
ನೆಲಮಂಗಲ (ಜು.7): ರೇಣುಕಾಸ್ವಾಮಿ ಕೊಲೆ ಪ್ರಕರಣದ ರಾಜ್ಯದಲ್ಲಿ ಎಷ್ಟು ಸುದ್ದಿಯಾಗಿತ್ತು ಅನ್ನೋದಕ್ಕೆ ಸಾಕ್ಷಿ ಎನ್ನುವಂತೆ ಬೆಂಗಳೂರಿನ ನೆಲಮಂಗಲದಲ್ಲಿ ಸ್ಟಾರ್ ನಟ ದರ್ಶನ್ ಪ್ರಕರಣದ ರೀತಿಯಲ್ಲೇ ಮತ್ತೊಂದು ಪ್ರಕರಣದ ಬೆಳಕಿಗೆ ಬಂದಿದೆ. ದರ್ಶನ್ ಕೇಸ್ ಇನ್ನೂ ಮರೆ ಮಾಚಿಲ್ಲ ಆಗಲೇ ಅದೇ ರೀತಿಯ ಮತ್ತೊಂದು ಹಲ್ಲೆ ಪ್ರಕರಣದ ವರದಿಯಾಗಿದ್ದು, ದರ್ಶನ್ ಮಾಡಿದ್ದ ರೀತಿಯಲ್ಲೇ ಯುವಕನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್ ಇನ್ನೂ ಮಾಸೇ ಇಲ್ಲ, ದರ್ಶನ್ ಕೊಲೆ ಕೇಸ್ ನಂತೆ ಮತ್ತೊಂದು ಪ್ರಕರಣ ವರದಿಯಾಗಿದೆ. ಆತ ಸಲ್ಪ ಯಾಮಾರಿದ್ರೂ ರೇಣುಕಾಸ್ವಾಮಿಯಂತೆ ಕೊಲೆಯಾಗಿ ಬಿಡ್ತಿದ್ದ. ದರ್ಶನ್ ಪ್ರಕರಣ ನೋಡಿ ಪ್ರಭಾವಕ್ಕೆ ಒಳಗಾಗಿದ್ದ ಯುವಕರು, ಈತನಿಗೂ ಬಟ್ಟೆ ಬಿಚ್ಚಿ ಹಲ್ಲೆ ಮಾಡಿದ್ದಾರೆ. ಕೀಚಕರ ಕೃತ್ಯದ ವೇಳೆಯಲ್ಲೂ ರೇಣುಕಾಸ್ವಾಮಿ ಹೆಸರು ಉಲ್ಲೇಖ ಮಾಡಿದ್ದಾರೆ. ಆ ಯುವಕನಿಗೆ ಹಲ್ಲೆ ಮಾಡುವಾಗ ದರ್ಶನ್ ಹೆಸರನ್ನೂ ಈ ಪಾಪಿಗಳು ಹೇಳಿದ್ದಾರೆ.
'ರೇಣುಕಾಸ್ವಾಮಿ ಕೊಲೆ ಕೇಸ್ ನಂತೆ ಇದೂ ಆಗತ್ತೆ..' ಎಂದು ವಿಡಿಯೋ ಮಾಡಿದ್ದಲ್ಲದೆ, 'ಎ1 ಹೇಮಂತ ಎ2 ನಾನು..' ಎಂದು ವಿಡಿಯೋ ಮಾಡಿದ್ದಾರೆ. 8-10 ಯುವಕರಿಂದ ಬಟ್ಟೆ ಬಿಚ್ಚಿ ಹಲ್ಲೆ ಮಾಡಲಾಗಿದೆ. ಯುವಕನನ್ನ ಬೆತ್ತಲೆ ಮಾಡಿ ಕೀಚಕರು ಹಲ್ಲೆ ಮಾಡಿದ್ದಲ್ಲದೆ, ಆತನ ಮರ್ಮಾಂಗ ತುಳಿದು ವಿಕೃತಿ ಮರೆದಿದ್ದಾರೆ.
ಹುಡುಗಿ ವಿಚಾರಕ್ಕೆ ಹಲ್ಲೆ: ಹುಡುಗಿ ವಿಚಾರಕ್ಕೆ ಕುಶಾಲ್ ಎನ್ನುವ ವಿದ್ಯಾರ್ಥಿಯ ಮೇಲೆ ಹಲ್ಲೆ ಮಾಡಲಾಗಿದೆ. ಕಾಲೇಜಿಗೆ ಹೋಗುವಾಗ ಕುಶಾಲ್ ಹಾಗೂ ಯುವತಿ ಮಧ್ಯೆ ಪ್ರೀತಿ ಮೂಡಿತ್ತು.ಎರಡು ವರ್ಷದ ಪ್ರೀತಿ ಕೆಲ ತಿಂಗಳ ಹಿಂದೆ ಮುರಿದು ಬಿದ್ದಿತ್ತು. ಈ ವೇಳೆ ಯುವತಿಗೆ ಬೇರೊಂದು ಹುಡುಗನ ಪರಿಚಯವಾಗಿತ್ತು. ಇದನ್ನು ಸಹಿಸಲಾಗದ ಕುಶಾಲ್ ಯುವತಿಗೆ ಅಶ್ಲೀಲ ಮೆಸೆಜ್ ಮಾಡಿದ್ದ. ಯುವತಿ ತನ್ನ ಗೆಳೆಯ ಹಾಗೂ ಸ್ನೇಹಿತರ ಜೊತೆ ಸೇರಿ ಕಿಡ್ನಾಪ್ ಹಾಗೂ ಹಲ್ಲೆ ಪ್ಲಾನ್ ಮಾಡಿದ್ದಾರೆ. ಅದರಂತೆ ಕೂತು ಬಗೆ ಹರಿಸಿಕೊಳ್ಳುವುದಾಗಿ ಕರೆಸಿ ಕಾರ್ ನಲ್ಲಿ ಕಿಡ್ನಾಪ್ ಮಾಡಲಾಗಿದೆ. ನಿರ್ಜನ ಪ್ರದೇಶಕ್ಕೆ ಕೆರದೊಯ್ದು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.
ಯುವಕನ ಮರ್ಮಾಂಗ ತುಳಿದು, ಬಟ್ಟೆ ಬಿಚ್ಚಿ ವಿಡಿಯೋ ಮಾಡುವ ಮೂಲಕ ಹಲ್ಲೆ ಮಾಡಲಾಗಿದೆ. ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಕೂಡ ಹಾಕಲಾಗಿದೆ. ಘಟನೆ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೇಮಂತ್, ಯಶ್ವಂತ್, ಶಿವಶಂಕರ್, ಶಶಾಂಕ್ ಗೌಡ ಎನ್ನುವ ಆರೋಪಿಗಳನ್ನು ಬಂಧಿಸಲಾಗಿದೆ.