
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಜನರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಲು ಮೆಟ್ರೋ, ಬಿಎಂಟಿಸಿ, ಒಲಾ, ಊಬರ್, ರಾಪಿಡೋ ಸೇರಿದಂತೆ ವಿವಿಧ ಸಾರಿಗೆಗಳನ್ನು ಬಳಕೆ ಮಾಡಲಾಗುತ್ತದೆ. ಇಂದು ಹೆಚ್ಚಿನ ಜನರು ಆಪ್ ಆಧಾರಿತ ಸಾರಿಗೆ ಸೇವೆ ಬಳಕೆ ಮಾಡುತ್ತಿದ್ದಾರೆ. ಮನೆಯಲ್ಲಿಯೇ ಕುಳಿತು ವಾಹನಗಳನ್ನು ಬುಕ್ ಮಾಡಬಹುದು. ನೀವಿದ್ದಲ್ಲಿಗೆ ಬಂದು ಪಿಕ್ ಮಾಡಿ ಸೂಚಿಸಿದ ಸ್ಥಳಕ್ಕೆ ನಿಮ್ಮನ್ನು ತಲುಪಿಸಲಾಗುತ್ತದೆ.
ಸಾಮಾನ್ಯವಾಗಿ ಆಟೋ, ಕಾರ್ ಅಥವಾ ಬೈಕ್ ಬುಕ್ ಮಾಡಿದಾಗ ಆಪ್‌ನಲ್ಲಿ ಪ್ರಯಾಣಿಕರಿಗೆ ಚಾಟ್ ಬಾಕ್ಸ್ ಓಪನ್ ಆಗುತ್ತದೆ. ತಮ್ಮನ್ನು ಕರೆದುಕೊಂಡು ಹೋಗಲು ಬರುವ ವಾಹನದ ಸಂಖ್ಯೆ, ಚಾಲಕನ ಹೆಸರು ಪ್ರಯಾಣಿಕರಿಗೆ ತಿಳಿಯುತ್ತದೆ. ವಾಹನ ತಲುಪುವಲ್ಲಿ ವಿಳಂಬವಾದ್ರೆ ಚಾಲಕ ಅಥವಾ ಪ್ರಯಾಣಿಕರು ಚಾಟ್ ಬಾಕ್ಸ್ ಮೂಲಕ ಸಂದೇಶ ಕಳುಹಿಸುವ ಆಯ್ಕೆ ನೀಡಲಾಗುತ್ತದೆ. ಒಂದು ವೇಳೆ ಟ್ರಾಫಿಕ್‌ನಲ್ಲಿ ಸಿಲುಕಿದ್ರೆ, ಚಾಲಕರು ತಾವು ಬರುತ್ತಿರುವ ಮಾಹಿತಿಯನ್ನ ಮುಂಚಿತವಾಗಿಯೇ ನೀಡುತ್ತಾರೆ. ನೇರವಾಗಿ ಕರೆ ಮಾಡುವ ಮೂಲಕವೂ ಕೆಲ ಚಾಲಕರು ಮಾಹಿತಿ ನೀಡುತ್ತಾರೆ.
