ಮಗಳ ಮದ್ವೆಗೆ ಬೆಂಗಳೂರು ಸೈಟ್ ಮಾರಾಟ, 20 ವರ್ಷ ಬಳಿಕ ಖರೀದಿದಾರರಿಗೆ ತಲೆನೋವಾದ ಅದೇ ಮಹಿಳೆ

Published : Jun 21, 2025, 09:30 AM IST
Bengaluru land

ಸಾರಾಂಶ

2006ರಲ್ಲಿ ಮಗಳ ಮದುವೆಗೆ ಅಪ್ಪ ಬೆಂಗಳೂರಿನಲ್ಲಿದ್ದ ಸೈಟ್ ಮಾರಾಟ ಮಾಡಿದ್ದಾರೆ. ಸರಿಸುಮಾರು 20 ವರ್ಷ ಬಳಿಕ ಅದೇ ಮಗಳು ಖರೀದಿದಾರರಿಗೆ ತಲೆನೋವಾದ ಘಟನೆ ನಡೆದಿದೆ. ನಿವೇಶನ ಸೇರಿದಂತೆ ಭೂಮಿ ಖರೀದಿಸುವವರು ಈ ಸ್ಟೋರಿ ತಿಳಿದುಕೊಳ್ಳಲೇಬೇಕು.

ಬೆಂಗಳೂರು(ಜೂ.21) ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸ್ವಂತ ಮನೆ ಇರಬೇಕು, ಸೈಟ್ ಇರಬೇಕು ಅನ್ನೋದು ಬಹುತೇಕರ ಕನಸು. ಆದರೆ ಇದು ಕೆಲವರಿಗೆ ಮಾತ್ರ ನನಸಾಗುತ್ತದೆ. ಬೆಂಗಳೂರಿನಲ್ಲಿ ಸೈಟ್ ಖರೀದಿ, ಮನೆ ಖರೀದಿ ಅತ್ಯಂತ ದುಬಾರಿ. ಆದರೆ ಮನೆ, ಸೈಟ್ ಖರೀದಿಸುವಾಗ ಎರಡೆರಡು ಬಾರಿ ಪರಿಶೀಲಿಸಿದರೂ ಸಾಲದು ಅನ್ನೋದು ಈ ಪ್ರಕರಣ ಸಾಬೀತು ಮಾಡಿದೆ. ಸರಿಸುಮಾರು 20 ವರ್ಷಗಳ ಹಿಂದೆ ಅಂದರೆ 2006ರಲ್ಲಿ ಮಾರಾಟಕ್ಕಿಟ್ಟಿದ್ದ ಸೈಟ್ ಖರೀದಿಸಿದ್ದಾರೆ. ಮಗಳ ಮದುವೆ ಮಾಡಿಸಲು ಹಣ ಸಾಲುತ್ತಿಲ್ಲ ಅನ್ನೋ ಕಾರಣಕ್ಕೆ ಈ ಸೈಟ್ ಮಾರಾಟ ಮಾಡಲಾಗಿತ್ತು. ಸೈಟ್ ಮಾರಾಟವಾಗಿದೆ. ಮಗಳ ಮದುವೆಯಾಗಿದೆ. ಎಲ್ಲವೂ ಸುಖಾಂತ್ಯ. ಆದರೆ 20 ವರ್ಷಗಳ ಬಳಿಕ ಅದೇ ಮಗಳು ಇದೀಗ ಆಸ್ತಿ ಖರೀದಿಸಿದವರಿಗೆ ತಲೆನೋವಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಸೈಟ್ ಖರೀದಿದಾರರಿಗೆ ಲೀಗಲ್ ನೋಟಿಸ್ ಕಳುಹಿಸಿದ ಮಹಿಳೆ

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಈ ಸೈಟ್‌ 2006ರಲ್ಲಿ ಮಾರಾಟವಾಗಿದೆ. ಅಂದು ಮಾರಾಟ ಮಾಡುವಾಗ ಮಗಳ ಮದುವೆ ಇದೆ. ಹಣದ ಅವಶ್ಯಕತೆ ಕಾರಣದಿಂದ ಮಾರಾಟ ಮಾಡುತ್ತಿರುವುದಾಗಿ ಹೇಳಿದ್ದಾರೆ. ಸೈಟ್ ಖರೀದಿಸಿದ ವ್ಯಕ್ತಿ ಬಳಿಕ ಮನೆ ನಿರ್ಮಿಸಿದ್ದರೆ. ಇದೀಗ ಈ ಖರೀದಿದಾರನ ಪುತ್ರ ಹಾಗೂ ಮಕ್ಕಳು ಈ ಮನೆಯಲ್ಲಿ ವಾಸವಿದ್ದಾರೆ. ಇದೀಗ ಈ ಮನೆಯಲ್ಲಿರುವ ಸೈಟ್ ಖರೀದಿದಾರನ ಪುತ್ರ ರೆಡ್ಡಿಟ್‌ನಲ್ಲಿ ತಾನು ಅನುಭವಿಸುತ್ತಿರುವ ಹಿಂಸೆ, ಯಾತನೆಯನ್ನು ಬಿಚ್ಚಿಟ್ಟಿದ್ದಾರೆ.

2006ರಲ್ಲಿ ಸೈಟ್ ಖರೀದಿಸುವ ವೇಳೆ ಮಾರಾಟಗಾರರಿಂದ ನೇರವಾಗಿ ಖರೀದಿಸಲಾಗಿದೆ. ಯಾವುದೇ ಪವರ್ ಆಫ್ ಅಟಾರ್ನಿ ಇಲ್ಲ. ಆಸ್ತಿ ಖರೀದಿಸಿ ಬಳಿಕ ದಾಖಲೆ ಪತ್ರಗ ವರ್ಗಾವಣೆ, ಡಾಕ್ಯುಮೆಂಟೇಶನ್, ಖಾತಾ ಎಲ್ಲವೂ ಆಗಿದೆ. ಖರೀದಿಸಿದ ಬಳಿಕ ಇಲ್ಲೀವರೆಗೂ ಕಂದಾಯ ಸೇರಿದಂತೆ ಎಲ್ಲಾ ತೆರಿಗೆಗಳನ್ನು ಕಟ್ಟಲಾಗುತ್ತಿದೆ. ಸದ್ಯ ಸೈಟ್ ಖರೀದಿಸಿದ ಮಗ ತೆರಿಗೆ ಸೇರಿದಂತ ಇತರ ಪಾವತಿಗಳನ್ನು ಮಾಡುತ್ತಿದ್ದಾರೆ. ಇದೀಗ ಸೈಟ್ ಮಾರಾಟ ಮಾಡಿದವರ ಪುತ್ರಿ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಈ ಆಸ್ತಿ ಮಾರಾಟ ಮಾಡುವಾಗ ತನ್ನ ಬಳಿ ಕೇಳಿಲ್ಲ. ತನಗೆ ಅರಿವಿಲ್ಲದಂತೆ ಆಸ್ತಿ ಮಾರಾಟ ಮಾಡಿದ್ದಾರೆ. ಅಂದು ನಾನು ಅಪ್ರಾಪ್ತಳಲ್ಲ. ಹೀಗಾಗಿ ಆಸ್ತಿ ಖರೀದಿಸಿದವರು ತನಗೆ ಸೈಟ್ ಹಣ ನೀಡಬೇಕು ಎಂದು ಹೊಸ ವಾದ ಮುಂದಿಟ್ಟಿದ್ದಾರೆ.

