ಸಿಜೆ ರಾಯ್ ದುರಂತಕ್ಕೂ ಉದ್ಯಮಿಯ ಕಾರುಗಳ ನಂಬರ್‌ಗೂ ಇದೆ ಲಿಂಕ್, ಏನಿದು 0003?

Published : Feb 01, 2026, 03:43 PM IST
CJ Roy Car number

ಸಾರಾಂಶ

ಸಿಜೆ ರಾಯ್ ದುರಂತಕ್ಕೂ ಉದ್ಯಮಿಯ ಕಾರುಗಳ ನಂಬರ್‌ಗೂ ಇದೆ ಲಿಂಕ್, ಸಿಜೆ ರಾಯ್ ಕೆಲ ಕಾರುಗಳ ನಂಬರ್ 0003. ಈ ನಂಬರ್‌ಗಾಗಿ ಲಕ್ಷ ಲಕ್ಷ ರೂಪಾಯಿ ನೀಡುತ್ತಿದ್ದರು. ಇದೀಗ ಸಾವಿನಲ್ಲೂ ಪ್ರೀತಿಯ ನಂಬರ್ ಜೊತೆ ಅಂತಿಮ ಪಯಣ ಮಾಡಿದ್ದಾರೆ. 

ಬೆಂಗಳೂರು (ಫೆ.01) ರಿಯಲ್ ಎಸ್ಟೇಟ್ ಉದ್ಯಮಿ ಸಿಜೆ ರಾಯ್ ಸಾವು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಒಂದೆಡೆ ಐಟಿ ಅಧಿಕಾರಿಗಳು ಕಿರುಕುಳ ಬಗ್ಗೆ ಚರ್ಚೆ ಹಾಗೂ ಪ್ರಶ್ನೆಗಳು ಜೋರಾಗಿದ್ದರೆ, ಇತ್ತ ಎಲ್ಲಾ ಸವಾಲು ಎದುರಿಸಿದ್ದ ಸಿಜೆ ರಾಯ್‌ ಈ ನಿರ್ಧಾರ ತೆಗೆದುಕೊಂಡಿದ್ದೇಕೆ ಅನ್ನೋ ಅನುಮಾನಗಳು ಮೂಡಿದೆ. ಇದರ ನಡುವೆ ಸಿಜೆ ರಾಯ್ ಅಂತ್ಯಸಂಸ್ಕಾರ ನಡೆದಿದೆ. ಸಿಜೆ ರಾಯ್ ಅಂತಿಮ ಯಾತ್ರೆಯಲ್ಲಿ ಅವರ ನೆಚ್ಚಿನ ಕಾರುಗಳನ್ನು ಬಳಕೆ ಮಾಡಲಾಗಿದೆ. ಸಿಜೆ ರಾಯ್ ಕಾರುಗಳನ್ನು ಹೆಚ್ಚಾಗಿ ಪ್ರೀತಿಸುತ್ತಿದ್ದರು. ಕೋಟಿ ಕೋಟಿ ರೂಪಾಯಿ ಬೆಲೆಬಾಳುವ ಕಾರುಗಳು ರಾಯ್ ಬಳಿ ಇದೆ. ವಿಶೇಷ ಅಂದರೆ ಈ ಬಹುತೇಕ ಲಕ್ಷುರಿ ಕಾರುಗಳ ಬೆಲೆ 0003. ದುರಂತ ಅಂದರೆ ಸಿಜೆ ರಾಯ್ ಸಾವಿನಲ್ಲೂ ನೆಚ್ಚಿನ ನಂಬರ್ ಲಿಂಕ್ ಆಗಿದೆ.

