
ಬೆಂಗಳೂರು (ನ.11): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇದೇ 13ನೇ ತಾರೀಖಿನಂದು ರಾಜಧಾನಿ ಬೆಂಗಳೂರಿಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ, ನಗರದ ಹಲವೆಡೆ ಸುಗಮ ಸಂಚಾರ ಹಾಗೂ ಗಣ್ಯರ ಭದ್ರತೆಯ ದೃಷ್ಟಿಯಿಂದ ಸಂಚಾರ ಮಾರ್ಗಗಳಲ್ಲಿ ತಾತ್ಕಾಲಿಕ ಬದಲಾವಣೆ (Traffic Diversion) ಮಾಡಿ ಬೆಂಗಳೂರು ಸಂಚಾರ ಪೊಲೀಸರು ಆದೇಶ ಹೊರಡಿಸಿದ್ದಾರೆ.
ವಿಶೇಷವಾಗಿ ದಕ್ಷಿಣ ಬೆಂಗಳೂರಿನ ಬನ್ನೇರುಘಟ್ಟ ರಸ್ತೆ, ಜಯನಗರ, ಜೆ.ಪಿ. ನಗರ, ಆಡುಗೋಡಿ ಹಾಗೂ ಹುಳಿಮಾವು ವ್ಯಾಪ್ತಿಯಲ್ಲಿ ವಿವಿಐಪಿ (VVIP) ಸಂಚಾರದ ವೇಳೆ ವಾಹನಗಳ ಓಡಾಟವನ್ನು ನಿರ್ಬಂಧಿಸಲಾಗಿದ್ದು, ಸಾರ್ವಜನಿಕರಿಗಾಗಿ ಪರ್ಯಾಯ ಮಾರ್ಗಗಳನ್ನು ಕಲ್ಪಿಸಲಾಗಿದೆ. ವಾಹನ ಸವಾರರು ಸಮಸ್ಯೆ ತಪ್ಪಿಸಲು ಈ ಕೆಳಗಿನ ಮಾರ್ಗದರ್ಶಿಯನ್ನು ಗಮನಿಸುವುದು ಸೂಕ್ತ.
ಸಂಚಾರ ನಿರ್ಬಂಧ: ಬನ್ನೇರುಘಟ್ಟ ರಸ್ತೆಯ ಆನೇಪಾಳ್ಯ ಜಂಕ್ಷನ್‌ನಿಂದ ಡೈರಿ ಸರ್ಕಲ್ ಮೂಲಕ ಜಯದೇವ ಆಸ್ಪತ್ರೆ ಕಡೆಗೆ ಹೋಗುವ ವಾಹನ ಸಂಚಾರವನ್ನು ಮೈಕೋಬಂಡೆ ಜಂಕ್ಷನ್ ಮತ್ತು ಡೈರಿ ಸರ್ಕಲ್ ಅಂಡರ್‌ಪಾಸ್ ಬಳಿ ಕಾರ್ಯಕ್ರಮ ನಡೆಯುವ ವೇಳೆಯಲ್ಲಿ ನಿರ್ಬಂಧಿಸಲಾಗುತ್ತದೆ.
ಪರ್ಯಾಯ ಮಾರ್ಗ:
ಆನೇಪಾಳ್ಯ ಕಡೆಯಿಂದ ಜಯದೇವ ಕಡೆಗೆ ಹೋಗುವ ವಾಹನಗಳು ಮೈಕೋಬಂಡೆ ಜಂಕ್ಷನ್‌ನಲ್ಲಿ ಬಲತಿರುವು ಪಡೆದು, ನ್ಯೂ ಮೈಕೋ ರಸ್ತೆ ಮೂಲಕ ಆಡುಗೋಡಿ ಜಂಕ್ಷನ್‌ಗೆ ತಲುಪಿ, ಅಲ್ಲಿಂದ ಬಲತಿರುವು ಪಡೆದು ಹೊಸೂರು ಲಸ್ಕರ್ ಮುಖ್ಯರಸ್ತೆಯಲ್ಲಿ ಸಾಗಬಹುದು.
