ಮೆಟ್ರೋದಲ್ಲಿ ಯುವತಿಯ ವಿಡಿಯೋ ಮಾಡಿದವನ ವಶಕ್ಕೆ ಪಡೆದ ಪೊಲೀಸರು; ಮೊಬೈಲ್‌ನಲ್ಲಿ ಏನಿತ್ತು?

Published : Oct 31, 2026, 07:22 AM IST
Bengaluru Metro Secret Video Record

ಸಾರಾಂಶ

ನಮ್ಮ ಮೆಟ್ರೋದಲ್ಲಿ ಯುವತಿಯ ಅನುಮತಿ ಇಲ್ಲದೆ ವಿಡಿಯೋ ಮಾಡಿದ ಆರೋಪದ ಮೇಲೆ ಕಾಡುಗೋಡಿ ಪೊಲೀಸರು ಯುವಕನನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ನಿರೀಕ್ಷಣಾ ಜಾಮೀನು ಪಡೆದಿದ್ದು, ತಾನು ವಿಡಿಯೋ ಮಾಡಿಲ್ಲ ಎಂದು ಹೇಳಿಕೆ ನೀಡಿದ್ದಾನೆ.

ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಇತ್ತೀಚೆಗೆ ಯುವತಿಯ ಅನುಮತಿ ಪಡೆಯದೆ ಆಕೆಯ ವಿಡಿಯೋ ಮಾಡಿದ್ದ ಪ್ರಕರಣದ ಸಂಬಂಧ ಯುವಕನನ್ನು ಕಾಡುಗೋಡಿ ಠಾಣೆ ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಜೆ.ಪಿ.ನಗರ ನಿವಾಸಿ ಕೆ.ಟಿ.ಸಂತೋಷ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಈ ಮಧ್ಯೆ ಸಂತೋಷ್ ಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ. ಹೀಗಾಗಿ ಅವರ ಹೇಳಿಕೆ ಪಡೆಯಲಾಗಿದೆ. ಆದರೆ ಅವರ ಮೊಬೈಲ್ ವಶಕ್ಕೆ ಪಡೆದು, ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಕಳುಹಿಸಲಾಗಿದೆ.

ನಿರೀಕ್ಷಣಾ ಜಾಮೀನು ಪಡೆದುಕೊಂಡಿರುವ ಸಂತೋಷ್

ಅ.27 ರಂದು ಕಾಡುಗೋಡಿ-ವೈಟ್‌ಫೀಲ್ಡ್‌ ಮೆಟ್ರೋ ನಿಲ್ದಾಣದ ಬಳಿ ಸಂತೋಷ್ ತನ್ನ ವಿಡಿಯೋ ವಿಡಿಯೋ ಮಾಡಿದ್ದಾನೆಂದು ಯುವತಿ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ಸಂತೋಷ್‌ ನಿರೀಕ್ಷಣಾ ಜಾಮೀನು ಪಡೆದು, ನಂತರ ಕಾಡುಗೋಡಿ ಪೊಲೀಸರ ಮುಂದೆ ಹಾಜರಾಗಿ, ಮಹಿಳಾ ಪ್ರಯಾಣಿಕರಾದ ಯುವತಿ ವಿಡಿಯೋವನ್ನು ಚಿತ್ರೀಕರಿಸಿಲ್ಲ. ಆಕೆಯ ಆರೋಪ ಸುಳ್ಳು ಎಂದು ಹೇಳಿಕೆ ನೀಡಿದ್ದಾರೆ. ಮತ್ತೊಂದೆಡೆ ಆತನ ಮೊಬೈಲ್‌ನಲ್ಲಿ ಯಾವುದೇ ವಿಡಿಯೋಗಳು ಇಲ್ಲ. ಹೀಗಾಗಿ ಮೊಬೈಲ್‌ ವಶಕ್ಕೆ ಪಡೆದು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?

ಮೆಟ್ರೋ ರೈಲಿನಲ್ಲಿ ಸಾಫ್ಟ್‌ವೇರ್ ಮಹಿಳಾ ಉದ್ಯೋಗಿಯೊಬ್ಬರ ವಿಡಿಯೋ ಮಾಡಿರುವ ಕಿಡಿಗೇಡಿ ವಿರುದ್ಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

ಈ ಘಟನೆ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಸಂತ್ರಸ್ತೆ ವಿಡಿಯೋ ಅಪ್‌ಲೋಡ್ ಮಾಡಿದ್ದರು. ಇದನ್ನು ಗಮನಿಸಿದ ಪೊಲೀಸರು, ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿ ಮೇಲೆ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದರು.

ಪಟ್ಟಂದೂರು ನಿವಾಸಿಯಾದ ಸಂತ್ರಸ್ತೆ, ಕೆಲಸ ಮುಗಿಸಿಕೊಂಡು ಮಂಗಳವಾರ ಸಂಜೆ ಮೆಟ್ರೋದಲ್ಲಿ ಮನೆಗೆ ಮರಳುತ್ತಿದರು. ಆಗ ಮಾರ್ಗ ಮಧ್ಯೆ ಅವರ ಹಿಂಬದಿ ಪ್ರಯಾಣಿಕ ವಿಡಿಯೋ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಕೂಡಲೇ ಕಿಡಿಗೇಡಿಯಿಂದ ಮೊಬೈಲ್ ಕಸಿದುಕೊಂಡು ಆತನ ವರ್ತನೆಗೆ ಸಂತ್ರಸ್ತೆ ಆಕ್ಷೇಪಿಸಿದ್ದಾರು. ನಂತರ ಕೂಡಲೇ ಬಿಎಂಆರ್‌ಸಿ ಭದ್ರತಾ ಸಿಬ್ಬಂದಿ ಗಮನಕ್ಕೆ ಅವರು ತಂದಿದ್ದರು. ಆಗ ಕಾಡುಗೋಡಿ ನಿಲ್ದಾಣದಲ್ಲಿ ಸಂತ್ರಸ್ತೆ ಬಳಿ ಕ್ಷಮೆ ಕೋರಿ ಆತ ತೆರಳಿದ್ದಾನೆ. ಈ ಘಟನೆ ಕುರಿತು ವಿಡಿಯೋದಲ್ಲಿ ಸಂತ್ರಸ್ತೆ ಹಂಚಿಕೊಂಡಿದ್ದರು.

PREV
Read more Articles on
click me!

Recommended Stories

ಪ್ರಧಾನಿ ಮೋದಿಗೆ ಸಿಎಂ ಡಿಕೆ ಪತ್ರ: ಕಬ್ಬು ಬೆಳೆಗಾರರಿಗೆ ಸಿಗುತ್ತಾ ಸಿಹಿ ಸುದ್ದಿ? ಪತ್ರದಲ್ಲೇನಿದೆ?
' ಮೈಮೇಲೆ ಪ್ರಜ್ಞೆ ಇದೆಯೋ? ಇಲ್ಲವೋ?..' ತಡೆಯಾಜ್ಞೆ ಇದ್ದರೂ ತನಿಖೆ ನಡೆಸಿ, ಚಾರ್ಜ್‌ಶೀಟ್‌ ಸಲ್ಲಿಸಿದ ಪೊಲೀಸರ ನಡೆಗೆ ಹೈಕೋರ್ಟ್ ಗರಂ