ಇದೀಗ ಚಾಲಕ ಮತ್ತು ಪ್ರಯಾಣಿಕರ ನಡುವಿನ ಸಂಭಾಷಣೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನೆಟ್ಟಿಗರೊಬ್ಬರು ರೆಡ್ಡಿಟ್‌ನಲ್ಲಿ ಕ್ಯಾಬ್ ಬುಕ್ ಮಾಡಿದಾಗ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ. ಹಾಗೆ ಊಬರ್ ಡ್ರೈವರ್ ತಮಗೆ ಕಳುಹಿಸಿದ ಸಂದೇಶದ ಸ್ಕ್ರೀನ್‌ಶಾಟ್ ಸಹ ಶೇರ್ ಮಾಡಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ನಾನು ಕ್ಯಾಬ್ ಬುಕ್ ಮಾಡಿದಾಗ ಎಂದಿನಂತೆ ಚಾಲಕನಿಗೆ 'ನೀವು ಬರುತ್ತಿದ್ದೀರಾ?' ಎಂಬ ಮೆಸೇಜ್ ಕಳುಹಿಸುತ್ತೇನೆ. ಆದ್ರೆ ಈ ಚಾಲಕನಿಂದ ಮೆಸೇಜ್ ನೋಡಿ ನನಗೆ ಒಂದು ಕ್ಷಣ ಅಚ್ಚರಿಯಾಯ್ತು. ನಿಮಗೆ ಅರ್ಜೆಂಟ್ ಇದ್ರೆ ಬೇರೆ ಕ್ಯಾಬ್ ಬುಕ್ ಮಾಡ್ಕೊಳ್ಳಿ, ಇದು ಪ್ಲೇನ್ ಅಲ್ಲ ಎಂಬ ಸಂದೇಶ ಕಳುಹಿಸಿ ಬುಕಿಂಗ್ ಕ್ಯಾನ್ಸಲ್ ಮಾಡಿದರು. ಪ್ರತಿಬಾರಿ ಬುಕಿಂಗ್ ಸಂದರ್ಭದಲ್ಲಿಯೂ ನೀವು ಬರುತ್ತಿದ್ದೀರಾ ಕೇಳುತ್ತೇವೆ. ಆದ್ರೆ ಈ ಚಾಲಕ ಪ್ರತಿಕ್ರಿಯೆ ಚೆನ್ನಾಗಿರಲಿಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Vande Mataram ಎರಡು ಪದಗಳ ಅರ್ಥ ವಿವರಿಸಿದ ಇಕ್ರಾ ಹಸನ್: ಸಂಸದೆಯ ಮಾತು ವೈರಲ್
ರೆಡ್ಡಿಟ್‌ನಲ್ಲಿ ಹಂಚಿಕೊಂಡಿರುವ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬೆಂಗಳೂರಿನಲ್ಲಿ ಟ್ರಾಫಿಕ್ ಸಾಮಾನ್ಯ. ಚಾಲಕರು ನಿಗದಿತ ಸ್ಥಳ ತಲುಪಲು ಕೆಲವೊಮ್ಮೆ ವಿಳಂಬವಾಗುತ್ತದೆ. ಆದ್ರೆ ಈ ರೀತಿಯಾಗಿ ಚಾಲಕರು ವರ್ತಿಸೋದು ಅಥವಾ ಸಂದೇಶ ಕಳುಹಿಸೋದು ತಪ್ಪು ಎಂದು ನೆಟ್ಟಿಗರು ಹೇಳಿದ್ದಾರೆ. ಮತ್ತೋರ್ವ ನೆಟ್ಟಿಗ, ನಾನು ಒಮ್ಮೆ ಈ ರೀತಿ ಮೆಸೇಜ್ ಕಳುಹಿಸಿದ್ದಾಗ ಇದು ಹೆಲಿಕಾಪ್ಟರ್ ಅಲ್ಲ ಅಂದಿದ್ರು ಅಂತ ಕಮೆಂಟ್ ಮಾಡಿದ್ದಾರೆ. ಮತ್ತೊಂದೆಡೆ ಕೆಲವರು ಎರಡ್ಮೂರು ಆಪ್‌ಗಳಲ್ಲಿ ವಾಹನ ಬುಕ್ ಮಾಡಿ, ಮೊದಲು ಬರುವ ವಾಹನ ಹತ್ತಿಕೊಂಡು ಇನ್ನುಳಿದ ಬುಕಿಂಗ್ ಕ್ಯಾನ್ಸಲ್ ಮಾಡ್ತಾರೆ. ಇದರಿಂದ ದೂರದಿಂದ ಬಂದಿರುವ ಚಾಲಕರು ನಷ್ಟಕ್ಕೆ ಒಳಗಾಗುತ್ತಾರೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ಇದನ್ನೂ ಓದಿ: ಪ್ರದರ್ಶನದ ವೇಳೆ ಝೂನಲ್ಲಿ ಆರೈಕೆ ಮಾಡ್ತಿದ್ದವರ ಮೇಲೆಯೇ ಕರಡಿ ಅಟ್ಯಾಕ್: ವೀಡಿಯೋ