ಅಕ್ಟೋಬರ್‌ನಲ್ಲಿ ಸಾಲು ಸಾಲು ರಜೆ: ಟ್ರಿಪ್ ಪ್ಲಾನ್ ಮಾಡೋ ಮುನ್ನ ಹಾಲಿಡೇ ಲಿಸ್ಟ್‌ ನೋಡಿ

By Anusha Kb  |  First Published Sep 26, 2024, 9:00 PM IST

ಅಕ್ಟೋಬರ್ ತಿಂಗಳು ಹಬ್ಬ ಹರಿದಿನಗಳಿಂದ ಕೂಡಿದ್ದು, ದಸರಾ ಮತ್ತು ದೀಪಾವಳಿಯಂತಹ ಪ್ರಮುಖ ಹಬ್ಬಗಳಿಗೆ ರಜೆ ಇರುತ್ತದೆ. ಬ್ಯಾಂಕುಗಳಿಗೂ ಈ ತಿಂಗಳಲ್ಲಿ 15 ದಿನ ರಜೆ ಇರುತ್ತದೆ. ಈ ಮಾಹಿತಿಯನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣ ಮತ್ತು ಇತರ ಯೋಜನೆಗಳನ್ನು ರೂಪಿಸಿಕೊಳ್ಳಿ


ನವದೆಹಲಿ: ಅಕ್ಟೋಬರ್ ಎಂದರೆ ಹಬ್ಬಗಳ ತಿಂಗಳು ಜೊತೆಗೆ ದಸರಾ ನವರಾತ್ರಿಯೂ ಮುಗಿಯುತ್ತಿದ್ದಂತೆ ದೀಪಾವಳಿಯೂ ಆರಂಭವಾಗುವುದರಿಂದ ಈ ತಿಂಗಳಲ್ಲಿ ಸಾಲು ಸಾಲು ರಜೆಗಳಿವೆ. ಅದರ ಜೊತೆಗೆ ಶಾಲಾ ಮಕ್ಕಳಿಗೆ ಮಧ್ಯವಾರ್ಷಿಕ ರಜೆ ಸಿಗುವುದರಿಂದ, ಸರ್ಕಾರಿ ಉದ್ಯೋಗಿಗಳು ಹಾಗೂ ಉದ್ಯೋಗಕ್ಕಾಗಿ ಪಟ್ಟಣಗಳಲ್ಲಿ ನೆಲೆ ನಿಂತಿರುವ ಜನರು ತಮ್ಮ  ಇಡೀ ಕುಟುಂಬವೇ ತಮ್ಮೂರಿಗೆ ಪ್ರಯಾಣ ಬೆಳೆಸುತ್ತಾರೆ. ಹಾಗಿದ್ರೆ ಅಕ್ಟೋಬರ್‌ ತಿಂಗಳಲ್ಲಿ ಎಷ್ಟು ರಜೆಗಳಿವೆ ಎಂಬ ಮಾಹಿತಿ ಇಲ್ಲಿದೆ ನೋಡಿ. ಈ ರಜೆಗಳನ್ನ ನೋಡಿಕೊಂಡು ನೀವು ನಿಮ್ಮ ಊರಿಗೆ ಬಸ್, ವಿಮಾನ, ರೈಲು ಬುಕ್ ಮಾಡಬಹುದಾಗಿದೆ. 

ಹಲವು ರಾಜ್ಯಗಳು ದಸರಾ ಹಾಗೂ ದೀಪಾವಳಿಗೆ ದೀರ್ಘಾರಜೆಗಳನ್ನು ಘೋಷಿಸುತ್ತವೆ. ರಜೆಯ ಅವಧಿ ಒಂದೊಂದು ಕಡೆ ಒಂದೊಂದು ರೀತಿ ಇರುತ್ತದೆ. ಕರ್ನಾಟಕದಲ್ಲಿ ದಸರಾ ರಜೆ ತುಂಬಾ ದೀರ್ಘವಾಗಿರುತ್ತದೆ. ಇದೇ ಸಮಯದಲ್ಲಿ ಮಕ್ಕಳಿಗೆ ಮಧ್ಯವಾರ್ಷಿಕ ರಜೆ ಇರುವುದರಿಂದ ಪೋಷಕರು ಲಾಂಗ್ ಟ್ರಿಪ್‌ ಪ್ಲಾನ್ ಮಾಡಿಕೊಳ್ಳಬಹುದಾಗಿದೆ. ಆಕ್ಟೋಬರ್ 7 ರಿಂದ ಆಕ್ಟೋಬರ್‌ 12ರವರೆಗೆ ದಸರಾ ರಜೆ ಇರುತ್ತದೆ. ಹಾಗೆಯೇ ಆಕ್ಟೋಬರ್ 28ರಿಂದ ನವಂಬರ್ 2ರವರೆಗೆ ದೀಪಾವಳಿಗೆ ರಜೆ ಇರುತ್ತದೆ. 

