ಸ್ಟಿಂಗ್ ಕೇಸ್: ಸುದ್ದಿವಾಹಿನಿ ಮುಖ್ಯಸ್ಥನ ಮನೆ, ಕಚೇರಿಗೆ ಪೊಲೀಸರ ದಾಳಿ - ತನಿಖೆ ವೇಳೆ ಲಂಚಕ್ಕಾಗಿ ಬೇಡಿಕೆ

Sathish Kumar KH   | Kannada Prabha
Published : Nov 03, 2026, 08:27 AM IST
Bengaluru CCB Office

ಸಾರಾಂಶ

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ವಿಡಿಯೋ ಬಿಡುಗಡೆಯಾದ ಬೆನ್ನಲ್ಲೇ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಸಿದ್ದರಾಮಯ್ಯ ಅವರ ದೂರಿನ ಮೇರೆಗೆ ಖಾಸಗಿ ಸುದ್ದಿವಾಹಿನಿ ಮುಖ್ಯಸ್ಥನ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ.

ಬೆಂಗಳೂರು (ನ.03): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣ ಸಂಬಂಧ ಖಾಸಗಿ ಸುದ್ದಿವಾಹಿನಿ ಮುಖ್ಯಸ್ಥರ ಮನೆ ಹಾಗೂ ಕಚೇರಿ ಮೇಲೆ ಸಿಸಿಬಿ ಸೈಬರ್ ಕ್ರೈಂ ಠಾಣೆ ಪೊಲೀಸರು ದಾಳಿ ನಡೆಸಿ ಪರಿಶೀಲಿಸಿದ್ದಾರೆ.

ಕೊಡಿಗೇಹಳ್ಳಿಯಲ್ಲಿರುವ ಖಾಸಗಿ ಸುದ್ದಿವಾಹಿನಿ ಮುಖ್ಯಸ್ಥರ ಮನೆ ಹಾಗೂ ಯಶವಂತಪುರದ ಮತ್ತಿಕೆರೆ ಸಮೀಪದಲ್ಲಿರುವ ಅ‍ವರ ಕಚೇರಿ ಮೇಲೆ ಪೊಲೀಸರು ಶೋಧಿಸಿದ್ದಾರೆ. ಈ ವೇಳೆ ಕೆಲ ದಾಖಲೆಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ ಎನ್ನಲಾಗಿದೆ.

ಸ್ಟಿಂಗ್ ಆಪರೇಷನ್‌ ವಿಡಿಯೋಗಳನ್ನು ತಾವೇ ಮಾಡಿದ್ದಾಗಿ ಖಾಸಗಿ ಸುದ್ದಿವಾಹಿನಿ ಮುಖ್ಯಸ್ಥರು ಹೇಳಿದ್ದರು. ಅಲ್ಲದೆ ತಮ್ಮ ತೇಜೋವಧೆ ಕೃತ್ಯದಲ್ಲಿ ಖಾಸಗಿ ಸುದ್ದಿವಾಹಿನಿ ಮುಖ್ಯಸ್ಥರ ಪಾತ್ರವಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಸಿಸಿಬಿ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ. ಇನ್ನು ಪೊಲೀಸರು ತನಿಖೆ ನಡೆಸುತ್ತಿದ್ದ ವೇಳೆ ಅವರಿಗೆ ಲಂಚಕ್ಕಾಗಿ ಬೇಡಿಕೆ ಒಡ್ಡಿದ ಆರೋಪವೂ ಕೇಳಿಬಂದಿದೆ.

PREV
Read more Articles on
click me!

Recommended Stories

ಕಾಪಾಡಿ.., ಎಂದು ಅಂಗಡಿಯೊಳಗೆ ನುಗ್ಗಿ, ಚಿನ್ನದ ಸರ ಕಸಿದ ಪ್ರಭುರಾಜ್; ಕುತ್ತಿಗೆಗೆ ಚಾಕು ಹಿಡಿದು ಪರಾರಿಯಾಗಲು ಯತ್ನ!
ಬೆಸ್ಕಾಂ ವ್ಯಾಪ್ತಿಯ ಗೃಹಜ್ಯೋತಿ ಫಲಾನುಭವಿಗಳಿಗೆ ಶಾಕ್: ಬರೋಬ್ಬರಿ 1.42 ಲಕ್ಷ ಮಂದಿ ಯೋಜನೆಯಿಂದ ಔಟ್?!