ಬನ್ನೇರುಘಟ್ಟ (ಬಿ.ಜಿ) ರಸ್ತೆಯಿಂದ ಬರುವ ವಾಹನಗಳು ಡೈರಿ ಸರ್ಕಲ್ ಸರ್ವಿಸ್ ರಸ್ತೆಯಲ್ಲಿ ಸಾಗಿ, ಜಂಕ್ಷನ್‌ನಲ್ಲಿ ಎಡತಿರುವು ಪಡೆದು ಡಾ. ಮರಿಗೌಡ ರಸ್ತೆಯ ಮೂಲಕ ಮಡಿವಾಳ ಚೆಕ್‌ಪೋಸ್ಟ್ ಹಾಗೂ ಹೊಸೂರು ರಸ್ತೆ ತಲುಪಬಹುದು.
ಸಂಚಾರ ನಿರ್ಬಂಧ: ಮಾರೆನಹಳ್ಳಿ ಮುಖ್ಯ ರಸ್ತೆಯ 28ನೇ ಮುಖ್ಯ ರಸ್ತೆ ಕಡೆಯಿಂದ ಜಯದೇವ ಹಾಸ್ಪಿಟಲ್ ಜಂಕ್ಷನ್ ಕಡೆಗೆ ವಿ.ವಿ.ಐ.ಪಿ ಸಂಚಾರದ ಸಮಯದಲ್ಲಿ ಸಂಚಾರ ನಿಷೇಧ.
ಈಸ್ಟ್ ಎಂಡ್ ಮುಖ್ಯ ರಸ್ತೆಯ ಈಸ್ಟ್ ಎಂಡ್ ಜಂಕ್ಷನ್‌ನಿಂದ ಸ್ವಾಗತ್ ಜಂಕ್ಷನ್ ಮೂಲಕ ಬನ್ನೇರುಘಟ್ಟ ರಸ್ತೆ ಕಡೆಗೆ ಸಂಚಾರ ನಿರ್ಬಂಧ.
ಪರ್ಯಾಯ ಮಾರ್ಗ:
ಬನಶಂಕರಿ ಕಡೆಯಿಂದ ಸ್ಪೋಕ್ ಬೆಡ್ ಕಡೆಗೆ ಹೋಗುವ ಸವಾರರು ರಾಗಿಗುಡ್ಡ ಡಬಲ್ ಡೆಕ್ಕರ್ ರಸ್ತೆ ಮೂಲಕ ಸಾಗಬಹುದು (ವಿವಿಐಪಿ ಸಂಚಾರದ ಸಮಯ ಹೊರತುಪಡಿಸಿ).
ಈಸ್ಟ್ ಎಂಡ್ ಜಂಕ್ಷನ್ ಕಡೆಯಿಂದ ಸ್ವಾಗತ್ ಜಂಕ್ಷನ್ ಕಡೆಗೆ ಹೋಗುವವರು 28ನೇ ಮುಖ್ಯ ರಸ್ತೆ ಹಾಗೂ ಈಸ್ಟ್ ಎಂಡ್ ರಸ್ತೆ ಮೂಲಕ ಬಲ/ಎಡ ತಿರುವು ಪಡೆದು ಸ್ವಾಗತ್ ರಸ್ತೆ ಅಥವಾ ಜೆ.ಪಿ ನಗರ ಡಾಲರ್ಸ್ ಜಂಕ್ಷನ್ ಕಡೆಗೆ ಸಾಗಬಹುದು.
