ಬೆಂಗಳೂರಿಗರೇ ಕೆಲಸ ಬೇಗನೆ ಮುಗಿಸಿಕೊಳ್ಳಿ, ಇಂದು ನಗರದ ಹಲವೆಡೆ ವಿದ್ಯುತ್ ವ್ಯತ್ಯಯ

By Chethan Kumar  |  First Published Jan 11, 2025, 7:37 AM IST

ಬೆಂಗಳೂರಿನ ಹಲವು ಭಾಗದಲ್ಲಿ ಪವರ್ ಕಟ್ ಆಗುತ್ತಿದೆ. ತುರ್ತು ನಿರ್ವಹಣೆ ಕಾರ್ಯಗಳಿಂದ ವಿದ್ಯುತ್ ವ್ಯತ್ಯಯವಾಗುತ್ತಿದೆ. ಯಾವ ಭಾಗದಲ್ಲಿ, ಯಾವ ಸಮಯಕ್ಕೆ ವಿದ್ಯುತ್ ವ್ಯತ್ಯಯ ಆಗಲಿದೆ?


ಬೆಂಗಳೂರು(ಜ.11) ಬೆಂಗಳೂರು ನಗರದಲ್ಲಿಂದು(ಜ.11) ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತಿದೆ.  ಈ ಕುರಿತು ಮಹತ್ವದ ಪ್ರಕಟಣೆ ಹೊರಡಿಸಿರುವ ಬೆಸ್ಕಾಂ ಹಲವು ಭಾಗದಲ್ಲಿ ತುರ್ತು ನಿರ್ವಹಣೆ ನಡೆಯುತ್ತಿರುವ ಕಾರಣ ವಿದ್ಯುತ್ ವ್ಯತ್ಯಯವಾಗಲಿದೆ ಎಂದಿದೆ. ಪ್ರಮುಖವಾಗಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಬೆಳಗ್ಗೆಯಿಂದ ಸಂಜೆ ವರೆಗೆ ವಿದ್ಯುತ್ ಸಮಸ್ಯೆ ಎದುರಾಗಲಿದೆ. ಹೀಗಾಗಿ ಸಾರ್ವಜನಿಕರು ಸಹಕರಿಸಬೇಕಾಗಿ ಬೆಸ್ಕಾಂ ವಿನಂತಿಸಿದೆ.

ಎಲ್ಲಿ ತುರ್ತ ನಿರ್ವಹಣೆ ಕಾರ್ಯ?
 ಮಲ್ಲೇಶ್ವರಂ ಡಿವಿಶನ್‌ನಲ್ಲಿರುವ C6 ಸಬ್ ಡಿವಿಶನ್‌ನ 66/11 kV IIScನಲ್ಲಿ ನಿರ್ವಹಣೆ ಕೆಲಸಗಳು ನಡೆಯಲಿದೆ. ಕೆಪಿಟಿಸಿಎಲ್ ಈ ನಿರ್ವಹಣಾ ಕಾರ್ಯ ಮಾಡಲಿದೆ. ತುರ್ತು ನಿರ್ವಹಣೆಯಿಂದ ಅನಿವಾರ್ಯವಾಗಿ ನಗರದ ಕೆಲ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿದೆ ಎಂದು ಬೆಸ್ಕಾಂ ಹೇಳಿದೆ.

Tap to resize

Latest Videos

ವಿದ್ಯುತ್‌ ತಂತಿ ಸ್ಪರ್ಶಿಸಿ ಬಾಲಕ ಗಾಯಗೊಂಡ ಕೇಸ್‌: ಬೆಸ್ಕಾಂ ಅಧಿಕಾರಿಗಳ ವಿರುದ್ಧ ಹೈಕೋರ್ಟ್‌ ಚಾಟಿ