Tap to resize

Latest Videos

ಬ್ಯಾಂಕುಗಳಿಗೂ ಈ ತಿಂಗಳಲ್ಲಿ 15 ದಿನ ರಜೆ

ಅಕ್ಟೋಬರ್‌ನಲ್ಲಿ ಹಬ್ಬಗಳು ಹಾಗೂ ಇತರ ಪ್ರಮುಖ ದಿನಗಳನ್ನು ಸೇರಿಸಿ ಒಟ್ಟು 15 ದಿನಗಳ ಕಾಲ ಬ್ಯಾಂಕುಗಳಿಗೆ ರಜೆ ಇರುತ್ತದೆ.  ಇದು ಭಾನುವಾರ ಮತ್ತು ಎರಡನೇ ಮತ್ತು ನಾಲ್ಕನೇ ಶನಿವಾರಗಳನ್ನು ಒಳಗೊಂಡಿದೆ. ಈ ತಿಂಗಳಲ್ಲಿ, ವಿವಿಧ ರಾಜ್ಯಗಳಲ್ಲಿ ಗಾಂಧಿ ಜಯಂತಿ, ನವರಾತ್ರಿ, ದಸರಾ, ಕರ್ವಾ ಚೌತ್, ಧನ್ತೇರಸ್ ಮತ್ತು ದೀಪಾವಳಿಯಂತಹ ಹಲವಾರು ಪ್ರಮುಖ ಹಬ್ಬಗಳನ್ನು ಆಚರಿಸಲಾಗುತ್ತದೆ.

ಆಕ್ಟೋಬರ್‌ ತಿಂಗಳ ಬ್ಯಾಂಕ್ ಹಾಲಿಡೇಗಳ ಲಿಸ್ಟ್ ಇಲ್ಲಿದೆ

ಅಕ್ಟೋಬರ್‌ 2 : ಗಾಂಧಿ ಜಯಂತಿ
ಅಕ್ಟೋಬರ್‌ 3: ನವರಾತ್ರಿ
ಅಕ್ಟೋಬರ್ 6: ಭಾನುವಾರ ವಾರದ ರಜಾದಿನ
ಅಕ್ಟೋಬರ್ 10: ಮಹಾ ಸಪ್ತಮಿ ದುರ್ಗಾಪೂಜೆ
ಅಕ್ಟೋಬರ್‌ 11: ಮಹಾಷ್ಟಮಿ
ಅಕ್ಟೋಬರ್‌ 12 ದಸರಾ ಹಾಗೂ 2ನೇ ಶನಿವಾರದ ರಜೆ
ಅಕ್ಟೋಬರ್‌  13: ಭಾನುವಾರ ವಾರದ ರಜಾದಿನ
ಅಕ್ಟೋಬರ್‌ 14: ದುರ್ಗಾಪೂಜೆ
ಅಕ್ಟೋಬರ್‌  16 ಲಕ್ಷ್ಮಿ ಪೂಜೆ
ಅಕ್ಟೋಬರ್ 17: ಮಹರ್ಷಿ ವಾಲ್ಮೀಕಿ ಜಯಂತಿ
ಅಕ್ಟೋಬರ್‌ 20: ಮತ್ತೆ ಭಾನುವಾರ
ಅಕ್ಟೋಬರ್ 27 ಭಾನುವಾರ
ಅಕ್ಟೋಬರ್‌  31 ನರಕ ಚತುರ್ದಶಿ

ಕರ್ನಾಟಕ ಮಾತ್ರವಲ್ಲದೇ ಹಲವಾರು ಇತರ ರಾಜ್ಯಗಳು ದಸರಾ ಮತ್ತು ದೀಪಾವಳಿಗೆ ಬಹು ದಿನಗಳ ರಜೆಯನ್ನು ನೀಡುತ್ತಿವೆ. ಹೀಗಾಗಿ ಈ ತಿಂಗಳು ಹಬ್ಬದ ಆಚರಣೆ, ವಿಶ್ರಾಂತಿ ಮತ್ತು ಕುಟುಂಬದೊಂದಿಗೆ ಸಮಯ ಕಳೆಯಲು ಅವಕಾಶವನ್ನು ಒದಗಿಸುತ್ತದೆ. 
 

click me!