ಜೈಲಲ್ಲಿ ದರ್ಶನ್‌ಗೆ ವಿಐಪಿ ಟ್ರೀಟ್‌ಮೆಂಟ್: ಮತ್ತೊಂದು ಫೋಟೋ ವೀಡಿಯೋ ವೈರಲ್

By Suvarna News  |  First Published Aug 26, 2024, 10:23 AM IST

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪಕ್ಕೆ ಪುಷ್ಠಿ ನೀಡುವಂತೆ ನಿನ್ನೆ ದರ್ಶನ ತನ್ನ ಸಹಚರರ ಜೊತೆ ಕುಳಿತು ಸಿಗರೇಟ್ ಎಳೆಯುತ್ತಿರುವ ಫೋಟೋವೊಂದು ವೈರಲ್ ಆಗಿತ್ತು. ಈಗ ಮತ್ತೊಂದು ಫೋಟೋ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಎಕ್ಸ್‌ಕ್ಲೂಸಿವ್ ಆಗಿ ಸಿಕ್ಕಿದೆ.


ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪಕ್ಕೆ ಪುಷ್ಠಿ ನೀಡುವಂತೆ ನಿನ್ನೆ ದರ್ಶನ ತನ್ನ ಸಹಚರರ ಜೊತೆ ಕುಳಿತು ಸಿಗರೇಟ್ ಎಳೆಯುತ್ತಿರುವ ಫೋಟೋವೊಂದು ವೈರಲ್ ಆಗಿತ್ತು. ಈಗ ಮತ್ತೊಂದು ಫೋಟೋ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಎಕ್ಸ್‌ಕ್ಲೂಸಿವ್ ಆಗಿ ಸಿಕ್ಕಿದ್ದು, ಈ ಫೋಟೋದಲ್ಲಿ ದರ್ಶನ್ ಬೆಡ್ ಮೇಲೆ ಕುಳಿತುಕೊಂಡಿದ್ದು, ಕೈಯಲ್ಲಿ ಮೊಬೈಲ್ ಫೋನ್ ಹಿಡಿದುಕೊಂಡು ಚಾಟ್ ಮಾಡುತ್ತಿರುವ ದೃಶ್ಯವಿದೆ. ಇದು ಪರಪ್ಪನ ಅಗ್ರಹಾರ ಜೈಲಾಧಿಕಾರಿಗಳ ಬಗ್ಗೆ ಅನುಮಾನ ಮೂಡುವಂತೆ ಮಾಡಿದೆ. 

ಹಾಗೆಯೇ ಮತ್ತೊಂದು ವೀಡಿಯೋ ಕೂಡ ವೈರಲ್ ಆಗಿದ್ದು, ದರ್ಶನ್‌ ಜೈಲಿನ ಆವರಣದಲ್ಲೇ ವೀಡಿಯೋ ಕಾಲ್‌ನಲ್ಲಿ ತನ್ನ ಆತ್ಮೀಯರ ಜೊತೆ ಮಾತನಾಡುತ್ತಿರುವ ವೀಡಿಯೋ ಇದಾಗಿದೆ. ಕೆಲ ಮೂಲಗಳ ಪ್ರಕಾರ ದರ್ಶನ್‌ ಜೈಲಿನಲ್ಲಿ ಆರಾಮವಾಗಿಯೇ ಇದ್ದು, ತನ್ನ ಆತ್ಮೀಯರ ಜೊತೆ ಫೋನ್‌ನಲ್ಲಿ ಮಾತನಾಡುತ್ತಿರುತ್ತಾರೆ ಎಂಬ ಮಾಹಿತಿ ಸಿಕ್ಕಿದೆ. ಈ ಘಟನೆಯಿಂದ ಇದರಿಂದ ಪರಪ್ಪನ ಅಗ್ರಹಾರ ಜೈಲಿನ ಮತ್ತೊಂದು ಮುಖ ಬಯಲಾಗಿದೆ. ವಿಐಪಿಗಳಿಗೆ ಒಂದು ಹಾಗೂ ಸಾಮಾನ್ಯ ಕೈದಿಗಳಿಗೆ ಒಂದು ರೀತಿಯ  ಸವಲತ್ತು ನೀಡುತ್ತಿರುವುದು ಬಯಲಾಗಿದೆ. 

Tap to resize

Latest Videos

ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ: 7 ಜನ ಸಿಬ್ಬಂದಿ ಅಮಾನತು

ಈ ವಿಚಾರ ಈಗ ರಾಜ್ಯದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದ್ದು, ಜೈಲಿನ 7 ಅಧಿಕಾರಿಗಳ ಅಮಾನತು ಮಾಡಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.

ಜೈಲಿನಲ್ಲಿದ್ದಾಗ ದರ್ಶನ್ ಹೊರಗಿನವರೊಂದಿಗೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿರುವ ವಿಡಿಯೋ ವೈರಲ್ ಆದ ನಂತರ ಪರಿಸ್ಥಿತಿ ಇನ್ನಷ್ಟು ಆತಂಕಕಾರಿ ತಿರುವು ಪಡೆದುಕೊಂಡಿದೆ. ಏಕೆಂದರೆ ದರ್ಶನ್‌ಗೆ  ಈ ವಿಡಿಯೋ ಕರೆ ಮಾಡಲು ಸಹಕರಿಸಿದ ವ್ಯಕ್ತಿ ಬೇರಾರೂ ಅಲ್ಲ, ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ಬಾಣಸವಾಡಿಯ  ಕುಖ್ಯಾತ ರೌಡಿ ಧರ್ಮನೇ ಎಂಬುದು ಕೂಡ ಬಯಲಾಗಿದೆ. ಕೊಲೆ ಆರೋಪ ಎದರುರಿಸುತ್ತಿರುವ ದರ್ಶನ್ ಸೇರಿದಂತೆ ಕೆಲವು ಕೈದಿಗಳು ಅನುಭವಿಸುತ್ತಿರುವ ಸ್ವಾತಂತ್ರ್ಯ ಮತ್ತು ಐಷಾರಾಮಿ ಜೀವನವೂ ಜೈಲಿನ ಭದ್ರತೆ ಮತ್ತು ನಿರ್ವಹಣೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ನಿನ್ನೆ ದರ್ಶನ್ ಮತ್ತೊಬ್ಬ ಕುಖ್ಯಾತ ರೌಡಿ ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನ ಜೊತೆ ಕುಳಿತುಕೊಂಡು ಟೀ ಜೊತೆ ಸಿಗರೇಟ್ ಎಳೆಯುತ್ತಿರುವ ಫೋಟೋ ವೈರಲ್ ಆಗಿತ್ತು. 

ಕೊಲೆಪಾತಕಿಗಳ ಸಂಘ ಸೇರಿದ ಪೊರ್ಕಿ; ದರ್ಶನ್‌ನಿಂದ ವಿಡಿಯೋ ಕಾಲ್ ಮಾಡಿಸಿದ ರೌಡಿಶೀಟರ್ ಧರ್ಮ!

 

click me!