ತುಂಗಭದ್ರಾ ನೀರು ಬಿಡದಿರುವುದೇ ಅಕ್ಕಿ ಬೆಲೆ ಹೆಚ್ಚಲು ಕಾರಣ, ಸೋನಾ ಮಸೂರಿ ಬೆಲೆ ಕೆಜಿಗೆ 150 ಆಗುವ ಆತಂಕ!

Published : Nov 06, 2026, 09:49 AM IST
TB Dam and Rice

ಸಾರಾಂಶ

ರಾಜ್ಯದಲ್ಲಿ ತುಂಗಭದ್ರಾ ಅಣೆಕಟ್ಟೆಯಿಂದ ಭತ್ತದ ಬೆಳೆಗೆ ನೀರು ಬಿಡದ ಕಾರಣ ಅಕ್ಕಿ ಬೆಲೆ ಗಗನಕ್ಕೇರುತ್ತಿದೆ. ಹಳೆಯ ಭತ್ತವನ್ನೇ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದರಿಂದ ಸೋನಾ ಮಸೂರಿ ಸೇರಿದಂತೆ ವಿವಿಧ ಅಕ್ಕಿಗಳ ದರ ಶೇ.35ರಷ್ಟು ಹೆಚ್ಚಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು (ನ.6): ರಾಜ್ಯದಲ್ಲಿ ಒಂದೆಡೆ ಹಾಲು, ಮೊಸರು, ಬಸ್ ಪ್ರಯಾಣ ದರ ಹೆಚ್ಚುತ್ತಿದ್ದರೆ, ಮತ್ತೊಂದೆಡೆ ಅಕ್ಕಿಯ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೆ ಏರುತ್ತಿದೆ. ಇದಕ್ಕೆ ಪ್ರಮುಖ ಕಾರಣ ತುಂಗಭದ್ರಾ ಅಣೆಕಟ್ಟೆಯಿಂದ ಭತ್ತದ ಬೆಳೆಗೆ ನೀರು ಬಿಡದೆ ಸರ್ಕಾರ ಕಳ್ಳಾಟ ನಡೆಸುತ್ತಿರುವುದೇ ಪರೋಕ್ಷ ಕಾರಣ ಎಂದು ವ್ಯಾಪಾರಿಗಳು ಆರೋಪಿಸಿದ್ದಾರೆ. ತುಂಗಭದ್ರಾ ನಾಲೆಯಲ್ಲಿ ಸದ್ಯದ ಸ್ಥಿತಿಯಲ್ಲಿ ನೀರು ತುಂಬಿದ್ದರೂ ಸರ್ಕಾರ ಭತ್ತದ ಬೆಳೆಗೆ ನೀರು ಬಿಡದೆ ಸ್ಥಗಿತಗೊಳಿಸಿದೆ. ಈ ಕಾರಣದಿಂದ ಕಳೆದ ವರ್ಷ ಬೆಳೆದ ಭತ್ತವನ್ನು ಶೇಖರಿಸಿರುವ ಅಕ್ಕಿ ಗಿರಣಿಗಳು ಹಾಗೂ ರೈತರು ಇರುವ ಭತ್ತವನ್ನೇ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಆದ್ದರಿಂದಲೇ ಅಕ್ಕಿ ಬೆಲೆ ಏರಿಕೆಗೆ ಮತ್ತೊಂದು ಕಾರಣವಾಗಿದೆ ಎಂದು ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಮೂರು ತಿಂಗಳ ಹಿಂದೆ 1 ಕೆಜಿಗೆ 40 ರುಪಾಯಿ ಇದ್ದ ಸೋನಾ ಮಸೂರಿ ಅಕ್ಕಿಗೆ ಪ್ರಸ್ತುತ 75 ರುಪಾಯಿ, ಆರ್ ಎನ್ ಆರ್ 80 ರುಪಾಯಿ, ಎಚ್ ಎಂಟಿ 85 ರುಪಾಯಿ, ಜೀರಾ 96 ರುಪಾಯಿಗೆ ಏರಿಕೆಯಾಗಿವೆ.

10 ತಿಂಗಳು ಅಕ್ಕಿ ಗಿರಣಿಗೆ ಬರಲ್ಲ

ಇದು ಶೇ.35ರಷ್ಟು ಏರಿಕೆಯಾಗಿದ್ದು, ಇನ್ನೂ 10 ತಿಂಗಳವರೆಗೆ ಈಗ ಇರುವ ಭತ್ತವನ್ನೇ ಮಾರಾಟ ಮಾಡುವುದರಿಂದ ಬೆಲೆ ಏರಿಕೆಗೆ ಕಾರಣವಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಸೋನಾ ಮಸೂರಿ ಸೇರಿ ಇತರೆ ಅಕ್ಕಿಗಳ ಬೆಲೆ ಕೆಜಿಗೆ 150 ರುಪಾಯಿ ತಲುಪುವ ಆತಂಕ ಎದುರಾಗಿದೆ. ಬೆಂಗಳೂರಿನ ಯಶವಂತಪುರ ಹಾಗೂ ಹುಬ್ಬಳ್ಳಿ ಆರ್ ಎಂಸಿಗಳು ಪ್ರಮುಖ ಅಕ್ಕಿ ಸರಬರಾಜು ಮಾರುಕಟ್ಟೆಗಳಾಗಿವೆ. ಇಲ್ಲಿಗೆ ರಾಜ್ಯದ ಸಿಂಧನೂರು, ಕಾರಟಗಿ, ಗಂಗಾವತಿ, ದಾವಣಗೆರೆ, ಮಲೆಬೆನ್ನೂರು, ಸಿಂಧನೂರು, ಕೊಪ್ಪಳ ಸೇರಿದಂತೆ ವಿವಿಧ ಕಡೆಗಳಿಂದ ಬರುವ ಅಕ್ಕಿಯನ್ನು ಮಾರಾಟ ಮಾಡಲಾಗುತ್ತದೆ.