ಯಾವ ಭಾಗದಲ್ಲಿ ವಿದ್ಯುತ್ ವ್ಯತ್ಯಯ
 ಮಲ್ಲೇಶ್ವರಂನ ಸಿ6 ಸಬ್ ಡಿವಿಶನ್‌ ವಿದ್ಯುತ್ ಪೂರೈಸುವ ನಗರದ ಹಲವು ಭಾಗದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಈ ಪೈಕಿ ಮಲ್ಲೇಶ್ವರಂ, ಎಂಡಿ ಬ್ಲಾಕ್, ವೈಯಾಲಿಕಾವಲ್, ಸ್ವಿಮ್ಮಿಂಗ್ ಪೂಲ್ ಎಕ್ಸ್‌ಟೆನ್ಶನ್, ಕೋದಂಡರಾಂಪುರ, ರಂಗನಾಥಪುರ,ಬಿಹೆಚ್‌ಇಎಲ್, ಐಐಎಸ್‌ಸಿ ಬ್ರೈನ್ ಸೆಂಟರ್, ಅಂಬೇಡ್ಕರ್ ನಗರ್, ಯಶವಂತಪುರ ಪೈಪ್‌ಲೈನ್ ರಸ್ತೆ, ಎಲ್ಎನ್ ಕಲೋನಿ, ಸುಬೇದಾರಪಾಳ್ಯ, ದಿವಾನರ ಪಾಳ್ಯ, ಕೆಎನ್ ಎಕ್ಸ್‌ಟೆನ್ಶನ್, ಯಶವಂತಪುರ 1ನೇ ಮುಖ್ಯ ರಸ್ತೆ, ಹೆಚ್ಎಂಟಿ ಮುಖ್ಯ ರಸ್ತೆ, ಮಾಡೆಲ್ ಕಾಲೋನಿ, ಶರೀಫ್ ನಗರ ಸೇರಿದಂತೆ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಇಂದು 10 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.  

ಜನವರಿ 9 ರಂದು ಬೆಂಗಳೂರಿನ ಹಲವು ಭಾಗದಲ್ಲಿ ವಿದ್ಯುತ್ ವ್ಯತ್ಯಯವಾಗಿತ್ತು. ಜನವರಿ 9 ರಂದು ದುರಸ್ಥಿ ಹಾಗೂ ನಿರ್ವಹಣಾ ಕಾರ್ಯಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಅಂದು ಬೆಳಗ್ಗೆ 10 ಗಂಟೆಯಿಂದ 3.30ರ ವರೆಗೆ ವಿದ್ಯುತ್ ವ್ಯತ್ಯಯವಾಗಿತ್ತು. ಆದರೆ ಈ ಬಾರಿ ದುರಸ್ಥಿ ಹಾಗೂ ನಿರ್ವಹಣಾ ಕಾರ್ಯಗಳು ಹೆಚ್ಚಿರುವುದರಿಂದ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ಇರಲಿದೆ.

ವಾರಾಂತ್ಯದಲ್ಲಿ ನಿರ್ವಹಣೆ ಕಾರ್ಯಕ್ಕೆ ಬೆಸ್ಕಾಂ ಇಳಿದಿದೆ.ಈ ಮೂಲಕ ಜನಸಾಮಾನ್ಯರಿಗೆ ಹೆಚ್ಚಿನ ತೊಂದರೆಯಾಗದಂತೆ ನೋಡಿಕೊಂಡಿದೆ. ಶನಿವಾರ ಐಟಿ ಕ್ಷೇತ್ರದವರಿಗೆ ರಜಾ ದಿನವಾಗಿದೆ. ಇತರ ಹಲವರಿಗೂ ರಜಾ ದಿನವಾಗಿದೆ. ಇನ್ನು ಬ್ಯಾಂಕ್ ಸೇರಿದಂತೆ ಹಲವರಿಗೆ ಎರಡನೇ ಶನಿವಾರದ ರಜಾ ದಿನವಾಗಿದೆ. ಶಾಲಾ ಕಾಲೇಜುಗಳಿಗೆ ತೆರಳುವಾಗ ಯಾವದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲು 10 ಗಂಟೆ ಬಳಿಕ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ನಿರ್ವಹಣೆ ಕಾರ್ಯ ಮಾಡಲು ಬೆಸ್ಕಾಂ ಮುಂದಾಗಿದೆ.

ಬೆಂಗಳೂರು: ಬೆಸ್ಕಾಂ ಎಂಜಿನಿಯರ್‌ ಹುದ್ದೆ ಆಸೆ ತೋರಿಸಿ ಲಕ್ಷಾಂತರ ರೂ. ವಂಚನೆ, ಕಂಗಾಲಾದ ಯುವಕ..!
 

click me!