ಶಾಸಕನ ಪುತ್ರನ ಮದುವೆಗೆ KSRTC ಬಸ್‌ ಬುಕ್‌: ಪ್ರಯಾಣಿಕರ ಪರದಾಟ

By Kannadaprabha NewsFirst Published Nov 3, 2019, 9:55 AM IST
Highlights

ಶಾಸಕರೋರ್ವರ ಪುತ್ರನ ಮದುವೆಗೆಂದು 30 KSRTC ಬಸ್ ಬುಕ್ ಮಾಡಿದ ಹಿನ್ನೆಲೆಯಲ್ಲಿ ಪ್ರಯಾಣಿಕರು ಪರದಾಡಿದ ಘಟನೆ ನಡೆಯಿತು

ಬೆಂಗಳೂರು[ನ.03] : ಬೆಂಗಳೂರು-ದೊಡ್ಡಬಳ್ಳಾಪುರ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರದಲ್ಲಿ ವ್ಯತ್ಯಯವಾದ ಹಿನ್ನೆಲೆಯಲ್ಲಿ ನೂರಾರು ಪ್ರಯಾಣಿಕರು ನಗರದ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಪರದಾಡಿದ ಘಟನೆ ಶನಿವಾರ ನಡೆದಿದೆ.

ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಯ್ಯ ಪುತ್ರನ ಮದುವೆ ಹಿನ್ನೆಲೆಯಲ್ಲಿ 30 ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಬಾಡಿಗೆಗೆ ನೀಡಲಾಗಿತ್ತು. ಬೆಂಗಳೂರು-ದೊಡ್ಡಬಳ್ಳಾಪುರ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳನ್ನೇ ಶಾಸಕನ ಪುತ್ರನ ವಿವಾಹಕ್ಕೆ ಬಾಡಿಗೆಗೆ ನೀಡಲಾಗಿತ್ತು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆದರೆ, ಸದರಿ ಮಾರ್ಗದಲ್ಲಿ ಪರ್ಯಾಯ ಬಸ್‌ ವ್ಯವಸ್ಥೆ ಕಲ್ಪಿಸದ ಹಿನ್ನೆಲೆಯಲ್ಲಿ ಬಸ್‌ಗಳಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರಯಾಣಿಕರು ಕೆಎಸ್‌ಆರ್‌ಟಿಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿಗೆ ಈ ಮಾರ್ಗದಿಂದ ಸಂಚರಿಸಲಿವೆ ನೂತನ KSRTC ಬಸ್‌...

ಪ್ರಯಾಣಿಕರ ಆರೋಪ ನಿರಾಕರಿಸುವ ಕೆಎಸ್‌ಆರ್‌ಟಿಸಿ ಅಧಿಕಾರಿಗಳು, ಶಾಸಕರ ಪುತ್ರನ ಮದುವೆಗೆ 30 ಬಸ್‌ ಬಾಡಿಗೆಗೆ ನೀಡಲಾಗಿದೆ. ಪ್ರಯಾಣಿಕರಿಗೆ ತೊಂದರೆಯಾಗದಂತೆ ಚಿಕ್ಕಬಳ್ಳಾಪುರ, ಗೌರಿಬಿದನೂರು ಡಿಪೋಗಳ ಬಸ್‌ಗಳನ್ನು ಬಾಡಿಗೆಗೆ ನೀಡಲಾಗಿತ್ತು ಎಂದು ಹೇಳುತ್ತಾರೆ.

click me!