದಾನೆ. ಬೆಂಗಳೂರಿನ ಆಡಳಿತ ನಿರ್ವಹಿಸುತ್ತಿರುವ ಭ್ರಷ್ಟ ಸರ್ಕಾರ, ಆಡಳಿತ ವ್ಯವಸ್ಥೆ ಕುರಿತು ನನ್ನ ಆಕ್ರೋಶ ಎಂದು ಸ್ಪಷ್ಟೆನೆ ನೀಡಿದ್ದಾರೆ.

 

 

ರಿಷಬ್ ಆಕ್ರೋಶಕ್ಕೆ ಹಲವರು ಧನಿಗೂಡಿಸಿದ್ದರೆ, ಒಂದಷ್ಟು ಮಂದಿ ಬೆಂಗಳೂರನ್ನು ದೂಷಿಸುವ ಬದಲು ತೊರೆಯುವುದೇ ಉತ್ತಮ ಎಂದಿದ್ದಾರೆ. ಬೆಂಗಳೂರಲ್ಲಿ ಮೆಟ್ರೋ ಸೇರಿದಂತೆ ಸಾರಿಗೆ ವ್ಯವಸ್ಥೆ ಇದೆ. ಇಲ್ಲಿನ ಬಸ್ ಸಾರಿಗೆ ವ್ಯವಸ್ಥೆ ಉತ್ತಮವಾಗಿದೆ. ಇತರ ಎಲ್ಲಾ ನಗರಕ್ಕಿಂತ ಬೆಂಗಳೂರಿಗೆ ಕೆಲಸ ಅರಸಿಕೊಂಡು ಬರವವರು, ಕೆಲಸಕ್ಕಾಗಿ ನೆಲೆಸಿರುವವ ಸಂಖ್ಯೆ ಹೆಚ್ಚು. ಹೀಗಾಗಿ ಸಹಜವಾಗಿ ಟ್ರಾಫಿಕ್, ಜನದಟ್ಟಣೆ ಇದೆ. ಇದಕ್ಕೆ ಬೆಂಗಳೂರು ದೂಷಿಸುವುದು ಸರಿಯಲ್ಲ ಎಂದಿದ್ದಾರೆ.

ಬೆಂಗಳೂರಿನ ವ್ಯವಸ್ಥೆಗಳ ಕುರಿತು ಹಲವರು ಕಮೆಂಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಬೆಂಗಳೂರಿನ ಗುಂಡಿ ಬಿದ್ದ ರಸ್ತೆ ಸರಿಪಡಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಇಲ್ಲಿನ ಸ್ಥಳೀಯ ಆಡಳಿತಕ್ಕೆ ಚುನಾವಣೆಯೇ ನಡೆದಿಲ್ಲ. ಸಮಸ್ಯೆ ಬಂದಾಗ ಎಲ್ಲರೂ ಜಾರಿಕೊಳ್ಳುತ್ತಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

 

PREV
Read more Articles on
click me!

Recommended Stories

ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!