ಸಂಚಾರ ನಿರ್ಬಂಧ:
ಪರ್ಯಾಯ ಮಾರ್ಗ:
ಹೊಸೂರು ರಸ್ತೆಗೆ ತೆರಳುವವರು ಕನಕಪುರ ಮುಖ್ಯರಸ್ತೆ - ಬನಶಂಕರಿ ಬಸ್ ನಿಲ್ದಾಣದ ಮೂಲಕ 46ನೇ ಅಡ್ಡ ರಸ್ತೆಯಲ್ಲಿ ಸಾಗುವುದು.
ಬನ್ನೇರುಘಟ್ಟ ರಸ್ತೆ ಕಡೆಗೆ ಹೋಗುವವರು ಕನಕಪುರ ಮುಖ್ಯರಸ್ತೆಯಲ್ಲಿ ಮುಂದುವರಿದು ಕೋಣನಕುಂಟೆ ಕ್ರಾಸ್ ಅಥವಾ ಎ2ಬಿ (A2B) ಜಂಕ್ಷನ್‌ನಲ್ಲಿ ಎಡತಿರುವು ಪಡೆದು ಸಾಗಬಹುದು.
ಬಿ.ಪಿ.ಎಲ್ ಅರಕೆರೆ ಮುಖ್ಯರಸ್ತೆಯಲ್ಲಿ ಸಂಚರಿಸುವವರು ಕೊತ್ತನೂರು ದಿಣ್ಣೆ ರಸ್ತೆ ಮೂಲಕ ಸಂಚರಿಸಬೇಕು.
ಸಂಚಾರ ನಿರ್ಬಂಧ:
ಅಂಜನಾಪುರ 80 ಅಡಿ ರಸ್ತೆಯಿಂದ ಬನ್ನೇರುಘಟ್ಟ ರಸ್ತೆ ಕಡೆಗೆ ವಾಹನ ಸಂಚಾರ ನಿಷೇಧ.
ಗೊಟ್ಟಿಗೆರೆ ಕೆರೆ ಹತ್ತಿರ ಮತ್ತು ಕೆನರಾ ಬ್ಯಾಂಕ್ ಮೂಲಕ ಹಾಗೂ ಲೊಯೋಲಾ ಶಾಲೆಯ ಮುಂಭಾಗದ ಮೂಲಕ ಬನ್ನೇರುಘಟ್ಟ ರಸ್ತೆಗೆ ಬರುವ ಮಾರ್ಗಗಳು ಬಂದ್.
ಪರ್ಯಾಯ ಮಾರ್ಗ:
ಬನ್ನೇರುಘಟ್ಟ ಮುಖ್ಯರಸ್ತೆಯಿಂದ ಬರುವವರು: ಅಂಜನಾಪುರ 80 ಅಡಿ ರಸ್ತೆ, ಬಿಟಿಎಂ ಡಿಪೋ, ತಲಘಟ್ಟಪುರ ಅಗ್ನಿಶಾಮಕ ಠಾಣೆ, ಲಾಲ್ ಬಹದ್ದೂರ್ ಶಾಸ್ತ್ರಿ ನಗರ, ನಾರಾಯಣ ನಗರ, ಜೆಡಿ ರಸ್ತೆ ಮೂಲಕ ಕನಕಪುರ ರಸ್ತೆ (A2B ಜಂಕ್ಷನ್) ತಲುಪುವುದು.
ಗೊಟ್ಟಿಗೆರೆ ಕಡೆಯಿಂದ ಬರುವವರು: ಬಿಕ್ಕ ಸರ್ಕಲ್, ಜಾಂಬೂಸವಾರಿದಿಣ್ಣೆ, ಭೈರಪ್ಪ ಸರ್ಕಲ್, ಗ್ಲಾಸ್ ಫ್ಯಾಕ್ಟರಿ, ಹರಿನಗರ ಕ್ರಾಸ್ ಮೂಲಕ ಕನಕಪುರ ರಸ್ತೆ ಸೇರುವುದು.
