ಔಟರ್ ರಿಂಗ್ ರಸ್ತೆಯ 17 ಕಿ.ಮೀ ಮಾರ್ಗದ ವೈಟ್‌ ಟಾಪಿಂಗ್ ಕಾಮಗಾರಿ ಈಗ ಬೇಡ ಎಂದ ORRCA

Published : Aug 19, 2026, 06:52 AM IST
Bengaluru Outer Ring Road

ಸಾರಾಂಶ

ಔಟರ್ ರಿಂಗ್ ರೋಡ್‌ನಲ್ಲಿ ನೀಲಿ ಮೆಟ್ರೋ ರೈಲು ಸಂಚಾರ ಆರಂಭವಾದ ನಂತರವೇ ವೈಟ್ ಟಾಪಿಂಗ್ ಕಾಮಗಾರಿ ಆರಂಭಿಸುವಂತೆ ಔಟರ್ ರಿಂಗ್ ರೋಡ್ ಕಂಪನಿಗಳ ಅಸೋಸಿಯೇಷನ್ (ಒಆರ್‌ಆರ್‌ಸಿಎ) ಮನವಿ ಮಾಡಿದೆ. ಮೆಟ್ರೋ ಜೊತೆಗೆ ವೈಟ್‌ಟಾಪಿಂಗ್ ಕಾಮಗಾರಿ ಆರಂಭಿಸಿದರೆ ಈ ಮಾರ್ಗದ ವಾಹನ ಸವಾರರಿಗೆ ಭಾರಿ ಅನನುಕೂಲವಾಗುತ್ತದೆ ಎಂದು ಅಸೋಸಿಯೇಷನ್‌ ಹೇಳಿದೆ.

ಬೆಂಗಳೂರು: ಔಟರ್ ರಿಂಗ್ ರಸ್ತೆಯಲ್ಲಿ ಮೆಟ್ರೋ ರೈಲು ಸಂಚಾರ ಆರಂಭವಾದ ನಂತರವಷ್ಟೇ 450 ಕೋಟಿ ರು. ವೆಚ್ಚದ ವೈಟ್ ಟಾಪಿಂಗ್ ಕಾಮಗಾರಿ ಆರಂಭಿಸುವಂತೆ ಔಟರ್ ರಿಂಗ್ ರೋಡ್ ಕಂಪನಿಗಳ ಅಸೋಸಿಯೇಷನ್ (ಒಆರ್‌ಆರ್‌ಸಿಎ) ಜಿಬಿಎಗೆ ಮನವಿ ಮಾಡಿದೆ. ಸಾವಿರಾರು ಐಟಿ-ಬಿಟಿ ಕಂಪನಿಗಳು, ಟೆಕ್‌ಪಾರ್ಕ್‌ಗಳಿರುವ ಒಆರ್‌ಆರ್‌ನ 17 ಕಿ.ಮೀ ಮಾರ್ಗದಲ್ಲಿ ವೈಟ್‌ ಟಾಪಿಂಗ್ ಸೇರಿ ಸಮಗ್ರ ಅಭಿವೃದ್ಧಿ ಯೋಜನೆ ರೂಪಿಸಿ ಇದೇ ಅಕ್ಟೋಬರ್‌ನಲ್ಲಿ ಕೆಲಸ ಆರಂಭಿಸಲು ಜಿಬಿಎ ಯೋಜನೆ ಹಾಕಿಕೊಂಡಿದೆ. ಆದರೆ, ಈ ಮಾರ್ಗದಲ್ಲಿ ಹಾಲಿ ಮೆಟ್ರೋ ಕಾಮಗಾರಿ ನಡೆದಿದೆ. ಮೆಟ್ರೋ ಜೊತೆಗೆ ವೈಟ್‌ಟಾಪಿಂಗ್ ಕಾಮಗಾರಿ ಆರಂಭಿಸಿದರೆ ಈ ಮಾರ್ಗದ ವಾಹನ ಸವಾರರಿಗೆ ಭಾರಿ ಅನನುಕೂಲವಾಗುತ್ತದೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಮೆಟ್ರೋ ನೀಲಿ ಮಾರ್ಗ ಕಾಮಗಾರಿ