ಏನಿದು 0003 ನಂಬರ್ ಸೀಕ್ರೆಟ್

ಸಿಜೆ ರಾಯ್ ಬಳಿ 12 ರೋಲ್ಸ್ ರಾಯ್ಸ್, ಬುಗಾಟಿ, ಲ್ಯಾಂಬೋರ್ಗಿನಿ ಸೇರಿದಂತೆ ಹಲವು ಐಷಾರಾಮಿ ಕಾರುಗಳಿವೆ. ಈ ಪೈಕಿ ಕೆಲ ಕಾರುಗಳಿಗೆ ಹೆಚ್ಚುವರಿ ಪಾವತಿ ಮಾಡಿ ತಮ್ಮ ಪ್ರೀತಿಯ ನಂಬರ್ 0003 ಖರೀದಿಸಿದ್ದಾರೆ. ಸಿಜೆ ರಾಯ್ ಅವರ ಎಲ್ಲಾ ಕಾರುಗಳ ನಂಬರ್ 0003. ಇದು ಸಿಜೆ ರಾಯ್ ಅವರ ನೆಚ್ಚಿನ ಮಾತ್ರವಲ್ಲ ಲಕ್ಕಿ ನಂಬರ್ ಆಗಿತ್ತು. ಹೀಗಾಗಿ ಸಿಜೆ ರಾಯ್ ಯಾವುದೇ ಕಾರು ಖರೀದಿಸಿದರೂ ನಂಬರ್ ಮಾತ್ರ 0003. ಸೀರಿಸ್ ಮಾತ್ರ ಬದಲಾಗುತ್ತಿತ್ತು. ಹಲವು ಬಾರಿ 0003 ನಂಬರ್‌ಗೆ ಭಾರಿ ಬೇಡಿಕೆ ಬಂದಾಗ ಹರಾಜಿನ ಮೂಲಕ ದುಬಾರಿ ಬೆಲೆ ನೀಡಿ ಖರೀದಿಸಿದ್ದಾರೆ. ಸಿಜೆ ರಾಯ್ ಲಕ್ಕಿ ನಂಬರ್ 0003 ಇದನ್ನು ಕೂಡಿಸಿದರೆ ಬರುವ ಸಂಖ್ಯೆ 3. ಇತ್ತ ಸಿಜೆ ರಾಯ್ ದುರಂತ ಅಂತ್ಯ ಕಂಡ ದಿನ ಜನವರಿ 30. ಈ ಸಂಖ್ಯೆಯನ್ನು ಕೂಡಿಸಿದರೆ ಬರುವ ಸಂಖ್ಯೆ 3. ತಮ್ಮ ನೆಚ್ಚಿನ ನಂಬರ್ ದಿನವೇ ಸಿಜೆ ರಾಯ್ ಸಾವು ಕಂಡಿದ್ದಾರೆ.

ಸಿಜೆ ರಾಯ್ ಅಂತ್ಯಸಂಸ್ಕಾರದಲ್ಲೂ ನೆಚ್ಚಿನ ಕಾರುಗಳ ಬಳಕೆ

ಸಿಜೆ ರಾಯ್ ಅಂತ್ಯಸಂಸ್ಕಾರದಲ್ಲಿ ನೆಚ್ಚಿನ ಕಾರುಗಳನ್ನು ಬಳಕೆ ಮಾಡಲಾಗಿದೆ. ಸಿಜೆ ರಾಯ್ ಅವರ ರೋಲ್ಸ್ ರಾಯ್ಸ್, ಮರ್ಸಿಡಿಸ್ ಬೆಂಜ್,3 ಬಿಎಂಡಬ್ಲ್ಯೂ, ಆಡಿ ಕಾರುಗಳನ್ನು ಅಂತಿಮ ಯಾತ್ರೆಯಲ್ಲಿ ಬಳಕೆ ಮಾಡಲಾಗಿದೆ. ಸಿಜೆ ರಾಯ್ ಕಾರುಗಳನ್ನು ಹೆಚ್ಚು ಪ್ರೀತಿಸುತ್ತಿದ್ದ ಕಾರಣ ಕುಟುಂಬಸ್ಥರು ಸಿಜೆ ರಾಯ್ ಅಂತಿಮ ಯಾತ್ರೆಯಲ್ಲಿ ಈ ಕಾರುಗಳನ್ನು ಬಳಕೆ ಮಾಡಲಾಗಿದೆ.

ಸಿಜೆ ರಾಯ್ ಬಳಿ ಇದೆ ಕಾರು ಸಂಪತ್ತು

ಸಿಜೆ ರಾಯ್ ಪ್ರತಿ ಬಾರಿ ಕಾರು ಖರೀದಿಸುವಾಗ ತಮ್ಮ ಇಷ್ಟದ ಕಾರು ಮಾತ್ರವಲ್ಲ, ಕಾರು ಖರೀದಿ ಹೂಡಿಕೆ ಎಂದು ಭಾವಿಸಿದ್ದರು. ಬರೋಬ್ಬರಿ 12ರೋಲ್ಸ್ ರಾಯ್ಸ್ ಕಾರು ಹೊಂದಿದ್ದಾರೆ. ಇನ್ನು ಬುಗಾಟಿ ವೆಯ್ರಾನ್, ಲ್ಯಾಂಬೋರ್ಗಿನಿ, ಮೆಕ್ಲರೆನ್ 720ಎಸ್, ಮರ್ಸಿಡಿಸ್ ಮೇಬ್ಯಾಕ್, ಆಡಿ, ರೇಂಜ್ ರೋವರ್, BMW ಸೇರಿದಂತೆ ಹಲವು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಸಿಜೆ ರಾಯ್ ಕಾರು ಸಂಗ್ರಹದಲ್ಲಿ ಸುಮಾರು 50ರಷ್ಟು ಐಷಾರಾಮಿ ಕಾರುಗಳಿವೆ.

ಮಾರುತಿ 800 ಕಾರು

ಸಿಜೆ ರಾಯ್ ಕಾರು ಸಂಗ್ರಕ್ಕೆ ಇತ್ತೀಚೆಗೆ ಮಾರುತಿ 800 ಕಾರು ಕೂಡ ಸೇರಿಕೊಂಡಿದೆ.90ರ ದಶಕದಲ್ಲಿ ಸಿಜೆ ರಾಯ್ ಮಾರುತಿ 800 ಕಾರು ಬಳಸಿದ್ದರು. ಇದು ಸಿಜೆ ರಾಯ್ ಅವರ ಮೊದಲ ಕಾರಾಗಿತ್ತು. ಬಳಿಕ ಈ ಕಾರು ಮಾರಾಟ ಮಾಡಿ ಹಲವು ಕಾರು ಬದಲಿಸಿದ್ದರು. ಇತ್ತೀಚೆಗೆ ಸಿಜೆ ರಾಯ್‌ಗೆ ತಮ್ಮ ಮೊದಲ ಕಾರು ತಮ್ಮ ಬಳಿ ಇರಬೇಕು ಎಂದು ಬಯಸಿದ್ದರು. ಹೀಗಾಗಿ ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಮೊದಲ ಕಾರಿನ ಕುರಿತ ಮಾಹಿತಿ ಹಂಚಿಕೊಂಡಿದ್ದರು. ಈ ಕಾರು ತಾನು ಮರಳಿ ಖರೀದಿಸುವುದಾಗಿ ಹೇಳಿದ್ದರು. ಸೋಶಿಯಲ್ ಮೀಡಿಯಾ ಮೂಲಕ ಹುಡುಕಾಟ ಆರಂಭಗೊಂಡಿತ್ತು. ಕೆಲವೇ ದಿನಗಳಲ್ಲಿ ಸಿಜೆ ರಾಯ್ ಅವರ 90ರ ದಶಕದ ಮಾರುತಿ 800 ಕಾರು ಪತ್ತೆಯಾಗಿತ್ತು. ಆದರೆ ಮಾಲೀಕ ಈ ಕಾರನ್ನು ಬಳಕೆ ಮಾಡುತ್ತಿರಲಿಲ್ಲ. ಕಾರಿನ ಸಂಪೂರ್ಣ ತುಕ್ಕು ಹಿಡಿದಿತ್ತು. ಆದರೆ ಈ ಕಾರನ್ನು ಸಿಜೆ ರಾಯ್ ಬರೋಬ್ಬರಿ 10 ಲಕ್ಷ ರೂಪಾಯಿ ನೀಡಿ ಮರಳಿ ಖರೀದಿಸಿದ್ದರು. ಈ ಕಾರು ಪತ್ತೆ ಹಚ್ಚಿ ಮರಳಿ ಕೊಟ್ಟರೆ 10 ಲಕ್ಷ ರೂಪಾಯಿ ಕೊಡುವುದಾಗಿ ಸಿಜೆ ರಾಯ್ ಘೋಷಿಸಿದ್ದರು.

 

PREV
Read more Articles on
click me!

Recommended Stories

Bengaluru: ಯಾರಾದ್ರು ಮಲಯಾಳಿ ಇದ್ರೆ ನನ್ನ ಸಪೂರ್ಟ್‌ಗೆ ಬನ್ನಿ, ಕನ್ನಡಿಗನ ಮೇಲೆ ಹಲ್ಲೆ ನಡೆಸಿ ಕೇರಳ ಯುವಕನ ಪುಂಡಾಟ!
ಬೆಂಗಳೂರು: ಶೆಡ್‌ ಒಂದರಲ್ಲಿ ಇಟ್ಟಿದ್ದ ಬರೋಬ್ಬರಿ 3 ಕೋಟಿ ನಗದು ಹಣ ಪತ್ತೆ! ಹಣದ ಮೂಟೆ ನೋಡಿ ಪೊಲೀಸರೇ ಶಾಕ್