ಲೊಯೋಲಾ ಶಾಲೆ ಕಡೆಯಿಂದ ಬರುವವರು: ಬಿಕ್ಕ ಸರ್ಕಲ್, ಬ್ರಿಗೇಡ್ ಮಿಲೇನಿಯಮ್ ಸಿಗ್ನಲ್, ಜೆ.ಪಿ ನಗರ ಪುಟ್ಟೇನಹಳ್ಳಿ ಕೆರೆ ಮಾರ್ಗವಾಗಿ ಸಂಚರಿಸುವುದು.
ಸಂಚಾರ ನಿರ್ಬಂಧ:
ಬನ್ನೇರುಘಟ್ಟ ಮುಖ್ಯ ರಸ್ತೆಯಿಂದ ಅರಕೆರೆ / ಬಿಲೇಕಹಳ್ಳಿ / ಮೈಕೋ ಲೇಔಟ್ / ಡೈರಿ ಸರ್ಕಲ್ ಕಡೆಗೆ ಸಂಚಾರ ತಾತ್ಕಾಲಿಕ ಬಂದ್.
ಪರ್ಯಾಯ ಮಾರ್ಗಗಳು:
ಕೋಳಿಫಾರ್ಮ್ ಗೇಟ್ ಜಂಕ್ಷನ್: ಬನ್ನೇರುಘಟ್ಟ ಗ್ರಾಮಾಂತರ ಕಡೆಯಿಂದ ಬರುವವರು ಬಲತಿರುವು ಪಡೆದು, ಎಸ್.ಕೆ. ಪಾಳ್ಯ, ಬೇಗೂರು-ಕೊಪ್ಪ ರಸ್ತೆ ಹಾಗೂ ಹೊಸೂರು ರಸ್ತೆ ಮೂಲಕ ನಗರ ಪ್ರವೇಶಿಸುವುದು.
ಶೇರ್‌ವುಡ್ ಜಂಕ್ಷನ್: ಇಲ್ಲಿ ಬಲತಿರುವು ಪಡೆದು ನೈಸ್ (NICE) ರಸ್ತೆ ಮೂಲಕ ಕನಕಪುರ ರಸ್ತೆ ಸೇರುವುದು.
ಬಿಡಿಎ ಜಂಕ್ಷನ್: ಎಡತಿರುವು ಪಡೆದು ಅಂಜನಾಪುರ 80 ಅಡಿ ರಸ್ತೆ ಮಾರ್ಗವಾಗಿ ಕನಕಪುರ ರಸ್ತೆ ತಲುಪುವುದು.
ಗೊಟ್ಟಿಗೆರೆ ಜಂಕ್ಷನ್: ಎಡತಿರುವು ಪಡೆದು ಜಾಂಬೂಸವಾರಿ ದಿಣ್ಣೆ ರಸ್ತೆ ಮೂಲಕ ಕನಕಪುರ ರಸ್ತೆ ಸೇರುವುದು.
ಕಮ್ಮನಹಳ್ಳಿ ಜಂಕ್ಷನ್: ಬಲತಿರುವು ಪಡೆದು ದೊಡ್ಡಕಮ್ಮನಹಳ್ಳಿ ರಸ್ತೆ - ಹುಳಿಮಾವು ಲೇಕ್ ರಸ್ತೆ - ಡಿಎಲ್‌ಎಫ್ ರಸ್ತೆ - ಸರ್ ಎಂ.ವಿ ರಸ್ತೆ ಮೂಲಕ ಮೈಕೋ ಲೇಔಟ್/ನಗರದ ಕಡೆಗೆ ಸಾಗುವುದು.
ಮೀನಾಕ್ಷಿ ಮಾಲ್ ಜಂಕ್ಷನ್: ಬಲತಿರುವು ಪಡೆದು ಕೇವ್ ಟೆಂಪಲ್ ರಸ್ತೆ - ಡಿಎಲ್‌ಎಫ್ ರಸ್ತೆ - ಸರ್ ಎಂ.ವಿ ರಸ್ತೆ ಮೂಲಕ ಬಿಲೇಕಹಳ್ಳಿ/ಹೊಸೂರು ರಸ್ತೆ ಸೇರುವುದು.