ಕೆ.ಆರ್.ಪುರದಿಂದ ಹೆಬ್ಬಾಳ ಮಾರ್ಗವಾಗಿ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಮೆಟ್ರೋ ನೀಲಿ ಮಾರ್ಗ ಕಾಮಗಾರಿಯನ್ನು 2027ರ ಮಧ್ಯಭಾಗದಲ್ಲಿ ಮುಗಿಸುವ ಗುರಿಯನ್ನು ಬಿಎಂಆರ್‌ಸಿಎಲ್ ಹಾಕಿಕೊಂಡಿದೆ. ಅಲ್ಲಿಯವರೆಗೆ ವೈಟ್ ಟಾಪಿಂಗ್ ಕಾಮಗಾರಿಗೆ ಸಂಬಂಧಿಸಿದಂತೆ ಸೇತುವೆ, ತಿರುವುಗಳು, ರಾಜಕಾಲುವೆ, ಯುಲಿಲಿಟಿಗಳ ಸ್ಥಳಾಂತರ, ಸೇರಿದಂತೆ ಬೇರೆ ಕೆಲಸಗಳನ್ನು ಎಂದಿನಂತೆ ಕೈಗೊಳ್ಳಬಹುದು ಎಂದು ಒಆರ್‌ಆರ್‌ಸಿಎ ತಿಳಿಸಿದೆ.

ಮನೆಯಿಂದ ಕೆಲಸ ಪರಿಹಾರವಲ್ಲ

ಕಾಮಗಾರಿ ಅವಧಿಯಲ್ಲಿ ದಟ್ಟಣೆ ತಪ್ಪಿಸಲು, ಕಂಪನಿಗಳು ತಮ್ಮ ಉದ್ಯೋಗಗಳಿಗೆ ವರ್ಕ್ ಫ್ರಾಂ ಅವಕಾಶವನ್ನು ಕಲ್ಪಿಸಬಹುದು ಎಂದು ಇತ್ತೀಚೆಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಜಿಬಿಎ ಅಧಿಕಾರಿಗಳು ಕಂಪನಿಗಳಿಗೆ ಸಲಹೆ ನೀಡಿದ್ದರು. ಆದರೆ, ಇದರಿಂದ ಸಮಸ್ಯೆಗೆ ಪರಿಹಾರವಾಗುವುದಿಲ್ಲ ಎಂದು ಅಸೋಸಿಯೇಷನ್‌ ಜಿಬಿಎಗೆ ತಿಳಿಸಿದೆ.

ಇದನ್ನೂ ಓದಿ: ಗಣೇಶ ಭಕ್ತರಿಗೆ ಬೆಲೆ ಏರಿಕೆ ಶಾಕ್: ಈ ಬಾರಿ ಶೇ. 15 ರಿಂದ 25 ರಷ್ಟು ದುಬಾರಿಯಾಗಲಿದೆ ಗಣಪತಿ ಮೂರ್ತಿ!

ಇದನ್ನೂ ಓದಿ: Bengaluru: ಸೋಂಕು ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಕ್ಲಾರೆನ್ಸ್ ಶಾಲೆಗೆ ನೋಟಿಸ್‌

PREV
Read more Articles on
click me!

Recommended Stories

Bengaluru: ಸೋಂಕು ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಕ್ಲಾರೆನ್ಸ್ ಶಾಲೆಗೆ ನೋಟಿಸ್‌
ಬೆಂಗಳೂರು ಇಸ್ಕಾನ್ ವಿವಾದ, ಯಾರಿಗೆ ಒಲಿಯಲಿದೆ ರಾಜಾಜಿನಗರದ ಹರೇ ಕೃಷ್ಣ ಮಂದಿರ?  ಹೊಸ ಪೀಠ ರಚನೆಗೆ ಸುಪ್ರೀಂ ಸಮ್ಮತಿ!