
ಬೆಂಗಳೂರು: 'ಅರೇಂಜ್ಡ್ ಮ್ಯಾರೇಜ್ ಒಂದು ಸ್ಕ್ಯಾಮ್' ಹೀಗೊಂದು ಲೈನ್ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ಸ್ನೇಹಿತನ ಮದುವೆ ವಿಚಾರವಾಗಿ ಗೆಳೆಯನೊಬ್ಬ ಹಂಚಿಕೊಂಡಿರುವ ಈ ಲೈನ್ ಭಾರೀ ಚರ್ಚೆಗೆ ಕಾರಣವಾಗಿದೆ.
ತಿಂಗಳಿಗೆ ಬರೋಬ್ಬರಿ 3 ಲಕ್ಷ ಲಕ್ಷ ಸಂಬಳ! 5 ಅಡಿ 9 ಇಂಚು ಎತ್ತರ! ನೋಡೋದಕ್ಕೆ ಚೆನ್ನಾಗಿಯೇ ಇದ್ದಾನೆ. ಹೀಗಿದ್ದೂ ಕಳೆದ ಎರಡು ಮದುವೆಯಾಗಲು ಹುಡುಗಿಯೇ ಸಿಗುತ್ತಿಲ್ಲ ಎಂದು ಬರೆಯಲಾಗಿರುವ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿದೆ. ಅಜಿಂಕ್ಯ ರೇವಣ್‌ಕರ್ ಅನ್ನೋರು ತಮ್ಮ ಗೆಳೆಯನ ಬಗ್ಗೆ ಬರೆದುಕೊಂಡ ಪೋಸ್ಟ್ ಇದಾಗಿದೆ. ಅದಕ್ಕೆ ಅವರು ಅರೇಂಜ್ಡ್ ಮ್ಯಾರೇಜ್ ಎನ್ನುವುದು ಒಂದು ದೊಡ್ಡ ಸ್ಕ್ಯಾಮ್ (Arranged marriage is a scam) ಎಂದು ಬರೆದಿದ್ದಾರೆ.
ಸ್ವಿಗ್ಗಿ (Swiggy) ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ 31 ವರ್ಷದ ಯುವಕನೊಬ್ಬ ತಿಂಗಳಿಗೆ ₹3 ಲಕ್ಷ ದುಡಿಯುತ್ತಿದ್ದಾನೆ. ಕಳೆದ ಎರಡು ವರ್ಷಗಳಿಂದ ವಧು ಸಿಗುತ್ತಿಲ್ಲ. ತಿಂಗಳಿಗೆ ₹50,000 ಗಳಿಸುವ ಯುವತಿಯರೂ ಈತನ ಪ್ರಪೋಸಲ್ ಒಪ್ಪುತ್ತಿಲ್ಲ ಎಂದಿರುವ ಆತ, ಹುಡುಗಿಯೊಬ್ಬಳು ಕಳುಹಿಸಿರುವ ಸಂದೇಶದ ಸ್ಕ್ರೀನ್‌ಶಾಟ್ ಕೂಡ ಹಂಚಿಕೊಂಡಿದ್ದಾನೆ.
ನಾವಿಬ್ಬರೂ ಜೊತೆಯಾಗಿ ಬಾಳಲು ಸಾಧ್ಯವಿಲ್ಲ ಅನಿಸುತ್ತಿದೆ. ಇದನ್ನು ಇಲ್ಲಿಗೆ ಮುಗಿಸೋಣ. ನಿಮ್ಮ ಮುಂದಿನ ಭವಿಷ್ಯ ಚೆನ್ನಾಗಿರಲಿ ಎಂದು ಹಾರೈಸಿ ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ್ದಾಳೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದಂತೆಯೇ ದೊಡ್ಡ ಚರ್ಚೆಗಳೇ ಶುರುವಾಗಿವೆ.
ಕೆಲವು ಸಂತ್ರಸ್ತ ಹುಡುಗರು ತಮ್ಮದೇ ರೀತಿಯಲ್ಲಿ ನಿವೇದನೆಯನ್ನ ತೋಡಿಕೊಂಡಿದ್ದಾರೆ. ಹೆಣ್ಮಕ್ಕಳಲ್ಲಿ ನಿರೀಕ್ಷೆಗಳು ಹೆಚ್ಚಾಗಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಎಲ್ಲದಕ್ಕೂ ಹಣವೇ ಅಲ್ಲ. ಹೆಚ್ಚು ಸಂಬಳ ಪಡೆದ ತಕ್ಷಣವೇ ಮದುವೆಯಾಗುವುದಿಲ್ಲ. ಯುವಕನ ವ್ಯಕ್ತಿತ್ವ ಮತ್ತು ಗುಣ ನಡತೆಯೂ ಮುಖ್ಯ. ಹಣವೊಂದೇ ಮದುವೆಗೆ ಅರ್ಹತೆಯಲ್ಲ ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಇನ್ನು, ಕೆಲವರು ಮೊದಲು ಡೇಟಿಂಗ್ ಮಾಡಿ.. ನಂತರ ಮದುವೆಯಾಗಿ ಎಂದು ಸಲಹೆ ನೀಡಿದ್ದಾರೆ. ಬೆಂಗಳೂರಿನಂತಹ ದೊಡ್ಡ ನಗರದಲ್ಲಿ ನೀವು ಅಷ್ಟೊಂದು ಹಣ ಗಳಿಸುತ್ತೀರಿ ಎಂದರೆ ಯಾಕೆ ಆರೇಂಜ್ ಮ್ಯಾರೇಜ್‌ಗೆ ಕಾಯ್ತೀರಿ? ನೇರವಾಗಿ ನೀವು ಡೇಟಿಂಗ್ ನಡೆಸಿ ಮದುವೆ ಆಗಬಹುದಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ನು ಆರೇಂಜ್ ಮ್ಯಾರೇಜ್ ಸ್ಕ್ಯಾಮ್ ಎಂದು ಬರೆದಿರೋದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕೆಲವು ನೆಟ್ಟಿಗರು..ಜೀವನ ಸಂಗಾತಿ ಆಯ್ಕೆ ಮಾಡಿಕೊಳ್ಳುವ ಹಕ್ಕು ಎಲ್ಲರಿಗೂ ಇದೆ. ಇದನ್ನು ಸ್ಕ್ಯಾಮ್ ಎನ್ನಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ. ಒಟ್ಟಾರೆ ಒಬ್ಬ ವ್ಯಕ್ತಿಗೆ ಒಳ್ಳೆಯ ಕೆಲಸ ಇದೆ, ಕೈತುಂಬಾ ಸಂಬಳ ಬರುತ್ತದೆ ಎಂದಾಕ್ಷಣ ಮದುವೆ ಆಗಲು ಸಾಧ್ಯವಿಲ್ಲ.
Arranged marriage is a scam.
My friend (31, 5’ 9”, decent looking) works in Swiggy, makes 3L/mo in B’lore is getting rejected left-right-center from girls making 50k/mo since last 2 years.
Date-to-marry. https://t.co/eYwrpZ6gnv
— Ajinkya Revdikar (@ajinkyaaar) October 4, 2026