ನೌಕರರನ್ನು ಕಾಲಲ್ಲಿ ತುಳಿದಿದ್ದ ಕೇಸ್‌: ಏಜೆನ್ಸಿ ನೋಂದಣಿ ರದ್ದು

By Kannadaprabha NewsFirst Published Oct 18, 2019, 7:43 AM IST
Highlights

ನೌಕರರನನ್ನು ನೆಲದ ಬೀಳಿಸಿ ಬೂಟು ಕಾಲಿನಿಂದ ಹಲ್ಲೆ ಮಾಡುತ್ತಿದ್ದ ಪ್ರಕರಣ ಸಂಬಂಧ ಬೆಂಗಳೂರು ಸೆಕ್ಯೂರಿಟಿ ಫೋರ್ಸ್‌ ಅಂಡ್‌ ಹೌಸ್‌ ಕೀಪಿಂಗ್‌ ಸರ್ವಿಸಸ್‌ ಏಜೆನ್ಸಿಯ ನೋಂದಣಿಯನ್ನು ರದ್ದು ಮಾಡಲಾಗಿದೆ. 

ಬೆಂಗಳೂರು [ಅ.18]: ಮಾಲೀಕನೇ ತನ್ನ ನೌಕರರನನ್ನು ನೆಲದ ಬೀಳಿಸಿ ಬೂಟು ಕಾಲಿನಿಂದ ಹಲ್ಲೆ ಮಾಡುತ್ತಿದ್ದ ಪ್ರಕರಣ ಸಂಬಂಧ ಬೆಂಗಳೂರು ಸೆಕ್ಯೂರಿಟಿ ಫೋರ್ಸ್‌ ಅಂಡ್‌ ಹೌಸ್‌ ಕೀಪಿಂಗ್‌ ಸರ್ವಿಸಸ್‌ ಏಜೆನ್ಸಿಯ ನೋಂದಣಿಯನ್ನು ಕಾರ್ಮಿಕ ಇಲಾಖೆ ರದ್ದು ಪಡಿಸಿದೆ.

ಈ ಸಂಬಂಧ ಸಂಸ್ಥೆಯ ನೋಂದಣಿ ರದ್ದು ಮಾಡಿರುವ ಬಗ್ಗೆ ಸಚಿವ ಎಸ್‌.ಸುರೇಶ್‌ಕುಮಾರ್‌ ತಮ್ಮ ಟ್ವೀಟರ್‌ ಖಾತೆಯಲ್ಲಿ ಹಾಕಿಕೊಂಡಿದ್ದಾರೆ. ಸದರಿ ಸಂಸ್ಥೆಯ ಸಿಇಒ ಸಲೀಂ ಖಾನ್‌ ಸಂಸ್ಥೆಯಲ್ಲಿ ಸೆಕ್ಯೂರಿಟಿ ಸೂಪರ್‌ವೈಸರ್‌ ಆಗಿದ್ದ ಫರೀಜುದ್ದೀನ್‌ ಲಷ್ಕರ್‌ ಎಂಬಾತನನ್ನು ನೆಲದ ಮೇಲೆ ಹಾಕಿಕೊಂಡು ಅಮಾನುಷವಾಗಿ ಬೂಟು ಕಾಲಿನಿಂದ ಹಲ್ಲೆ ಮಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ವಿಡಿಯೋ ಆಧರಿಸಿ ಸುದ್ದಿ ವಾಹಿನಿಗಳು ಸುದ್ದಿ ಪ್ರಸಾರ ಮಾಡಿದ್ದವು. ನೌಕರರನನ್ನು ಮನಸೋಇಚ್ಛೆ ಥಳಿಸಿದ ಈ ಸಿಇಒ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲಡೆಯಿಂದ ಒತ್ತಾಯ ಕೇಳಿ ಬಂದಿತ್ತು. ಈ ವಿಡಿಯೋ ಆಧರಿಸಿ ಎಚ್‌ಎಸ್‌ಆರ್‌ ಲೇಔಟ್‌ ಠಾಣೆ ಪೊಲೀಸರು ಸ್ವಯಂದೂರು ದಾಖಲಿಸಿಕೊಂಡು, ಆರೋಪಿ ಸಲೀಂ ಖಾನ್‌ನನ್ನು ಬಂಧಿಸಿದ್ದರು.

ಇದೀಗ ಈ ವಿಡಿಯೋ ಆಧರಿಸಿ ಕಾರ್ಮಿಕ ಇಲಾಖೆಯ ಹಿರಿಯ ಕಾರ್ಮಿಕ ನಿರೀಕ್ಷಕರು, ಸಂಸ್ಥೆಯ ನೋಂದಣಿಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ.

click me!