ಲಾಕ್‌ಡೌನ್‌ ಸಡಿಲ: ಮತ್ತೆ ನಗರದತ್ತ ಜನ

By Kannadaprabha NewsFirst Published Jul 24, 2020, 11:32 AM IST
Highlights

ರಾಜಧಾನಿಯಲ್ಲಿ ಲಾಕ್‌ಡೌನ್‌ ತೆರವಾದ ಎರಡನೇ ದಿನವಾದ ಗುರುವಾರ ಸಹ ಭಾರೀ ಸಂಖ್ಯೆಯಲ್ಲಿ ಜನರು ನಗರಕ್ಕೆ ಬಂದರು.

ಬೆಂಗಳೂರು(ಜು.24): ರಾಜಧಾನಿಯಲ್ಲಿ ಲಾಕ್‌ಡೌನ್‌ ತೆರವಾದ ಎರಡನೇ ದಿನವಾದ ಗುರುವಾರ ಸಹ ಭಾರೀ ಸಂಖ್ಯೆಯಲ್ಲಿ ಜನರು ನಗರಕ್ಕೆ ಬಂದರು.

ಇನ್ನು ಮುಂದೆ ಲಾಕ್‌ಡೌನ್‌ ಮಾಡದಿರಲು ರಾಜ್ಯ ಸರ್ಕಾರ ನಿರ್ಧರಿಸಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಬಹುತೇಕ ವಾಣಿಜ್ಯ, ವ್ಯಾಪಾರ, ನಿರ್ಮಾಣ ಚಟುವಟಿಕೆಗಳು ಚುರುಕುಗೊಂಡಿವೆ. ಸಣ್ಣ ಪುಟ್ಟವ್ಯಾಪಾರ ಮಾಡುವವರು, ಖಾಸಗಿ ಸಂಸ್ಥೆಗಳ ಉದ್ಯೋಗಿಗಳು, ಕೂಲಿ ಕಾರ್ಮಿಕರು ಮತ್ತೆ ನಗರದತ್ತ ಮುಖ ಮಾಡಿದ್ದಾರೆ.

ಹೊಸ ಕೈಗಾರಿಕಾ ನೀತಿಗೆ ಅಸ್ತು: 5 ಲಕ್ಷ ಕೋಟಿ ಹೂಡಿಕೆ ನಿರೀಕ್ಷೆ

ಗುರುವಾರ ನೆಲಮಂಗಲ ಟೋಲ್‌, ಸಾದಹಳ್ಳಿಯ ನವಯುಗ ಟೋಲ್‌ ಕೆಂದ್ರಗಳು, ಮೈಸೂರು-ಬೆಂಗಳೂರು, ಹೊಸೂರು ರಸ್ತೆ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ನಗರ ಪ್ರವೇಶಿಸುವ ರಸ್ತೆಗಳಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಿತ್ತು. ಟೋಲ್‌ ಕೇಂದ್ರಗಳ ಬಳಿ ವಾಹನಗಳು ಸಾಲುಗಟ್ಟಿನಿಂತಿದ್ದರಿಂದ ಕೆಲ ಕಾಲ ಸಂಚಾರ ದಟ್ಟಣೆ ಉಂಟಾಗಿತ್ತು.

ಶೇ.30 ಪಠ್ಯ ಕಡಿತದ ಬಗ್ಗೆ ವಾರದಲ್ಲಿ ಆದೇಶ..!

ಬಸ್‌ ಹಾಗೂ ರೈಲುಗಳಲ್ಲಿ ನಗರಕ್ಕೆ ಬರುತ್ತಿರುವವರ ಸಂಖ್ಯೆಗಿಂತ ಹೆಚ್ಚೇನೂ ಇಲ್ಲ. ಆದರೆ, ಖಾಸಗಿ ವಾಹನ, ಸ್ವಂತ ವಾಹನಗಳಲ್ಲಿ ಬರುತ್ತಿರುವವರ ಸಂಖ್ಯೆ ಹೆಚ್ಚಿದೆ. ಕಾರು, ಜೀಪು, ಅಟೋ, ದ್ವಿಚಕ್ರ ವಾಹನಗಳು, ಟೆಂಪೊಗಳಲ್ಲಿ ಜನರು ನಗರಕ್ಕೆ ಬರುತ್ತಿದ್ದಾರೆ. ಹಾಸನ, ತುಮಕೂರು, ಮಂಡ್ಯ, ರಾಮನಗರ, ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳ ಮೂಲದ ಜನರು ನಗರದತ್ತ ಧಾವಿಸುತ್ತಿದ್ದಾರೆ.

click me!