ಮೋನಿಕಾ ಜೊತೆ ಪೊಲೀಸಪ್ಪನ ಅಕ್ರಮ ಸಂಬಂಧ ಕೇಸ್‌ಗೆ ಟ್ವಿಸ್ಟ್, ಕಿಚುಕಿಚುಮಾ ಎಂದ ರೀಲ್ಸ್ ರಾಣಿ

Published : Dec 13, 2025, 10:03 PM IST
Bengaluru Love case

ಸಾರಾಂಶ

ಮೋನಿಕಾ ಜೊತೆ ಪೊಲೀಸಪ್ಪನ ಅಕ್ರಮ ಸಂಬಂಧ ಕೇಸ್‌ಗೆ ಟ್ವಿಸ್ಟ್, ಕಿಚುಕಿಚುಮಾ ಎಂದ ರೀಲ್ಸ್ ರಾಣಿ, ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾದ ಪೊಲೀಸ್ ಪೇದೆ ಜೊತೆ ಮೋನಿಕಾ ಪರಾರಿಯಾದ ಘಟನೆ ಭಾರಿ ಕೋಲಾಹಲ ಸೃಷ್ಟಿಸಿದೆ. ಇದೀಗ ಸ್ವತಃ ಮೋನಿಕಾ ಕೇಸ್‌ಗೆ ಟ್ವಿಸ್ಟ್ ಕೊಟ್ಟಿದ್ದಾಳೆ.

ಬೆಂಗಳೂರು (ಡಿ.13) ಇನ್‌ಸ್ಟಾಗ್ರಾಂನಲ್ಲಿ ಮೋನಿಕಾ ಮೋನಿಕಾ ಎಂದು ರೀಲ್ಸ್ ಮಾಡುತ್ತಿದ್ದ ಮೋನಿಕಾ ಹಾಗೂ ಹೆಚ್‌ಎಸ್ಆರ್ ಲೇಔಟ್ ಪೊಲೀಸ್ ಪೇದೆ ರಾಘವೇಂದ್ರ ನಡುವಿನ ಅಕ್ರಮ ಸಂಬಂಧ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ರೀಲ್ಸ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಮೋನಿಕಾ ಹಾಗೂ ಪೇದೆ ರಾಘವೇಂದ್ರಗೆ ಪರಿಚಯವಾಗಿತ್ತು. ಇಬ್ಬರಿಗೂ ಮದುವೆಯಾಗಿ ಮಕ್ಕಳಿದೆ. ಆದರೆ ಇವರ ಪ್ರೀತಿ ಇದನ್ನು ಮೀರಿತ್ತು. ಹೀಗಾಗಿ ಮೈಸೂರಿನಿಂದ ರಾಘವೇಂದ್ರನಿಗಾಗಿ ಮೋನಿಕಾ ಓಡೋಡಿ ಬಂದಿದ್ದಳು. ಅಕ್ರಮ ಸಂಬಂಧ ಕಾರಣ ರಾಘವೇಂದ್ರ ಅಮಾನತ್ತುಗೊಂಡಿದ್ದರೆ, ಈ ಪ್ರಕರಣ ಭಾರಿ ಕೋಲಾಹಲ ಸೃಷ್ಟಿಸಿದೆ. ರಾಜ್ಯದಲ್ಲಿ ಈ ಕೇಸ್ ರಂಪಾಟ ಮಾಡುತ್ತಿದ್ದಂತೆ ಮೂವರನ್ನು ಚಂದ್ರಲೇಔಟ್ ಪೊಲೀಸರು ಕರೆಯಿಸಿ ಹೇಳಿಕೆ ಪಡೆದಿದ್ದಾರೆ. ಈ ವೇಳೆ ಇಡೀ ಪ್ರಕರಣಕ್ಕೆ ಮೋನಿಕಾ ಟ್ವಿಸ್ಟ್ ಕೊಟ್ಟಿದ್ದಾಳೆ.