ಕೋರ್ಟ್ ಹೊರಗಡೆ ಸೆಟ್ಲ್‌ಗ ಬೆದರಿಕೆ

ಈ ಮಹಿಳೆಯ ಲೀಗಲ್ ನೋಟಿಸ್‌ಗೆ ಈಕೆಯ ಸಹೋದರ ಕೂಡ ಸಾಥ್ ನೀಡಿದ್ದಾರೆ. ಅತ್ತ ಎಲ್ಲಾ ದಾಖಲೆ ಪತ್ರಗಳನ್ನು ಹಿಡಿದು ಖರೀದಿದಾರರ ಪುತ್ರ ಕೋರ್ಟ್ ಮೆಟ್ಟಿಲೇರಿದ್ದಾರೆ. ಇದು ಈ ಮಹಿಳೆ ಹಾಗೂ ಸಹೋದರನ ಮತ್ತಷ್ಟು ಕೆರಳಿಸಿದೆ. ಬೆಂಗಳೂರಿನಲ್ಲಿ ಈ ರೀತಿ ಹಲವು ಪ್ರಕರಣಗಳು ನಡೆದಿದೆ. ಆಸ್ತಿ ಖರೀದಿಸಿದವರು ಸೌಮ್ಯ ಸಭಾವದವರಾಗಿದ್ದರೆ, ಒಂದಷ್ಟು ಹಣ ಕೊಟ್ಟು ಸಮಸ್ಯೆ ಬಗೆಹರಿಸಿದ್ದಾರೆ. ಈ ಪ್ರಕರಣದಲ್ಲಿ ಮಹಿಳೆ ಹಾಗೂ ಆಕೆಯ ಸಹೋದರ ಕೋರ್ಟ್ ಹೊರಗಡೆ ಹಣದ ಮೂಲಕ ಈ ಸೆಟ್ಲೆಮೆಂಟ್ ಮಾಡಲು ಬಯಸುತ್ತಿದ್ದಾರೆ. ಖರೀದಿದಾರರಿಂದ ಒಂದಷ್ಟು ಲಕ್ಷ ರೂಪಾಯಿ ಪೀಕಲು ಮುಂದಾಗಿದ್ದಾರೆ ಎಂದು ರೆಡ್ಡಿಟ್‌ನಲ್ಲಿ ಸೈಟ್ ಖರೀದಿಸಿದ ಪುತ್ರ ಆರೋಪಿಸಿದ್ದಾರೆ. ಕೋರ್ಟ್ ಹೊರಗಡೆ ಸೆಟ್ಲಮೆಂಟ್ ಮಾಡುವಂತೆ ಬೆದರಿಕೆ ಹಾಕುತ್ತಿದ್ದಾರೆ. ನಮ್ಮಲ್ಲಿ ಸೇಲ್ ಡೀಡ್ ಸೇರಿದಂತೆ ಎಲ್ಲಾ ದಾಖಲೆಗಳಿವೆ. ನಾವು ಅಂದಿನ ಮಾರುಕಟ್ಟೆ ಬೆಲೆ ನೀಡಿ ಸೈಟ್ ಖರೀದಿಸಿದ್ದೇವೆ. ಇದೀಗ ಹಣ ಸುಲಿಗೆ ಮಾಡಲು, ಅವರ ಕುಟುಂಬದಲ್ಲಿನ ಸಮಸ್ಯೆ ಬಗೆಹರಿಸಿಕೊಳ್ಳಲು ಈ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ಪ್ರತಿಕ್ರಿಯೆ

ರೆಡ್ಡಿಟ್‌ನಲ್ಲಿ ಈ ಮಾಹಿತಿ ಹೊರಬೀಳುತ್ತಿದ್ದಂತೆ ಇದೀಗ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅವರ ಕುಟುಂಬದಲ್ಲಿನ ಮಗಳ ಪಾಲನ್ನು ಮದುವೆಗೆ ಮಾರಾಟ ಮಾಡಿ ಬಳಸಿಕೊಂಡಿದ್ದಾರೆ. ಇದೀಗ ಮಗಳು ಖರೀದಿದಾರರ ಬಳಿಯಿಂದ ಹಣ ಸುಲಿಗೆ ಮಾಡಲು ಮುಂದಾಗಿದ್ದಾರೆ. ಬೆಂಗಳೂರಿನಲ್ಲಿ ಈ ರೀತಿ ಸಾಮಾನ್ಯವಾಗಿ ನಡೆಯುತ್ತಿದೆ. ಇದಕ್ಕೆ ಜಗ್ಗಬಾರದು, ಕಾನೂನು ಹೋರಾಟ ಮುಂದುವರಿಸುವಂತೆ ಹಲವರು ಸೂಚಿಸಿದ್ದಾರೆ.

 

PREV
Read more Articles on
click me!

Recommended Stories

112 ಹುದ್ದೆ ನೇಮಕಾತಿ ಮುಂದುವರಿಕೆಗೆ ಕೆಪಿಎಸ್ಸಿಗೆ ನೀಡಿದ್ದ ಅನುಮತಿ ವಾಪಸ್!
ಬೆಂಗಳೂರು: ಸೈಬರ್ ವಂಚನೆ ತಡೆಗೆ ಎಐ ಅಸ್ತ್ರ ಪ್ರಯೋಗ