ಮಂಗಳಮುಖಿಯರಿಂದ ಯುವಕನ ಅಪಹರಣ; ಶಸ್ತ್ರಚಿಕಿತ್ಸೆ ನಡೆಸಿ ಪರಿವರ್ತನೆಗೆ ಯತ್ನ?

Published : Dec 09, 2025, 07:51 AM IST
Youth Kidnap

ಸಾರಾಂಶ

ಯುವಕನನ್ನು ಅಪಹರಿಸಿ ತಮಿಳುನಾಡಿನ ಮಧುರೈಗೆ ಕರೆದುಕೊಂಡು ಹೋಗಿತ್ತು. ಮಧುರೈನಲ್ಲಿ ಯುವಕನಿಗೆ ಶಸ್ತ್ರಚಿಕಿತ್ಸೆ ನಡೆಸಿ ಲಿಂಗ ಪರಿವರ್ತನೆಗೆ ಮಂಗಳಮುಖಿಯರ ತಂಡ ಮುಂದಾಗಿತ್ತು ಎಂಬ ಆರೋಪ ಕೇಳಿ ಬಂದಿದೆ.

ಬೆಂಗಳೂರು: ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳಮುಖಿಯರಿಂದ ಅಪಹರಣಕ್ಕೊಳಗಾಗಿದ್ದ 25 ವರ್ಷದ ಯುವಕನನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಶುಕ್ರವಾರ ಮಂಗಳಮುಖಿಯರ ತಂಡ ಯುವಕನನ್ನು ಅಪಹರಿಸಿ ತಮಿಳುನಾಡಿನ ಮಧುರೈಗೆ ಕರೆದುಕೊಂಡು ಹೋಗಿತ್ತು. ಮಧುರೈನಲ್ಲಿ ಯುವಕನಿಗೆ ಶಸ್ತ್ರಚಿಕಿತ್ಸೆ ನಡೆಸಿ ಲಿಂಗ ಪರಿವರ್ತನೆಗೆ ಮಂಗಳಮುಖಿಯರ ತಂಡ ಮುಂದಾಗಿತ್ತು ಎಂಬ ಆರೋಪ ಕೇಳಿ ಬಂದಿದೆ. ಮಧುರೈನಿಂದ ರಕ್ಷಿಸಿ ಬೆಂಗಳೂರಿಗೆ ಯುವಕನನ್ನು ಕರೆದುಕೊಂಡು ಬರಲಾಗಿದೆ.

ಮಂಗಳಮುಖಿಯರು ಎಸ್ಕೇಪ್

ಮಧುರೈಗೆ ತೆರಳಿದ್ದಾಗ ಯುವಕ ಮಹಿಳೆಯರ ವೇಷದಲ್ಲಿದ್ದನು. ಈ ಹಿನ್ನೆಲೆ ಲಿಂಗ ಪರಿವರ್ತನೆ ನಡೆದಿದೆಯಾ ಎಂಬುದರ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಯುವಕನನ್ನು ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಂಗಳಮುಖಿಯರ ತಂಡ ಎಸ್ಕೇಪ್ ಆಗಿದ್ದು, ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ. ಯುವಕನಿಂದಲೂ ಹೇಳಿಕೆ ಪಡೆದುಕೊಳ್ಳಲು ಪೊಲೀಸರು ಮುಂದಾಗಿದ್ದಾರೆ.

ಅಪಹರಣಕ್ಕೊಳಗಾಗಿರುವ ಯುವಕ ಬೆಂಗಳೂರಿನ ಮಸೀದಿಯೊಂದರ ಮೌಲಾನ ಅವರ ಮಗನಾಗಿದ್ದಾನೆ. ಮಗ ಕಾಣೆಯಾದ ಹಿನ್ನೆಲೆ ಮೌಲಾನಾ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ಸಂಬಂಧ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್ ಡಿಕ್ಕಿ: ಚಿಕಿತ್ಸೆ ಫಲಿಸದೆ ಪುಟ್ಟ ಬಾಲಕಿ ಸಾವು

ರಸ್ತೆ ದಾಟುತ್ತಿದ್ದ ವೇಳೆ ಮೋಟಾರ್ ಬೈಕ್ ಡಿಕ್ಕಿಯಾಗಿ ಗಾಯಗೊಂಡಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಘಟನೆ ಸಮೀಪದ ದಳವಾಯಿ ಕೋಡಿಹಳ್ಳಿಯಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ. ಗ್ರಾಮದ ನವೀನ್ ಕುಮಾರ್ ಅವರ ಪುತ್ರಿ ದಿಕ್ಷೀತಾ (8) ಮೃತ ಬಾಲಕಿ.

ಇದನ್ನೂ ಓದಿ: ಅಂದು ರಿಕ್ಷಾ ನಿಲ್ಲಿಸದೆ ಅವಮಾನ ಅನುಭವಿಸಿದ್ದ ಮಂಗಳಮುಖಿ ಈಗ 4 ರಿಕ್ಷಾಗಳ ಒಡತಿ!

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ದಿಕ್ಷೀತಾ ಡಿ.3ರಂದು ಬುಧವಾರ ಶಾಲೆ ಮುಗಿಸಿ ಮನೆಗೆ ಮರಳಲು ರಸ್ತೆ ದಾಟುತ್ತಿದ್ದಾಗ ಹಲಗೂರು ಕಡೆಯಿಂದ ಕನಕಪುರ ಕಡೆಗೆ ತೆರಳುತ್ತಿದ್ದ ಮೋಟಾರ್ ಬೈಕ್ ಡಿಕ್ಕಿಯಾಗಿದೆ. ಗಾಯಗೊಂಡ ದಿಕ್ಷೀತಾ ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಭಾರತದಲ್ಲಿ 10 ವರ್ಷಗಳಿಂದ ನೆಲೆಸಿದ್ದ ನೇಹಾ ಬಾಂಗ್ಲಾದೇಶದ ಅಬ್ದುಲ್ಲಾ ಎಂದು ಪತ್ತೆ

PREV
Read more Articles on
click me!

Recommended Stories

ಡ್ರಗ್‌ ಪೆಡ್ಲರ್‌ಗಳಿಗೆ ಬೆಂಗಳೂರೇ ದೊಡ್ಡ ಟಾರ್ಗೆಟ್‌: ಚಾಕೋಲೆಟ್‌, ಕಾಫಿ ಪುಡಿ ಹೆಸರಲ್ಲಿ ಡ್ರಗ್ಸ್‌ ಸಾಗಾಟ
ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು