ಪೋಷಕರೆ ಗಮನಿಸಿ : ಖಾಸಗಿ ಶಾಲಾ ವಾಹನ ಸೇವೆ ಇರಲ್ಲ

Published : Oct 23, 2019, 07:44 AM IST
ಪೋಷಕರೆ ಗಮನಿಸಿ : ಖಾಸಗಿ ಶಾಲಾ ವಾಹನ ಸೇವೆ ಇರಲ್ಲ

ಸಾರಾಂಶ

ಪೋಷಕರೇ ಗಮನಿಸಿ. ಇಂದು ನಿಮ್ಮ ಮಕ್ಕಳ ಶಾಲಾ ವಾಹನ ಮನೆ ಬಾಗಿಲಿಗೆ ಬರುವುದಿಲ್ಲ. ಕಾರಣವೇನು ? 

ಬೆಂಗಳೂರು [ಅ.23]:  ರಾಜಧಾನಿಯಲ್ಲಿ ಬುಧವಾರ ಖಾಸಗಿ ಶಾಲೆಗಳ ಮಕ್ಕಳನ್ನು ಶಾಲೆಗಳಿಗೆ ಕರೆದೊಯ್ಯುವ ಖಾಸಗಿ ವಾಹನಗಳ ಸೇವೆಯಲ್ಲಿ ವ್ಯತ್ಯಯವಾಗಲಿದೆ.

ಎಐಯುಟಿಯುಸಿ ಸಂಯೋಜಿತ ಕರ್ನಾಟಕ ಸಂಯುಕ್ತ ಶಾಲಾ ಹಾಗೂ ಲಘು ವಾಹನ ಚಾಲಕರ ಸಂಘವು ಮಂಗಳವಾರ ಬೆಳಗ್ಗೆ 11ಕ್ಕೆ ಮಲ್ಲೇಶ್ವರಂನ ಶಿರೂರು ಪಾರ್ಕ್ನಲ್ಲಿ ಚಾಲಕರ ಸಮಾವೇಶ ಹಮ್ಮಿಕೊಂಡಿದೆ. 

ಈ ಸಮಾವೇಶದಲ್ಲಿ ಚಾಲಕರು ಪಾಲ್ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳನ್ನು ಕರೆದೊಯ್ಯುವ ಖಾಸಗಿ ವಾಹನಗಳ ಸೇವೆಯಲ್ಲಿ ವ್ಯತ್ಯಯವಾಗಲಿದೆ. ಈಗಾಗಲೇ ಚಾಲಕರು ಮಕ್ಕಳ ಪೋಷಕರಿಗೆ ಈ ವಿಚಾರವನ್ನು ತಿಳಿಸಿದ್ದಾರೆ. ಅವರು ಸಹ ಸಮಾವೇಶಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ ಎಂದು ಸಂಘದ ಅಧ್ಯಕ್ಷ ಷಣ್ಮುಗಂ ತಿಳಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಸಮಾವೇಶ ಯಾರ ವಿರುದ್ಧದ ಪ್ರತಿಭಟನೆ ಅಥವಾ ಧರಣಿಯಲ್ಲ. ಚಾಲಕರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಬೇಡಿಕೆಗಳ ಬಗ್ಗೆ ಮುಕ್ತವಾಗಿ ಚರ್ಚಿಸಲಾಗುತ್ತದೆ. ಈ ಸಮಾವೇಶದಲ್ಲಿ ಚಾಲಕರು ಪಾಲ್ಗೊಳ್ಳಲೇ ಬೇಕಿರುವುದರಿಂದ ಸೇವೆಯಲ್ಲಿ ಕೊಂಚ ವ್ಯತ್ಯಯವಾಗಲಿದೆ. ಈ ಸಮಾವೇಶಕ್ಕೆ ಜೈ ಭುವನೇಶ್ವರಿ ಶಾಲಾ ವಾಹನ ಚಾಲಕರ ಸಂಘ ಸೇರಿದಂತೆ ಹಲವು ಚಾಲಕರ ಸಂಘಟನೆಗಳು ಬೆಂಬಲ ಸೂಚಿಸಿವೆ ಎಂದು ಹೇಳಿದರು.

PREV
click me!

Recommended Stories

ಪ್ರಧಾನ್ ರಾಜೀನಾಮೆ ವಿಚಾರ ದೊಡ್ಡದಲ್ಲ, ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಅಮಿತ್ ಶಾ ಹುದ್ದೆ ತ್ಯಜಿಸಲಿ: ಹರಿಪ್ರಸಾದ್‌
ವಿಶೇಷ ಸಂಪಾದಕೀಯ | ಮೋದಿಗಷ್ಟೇ ಅಲ್ಲ, ಸಿಎಂ ಡಿಕೆಶಿಗೂ ಜಿರಳೆ ಎಚ್ಚರಿಕೆ!