ರೀಲ್ಸ್ ಮೋನಿಕಾ ಮತ್ತು ಪೊಲೀಸ್ ಸಿಬ್ಬಂದಿ ಲವ್ ಕೇಸ್

ಮೋನಿಕಾ ಹಾಗೂ ಪ್ರಿಯಕರ ರಾಘವೇಂದ್ರ ಜೊತೆಯಾಗಿ ಆಗಮಿಸಿದರೆ,ಇತ್ತ ಮೋನಿಕಾ ಪತಿ ಮಂಜುನಾಥ್ ಕೂಡ ಠಾಣೆಗೆ ಆಗಮಿಸಿದ್ದಾರೆ. ಪೊಲೀಸ್ ವಿಚಾರಣೆ ಬಳಿಕ ಹೇಳಿಕೆ ನೀಡಿರುವ ಮೋನಿಕಾ ಹೊಸ ಮಾಹಿತಿ ಬಹಿರಂಗಪಡಿಸಿದ್ದಾಳೆ. ಗಂಡ ಮಂಜುನಾಥ್‌ಗೆ ಆನ್‌ಲೈನ್ ಗೇಮಿಂಗ್ ಚಟ ಇದೆ. ಆನತಿಗೆ ನಾನೇ ದುಡ್ಡು ಕೊಡಬೇಕು, ಸಿಗರೇಟು ನಾನೇ ತಂದುಕೊಡಬೇಕು. ಗಂಡ ಮಂಜುನಾಥ್ ಸೈಕೋ. ಮಗನಿಗೆ ಒಂದು ರೂಪಾಯಿ ಖರ್ಚು ಮಾಡಿಲ್ಲ.ಇವತ್ತು ಮಗನ ಹುಟ್ಟು ಹಬ್ಬ ಇದೆ. ಗಂಡ ಏನು ಮಾಡಿದ್ದಾನೆ ಎಂದು ಮೋನಿಕಾ ಪ್ರಶ್ನಿಸಿದ್ದಾಳೆ.

ಮಗನ ಹುಟ್ಟು ಹಬ್ಬಕ್ಕೆ ಇನ್‌ಸ್ಟಾದಲ್ಲಿ ಸ್ಟೋರಿ ಹಾಕುತ್ತೇನೆ ಎಂದು ಈ ರೀತಿ ಮಾಡಿದ್ದಾನೆ. ಗಂಡ ಮಂಜುನಾಥ್‌ನ ಬಿಟ್ಟು ಮೂರು ತಿಂಗಳಾಗಿದೆ. ಗಂಡ ಕೆಲಸಕ್ಕೆ ಹೋಗಲ್ಲ, ನನ್ನ, ಮಗನ ಸಾಕಲು ಆತನಿಗೆ ಆಗುತ್ತಿಲ್ಲ. ನನಗೆ ರಾಘವೇಂದ್ರ ಸಹಾಯ ಮಾಡಿದ್ದಾನೆ. ಗಂಡ ಸರಿಯಾಗಿ ಇದ್ದರೆ ಸಂಸಾರ ನಡೆಯುತ್ತದೆ. ಶೋಕಿ ಗಂಡನಿಗೆ ಸಿಗರೇಟು ನಾನು ಕೊಡಬೇಕು, ಬಟ್ಟೆಗೆ ಐರನ್ ನಾನು ಹಾಕಬೇಕು. ನಾನೇ ಉಡುಗೊರೆಯಾಗಿ ಗಂಡನಿಗೆ ಕಡಗ, ಸೇರಿ ಇತರ ಆಭರಣ ಕೊಡಿಸಿದ್ದೆ. ನನಗೆ ಮೂರು ಸೈಟ್ ಇದೆ. ಆದರೆ ಗಂಡ ನನಗೆ ತಾಳಿ ಕೂಡ ಕೊಡಿಸಿಲ್ಲ.

ಪ್ರಜ್ವಲ್ ಎಂಬಾತನಿಂದ ಸಂಸಾರ ಹಾಳಾಯ್ತು

ಪ್ರಜ್ವಲ್ ಎಂಬಾತನಿಂದ ನನ್ನ ಸಂಸಾರ ಹಾಳಾಯಿತು ಎಂದು ಮೋನಿಕಾ ಹೇಳಿದ್ದಾಳೆ. ಮಗು ಅವನಿಗೆ ಮಾತ್ರ ಮಗು ಅಲ್ಲ, ನನಗು ಕೂಡ ಮಗು..ರಾಘವೇಂದ್ರ ಕೆಲಸದಲ್ಲಿ ಇರೋದ್ರಿಂದ ಉದ್ದೇಶ ಪೂರ್ವಕವಾಗಿ ಗಂಡ ಮಂಜುನಾಥ್ ಈ ರೀತಿ ಮಾಡುತ್ತಿದ್ದಾನೆ. ಮುಂದೆ ನನಗೆ ಏನಾದ್ರು ಅದರೆ ಗಂಡ ಮಂಜುನಾಥ್ ಸೇರಿ ಮೂವರು ಕಾರಣ. ನನ್ನ ಮಗುಗೆ ಏನಾದ್ರು ಅದ್ರೆ ಅವನೇ ಕಾರಣ ಎಂದಿದ್ದಾಳೆ. ನನ್ನ ಅಣ್ಣ, ತಾಯಿಗೆ ತೊಂದರೆ ಆದ್ರೆ ಅವನೇ ಕಾರಣ ಎಂದಿದ್ದಾಳೆ.

ರಾಘವೇಂದ್ರ ಇನ್ಸ್ಟಾದಲ್ಲಿ ನನಗೆ ಪರಿಚಯ ಆಗಿದ್ದ.ಗಂಡ ಮಂಜುನಾಥ್ ಆರೋಪಿಸಿದಂತೆ ನಾನು ಏನನ್ನೂ ಕದ್ದುಕೊಂಡು ಹೋಗಿಲ್ಲ.ನಮ್ಮ ತಂದೆ ಸಾವಿನಿಂದ ನಾವು ನೋವಿನಲ್ಲಿ ಇದ್ದೀವಿ. ಆದರೆ ಮಂಜುನಾಥ್ ಎಲ್ಲಾ ಸಮಯದಲ್ಲೂ ದುಡ್ಡು ದುಡ್ಡು ಅಂತಾನೆ. ಆತನಿಗೆ ಹೆಂಡತಿ ಬೇಡ. ಡಿವೋರ್ಸ್ ಕೊಡಲು 25 ಲಕ್ಷ ರೂಪಾಯಿ ಕೊಡು ಎಂದು ಬೇಡಿಕೆ ಇಟ್ಟಿದ್ದಾನೆ. ಈ ರೀತಿಯ ಗಂಡ ನನಗೆ ಬೇಡ. ನಾನು ಕಾನೂನು ಹೋರಾಟ ಮಾಡುತ್ತೇನೆ ಎಂದಿದ್ದಾಳೆ.

ಮೋನಿಕಾ ಮೊದಲ ಪತಿಯಿಂದ ದೂರವಾಗಿ ಮಂಜುನಾಥ್ ಜೊತೆ ಸಂಸಾರ ಸಾಗಿಸಿದ್ದಳು. ಆದರೆ ಜೂನ್ ತಿಂಗಳಲ್ಲಿ ಮೋನಿಕಾಗೆ ರಾಘವೇಂದ್ರ ಪರಿಚಯವಾಗಿದ್ದಾನೆ. ಎರಡೇ ತಿಂಗಳಲ್ಲಿ ಪ್ರೇಮಕತೆ ಶುರುವಾಗಿದೆ. ಬಳಿಕ ಸುತ್ತಾಟ ಶುರುವಾಗಿದೆ. ಇದರ ನಡುವೆ ಸದ್ದಿಲ್ಲದೆ ರಾಘವೇಂದ್ರನ ಜೊತೆ ಪರಾರಿಯಾಗಿದ್ದಾಳೆ.

 

 

PREV
Read more Articles on
click me!

Recommended Stories

ಬೆಂಗಳೂರು: 2 ಲಕ್ಷ ಬೆಲೆಯ ಗಿಳಿ ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ಯುವಕ!
ನಟಿ ಶಿಲ್ಪಾ ಶೆಟ್ಟಿ ಒಡೆತನದ ಪಬ್‌ನಲ್ಲಿ ಉದ್ಯಮಿಯಿಂದ ಗಲಾಟೆ; ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನ!