
ಬೆಂಗಳೂರು (ಡಿ.3): ಸರಿಯಾಗಿ ಬುಧವಾರ ಆಕೆ ಮದುವೆಯಾಗಿ ಮೂರು ತಿಂಗಳಾಗಿತ್ತು. ಇಬ್ಬರೂ ಅಕ್ಕಪಕ್ಕದ ಏರಿಯಾದವರು. ತುಂಬಾ ವರ್ಷಗಳಿಂದ ಪ್ರೀತಿ ಮಾಡಿದ್ದರು. ಆದರೆ, ಮದುವೆಯಾಗಿ ಮೂರು ತಿಂಗಳಿಗೆ ಸಂಸಾರ ಸರಿ ಬರದ ಕಾರಣಕ್ಕೆ ನವವಿವಾಹಿತೆ ಆ*ತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಹಿಳೆಯ ಕುಟುಂಬಸ್ಥರು, ಹುಡುಗನ ಕುಟುಂಬದವರ ಕಿರುಕುಳದಿಂದಾಗಿಯೇ ಆಕೆ ಸಾವು ಕಂಡಿದ್ದಾಳೆ ಎಂದು ಆರೋಪಿಸಿದ್ದಾರೆ.
ತುಂಬಾ ವರ್ಷಗಳ ಕಾಲ ಪ್ರೀತಿ ಮಾಡಿ ಮೂರು ತಿಂಗಳ ಹಿಂದೆ 23 ವರ್ಷದ ಅಮೂಲ್ಯ 30 ವರ್ಷದ ಅಭಿಷೇಕ್ ಎನ್ನುವವರನ್ನು ಮದುವೆ ಆಗಿದ್ದರು. ಅದರೆ, ಬುಧವಾರ ಆಕೆ ನೇಣಿಗೆ ಕೊರಳುಕೊಟ್ಟು ಆ*ತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬ್ಯಾಡರಹಳ್ಳಿ ಪೊಲೀಸ್ ಠಾಣವ್ಯಾಪ್ತಿಯ ವಿದ್ಯಾಮಾನ ನಗರದಲ್ಲಿ ಘಟನೆ ನಡೆದಿದೆ.
ಆಂಧ್ರಹಳ್ಳಿಯಲ್ಲಿ ಅಮೂಲ್ಯ ವಾಸವಾಗಿದ್ದರೆ, ವಿದ್ಯಮಾನ್ ನಗರದಲ್ಲಿ ಅಭಿಷೇಕ್ ವಾಸವಿದ್ದ. ಅಕ್ಕಪಕ್ಕದ ಏರಿಯಾ ಆಗಿದ್ದರಿಂದ ಇಬ್ಬರೂ ಪರಸ್ಪರ ಪ್ರೀತಿ ಮಾಡಿದ್ದರು. ಮೂರು ತಿಂಗಳ ಹಿಂದೆ ಮನೆಯವರನ್ನ ಒಪ್ಪಿಸಿ ಇಬ್ಬರು ಮದುವೆ ಆಗಿದ್ದರು. ಆದರೆ, ಇಂದು ಏಕಾಏಕಿ ಅಭಿಷೇಕ್ ಮನೆಯಲ್ಲಿ ಅಮೂಲ್ಯ ನೇಣಿಗೆ ಶರಣಾಗಿದ್ದಾಳೆ.
ಅಮೂಲ್ಯ ಸಾವಿಗೆ ಅಭಿಷೇಕ್ ಕುಟುಂಬಸ್ಥರೆ ಕಾರಣ ಎಂದು ಅಮೂಲ್ಯ ಅವರ ಕುಟುಂಬಸ್ಥರು ಆರೋಪ ಮಾಡಿದ್ದು, ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.