ಸಾಯಿ ಗಾರ್ಮೆಂಟ್ ಜಂಕ್ಷನ್: ಬಲತಿರುವು ಪಡೆದು ಅರಕೆರೆ 80 ಅಡಿ ರಸ್ತೆ - ಸರ್ ಎಂ.ವಿ ರಸ್ತೆ ಮೂಲಕ ಬಿಲೇಕಹಳ್ಳಿ ಕಡೆಗೆ ಸಾಗಬಹುದು.
ಡೈರಿ ಸರ್ಕಲ್ ಜಂಕ್ಷನ್‌ನಿಂದ ಅರಕೆರೆ ಜಂಕ್ಷನ್‌ವರೆಗೆ ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿ ಗಣ್ಯರ (VVIP) ಕಾನ್ವಾಯ್ ಸಂಚರಿಸುವ ಸಮಯದಲ್ಲಿ ಎಲ್ಲಾ ರೀತಿಯ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿರುತ್ತದೆ.
ಗಮನಿಸಿ: ಈ ರಸ್ತೆಗಳಲ್ಲಿ ವಾಹನ ಪಾರ್ಕಿಂಗ್ ಸಂಪೂರ್ಣ ನಿಷೇಧ!
ಭದ್ರತಾ ದೃಷ್ಟಿಯಿಂದ ದಿನದ ನಿರ್ದಿಷ್ಟ ಸಮಯದಲ್ಲಿ ಕೆಳಗಿನ ಪ್ರಮುಖ ರಸ್ತೆಗಳಲ್ಲಿ ವಾಹನಗಳ ನಿಲುಗಡೆಯನ್ನು (No Parking) ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ:
8ನೇ ಮುಖ್ಯರಸ್ತೆ, ಜೆ.ಪಿ ನಗರ 2ನೇ ಹಂತ
15ನೇ ಕ್ರಾಸ್ ರಸ್ತೆ (ಡಾಲರ್ಸ್ ಜಂಕ್ಷನ್‌ನಿಂದ ಬನ್ನೇರುಘಟ್ಟ ರಸ್ತೆಯವರೆಗೆ)
ಮಾರೆನಹಳ್ಳಿ ಮುಖ್ಯ ರಸ್ತೆ (ತಿಲಕ್‌ನಗರ)
ಈಸ್ಟ್ ಎಂಡ್ ಮುಖ್ಯ ರಸ್ತೆ (ತಿಲಕ್‌ನಗರ)
ಸ್ವಾಗತ್ ಮುಖ್ಯ ರಸ್ತೆ (ತಿಲಕ್‌ನಗರ)
28ನೇ ಮುಖ್ಯ ರಸ್ತೆ (ಮಾರೆನಹಳ್ಳಿ)
ಸಾರ್ವಜನಿಕರಿಗೆ ಮನವಿ: 13ನೇ ತಾರೀಖಿನಂದು ಸಂಚರಿಸುವ ಸಾರ್ವಜನಿಕರು ಹಾಗೂ ಕಚೇರಿಗಳಿಗೆ ತೆರಳುವವರು ಸಂಚಾರ ದಟ್ಟಣೆ ತಪ್ಪಿಸಲು ನಿಗದಿಪಡಿಸಿದ ಪರ್ಯಾಯ ರಸ್ತೆಗಳನ್ನು ಬಳಸಬೇಕು ಮತ್ತು ಸಂಚಾರ ಪೊಲೀಸರೊಂದಿಗೆ ಸಹಕರಿಸಬೇಕೆಂದು ಇಲಾಖೆ ಮನವಿ ಮಾಡಿದೆ. ಸಾಧ್ಯವಾದಷ್ಟು 'ನಮ್ಮ ಮೆಟ್ರೋ' ಬಳಸುವುದು ಸೂಕ್ತ.