ಈ ಪ್ರದೇಶಗಳಲ್ಲಿ ಬೆಳೆಯುತ್ತಿದ್ದ ಭತ್ತದ ಬೆಳೆ ತುಂಗಭದ್ರಾ ಅಣೆಕಟ್ಟೆಯ ನೀರನ್ನು ಅವಲಂಬಿಸಿವೆ. ಕಳೆದ ಜೂನ್ ತಿಂಗಳಲ್ಲಿ ಈ ಭಾಗಗಳಲ್ಲಿ ಮಳೆ ಆಶ್ರಿತ ಭತ್ತದ ಬೆಳೆ ಬೆಳೆದಿದ್ದು, ಈಗಾಗಲೇ ಕಟಾವಿಗೆ ಬಂದಿದೆ. ಈಗ ಬಂದಿರುವ ಭತ್ತ ಮಾರುಕಟ್ಟೆಗೆ ಬಂದರೂ ಅದು ಪ್ರಸ್ತುತ ಬೇಡಿಕೆ ಈಡೇರಿಸಲು ಸಾಧ್ಯವಾಗುವುದಿಲ್ಲ.

ಮುಂದಿನ ಆರು ತಿಂಗಳು ಹಾಗೂ ಅದಾದ ನಂತರ ನಾಲ್ಕು ತಿಂಗಳು ಒಟ್ಟು 10 ತಿಂಗಳು ಭತ್ತ ಅಕ್ಕಿ ಗಿರಣಿಗಳಿಗೆ ಬರುವುದಿಲ್ಲ. ಆದ್ದರಿಂದ ಈಗ ಗೋದಾಮಿನಲ್ಲಿ ಇರುವ ಭತ್ತವನ್ನೇ ಅಕ್ಕಿ ಮಾಡಿ ಮಾರಾಟ ಮಾಡಬೇಕಾಗಿದೆ. ಆದ್ದರಿಂದಲೇ, ಅಕ್ಕಿಗಿರಣಿಗಳು ಬೆಲೆ ಏರಿಕೆ ಮಾಡಿವೆ ಎಂದು ಹುಬ್ಬಳ್ಳಿ ಎಪಿಎಂಸಿ ಆಹಾರ ಧಾನ್ಯ ವರ್ತಕರ ಸಂಘದ ಅಧ್ಯಕ್ಷ ಚನ್ನು ಹೊಸಮನಿ ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯಕ್ಕೆ ಆಂಧ್ರಪ್ರದೇಶದಿಂದಲೂ ಅಕ್ಕಿ ಸರಬರಾಜು ಮಾಡಲಾಗುತ್ತಿದ್ದರೂ ಇಲ್ಲಿನ ಮಳೆ ಕೊರತೆ, ಭತ್ತದ ಬೆಳೆ ಬೆಳೆಯದೇ ಇರುವುದನ್ನು ಬಂಡವಾಳ ಮಾಡಿಕೊಂಡಿರುವ ಅಲ್ಲಿನ ಅಕ್ಕಿ ಸರಬರಾಜುದಾರರು ಬೆಲೆ ಏರಿಕೆ ಮಾಡುತ್ತಿದ್ದಾರೆ. ಖರೀದಿಸಬೇಕಾಗಿರುವುದು ರಾಜ್ಯದ ಜನರಿಗೆ ಅನಿವಾರ್ಯವಾಗಿದೆ ಎಂದು ಅವರು ವಿವರಿಸಿದರು.

PREV
Read more Articles on
click me!

Recommended Stories

ದೀಪಾವಳಿ ಹಬ್ಬದ ಪ್ರಯುಕ್ತ ಬೆಂಗಳೂರು-ಬೆಳಗಾವಿ ನಡುವೆ ವಿಶೇಷ ರೈಲು, ದಿನ, ಸಮಯ ಎಲ್ಲೆಲ್ಲಿ ನಿಲುಗಡೆ? ಮಾಹಿತಿ ಇಲ್ಲಿದೆ
ಖಾಸಗಿ ವಾಹನಗಳಿಗೆ ಕೋಟಿಗಟ್ಟಲೆ ಮೇಲ್ಸೇತುವೆ, ಬಡವರ ಬಸ್‌ಗೆ ಭಾರಿ ದರ: ಸರ್ಕಾರದ ಸಾರಿಗೆ ನೀತಿಗೆ ಪ್ರಯಾಣಿಕರ ವೇದಿಕೆ ತೀವ್ರ ಖಂಡನೆ