ಬೆಂಗಳೂರು ಟ್ರಾಫಿಕ್‌ನಲ್ಲಿ ಸಿಲುಕಿ ಹೈರಾಣಾದ ರೈಲು, ಇದು ಅಚ್ಚರಿಯಾದರೂ ಸತ್ಯ!

By Chethan Kumar  |  First Published Sep 25, 2024, 6:01 PM IST

ಬೆಂಗಳೂರು ಟ್ರಾಫಿಕ್‌ನಲ್ಲಿ ಗಂಟೆಗಟ್ಟಲೆ ಕಾರು, ಬೈಕ್ ಸೇರಿ ವಾಹನಗಳು ನಿಂತಿರುವುದು ಸರ್ವೆ ಸಾಮಾನ್ಯ. ಇದೀಗ ಈ ಟ್ರಾಫಿಕ್‌ನಿಂದ ರೈಲು ಕೂಡ ಹೊರತಾಗಿಲ್ಲ. ಬೆಂಗಳೂರು ಟ್ರಾಫಿಕ್‌ನಲ್ಲಿ ಸಿಲುಕಿದ ರೈಲಿನ ವಿಡಿಯೋ ಇದೀಗ ನಗರ ಟ್ರಾಫಿಕ್ ಸಮಸ್ಯೆ ಚಿತ್ರಣ ಬಿಚ್ಚಿಡುತ್ತಿದೆ.
 


ಬೆಂಗಳೂರು(ಸೆ.25) ದೇಶದ ಎಲ್ಲಾ ನಗರಗಳಲ್ಲಿ ಟ್ರಾಫಿಕ್ ಸಮಸ್ಯೆ ಇದ್ದೆ ಇದೆ. ಆದರೆ ಬೆಂಗಳೂರಿನಲ್ಲಿ ಮಾತ್ರ ಊಹೆಗೂ ನಿಲುಕದ್ದು. ಹೀಗಾಗಿ ಬೆಂಗಳೂರು ಟ್ರಾಫಿಕ್ ಕುರಿತು ಹಲವು ಮೀಮ್ಸ್, ಜೋಕ್ಸ್ ಹರಿದಾಡುತ್ತಲೇ ಇರುತ್ತದೆ. ಇದೀಗ ಮತ್ತೆ ಬೆಂಗಳೂರು ಟ್ರಾಫಿಕ್ ದೇಶದಲ್ಲಿ ಸದ್ದು ಮಾಡುತ್ತಿದೆ. ಕಾರಣ ತುಂಬಿ ತುಳುಕುವ ವಾಹನಗಳಿಂದ ವಾಹನ ಸವಾರರು ಪರದಾಡುವುದು ಹೊಸದೇನಲ್ಲ. ಆದರೆ ದೇಶದಲ್ಲೇ ಮೊದಲ ಬಾರಿಗೆ ರೈಲು ಕೂಡ ಬೆಂಗಳೂರಿನ ಟ್ರಾಫಿಕ್‌ಗೆ ಹೈರಣಾದ ಘಟನೆ ನಡೆದಿದೆ. ಈ ರೈಲಿನ ವಿಡಿಯೋ ಇದೀಗ ದೇಶಾದ್ಯಂತ ಹರಿದಾಡುತ್ತಿದೆ.

ಸುಧೀರ್ ಚಕ್ರವರ್ತಿ ಅನ್ನೋ ಇನ್‌ಸ್ಟಾಗ್ರಾಂ ಬಳಕೆದಾರ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಇದು ಬೆಂಗಳೂರು ವಿಚಾರ, ನಾವು, ನೀವು ಮಾತ್ರವಲ್ಲ, ರೈಲು ಕೂಡ ಟ್ರಾಫಿಕ್ ಸಂಕಷ್ಟದಿಂದ ಹೊರತಾಗಿಲ್ಲ ಎಂದು ಬರೆದುಕೊಂಡಿದ್ದಾರೆ. ಇದು ಬೆಂಗಳೂರಿನ ಔಟರ್ ರಿಂಗ್ ರೋಡ್ ಮುನ್ನೇಲಕೊಲ್ಲಾ ರೈಲು ಗೇಟು ಬಳಿ ನಡೆದಿರುವ ಘಟನೆ ಅನ್ನೋ ಮಾಹಿತಿಯೂ ಬಹಿರಂಗವಾಗಿದೆ.

Latest Videos

undefined

ಟಿಕೆಟ್ ಇಲ್ಲದೆ ಟ್ರೈನ್ ಹತ್ತಿದ ಅಳಿಲು, ರೈಲು ಪ್ರಯಾಣ ರದ್ದುಗೊಳಿಸಿದ ಅಧಿಕಾರಿಗಳು!

ಬೆಂಗಳೂರಿನ ಹಲವು ಭಾಗದಲ್ಲಿ ಟ್ರಾಫಿಕ್ ಸಮಸ್ಯೆ ವಿಪರೀತ ಅನ್ನೋದು ಹೊಸದೇನಲ್ಲ. ಇದಕ್ಕೆ ಔಟರ್ ರಿಂಗ್ ಮುನ್ನೇಕೊಲ್ಲಾಲ್ ಗೇಟ್ ಕೂಡ ಹೊರತಾಗಿಲ್ಲ. ಪ್ರತಿ ದಿನ ಇಲ್ಲಿ ಟ್ರಾಫಿಕ್ ಜಾಮ್ ಸರ್ವೇ ಸಾಮಾನ್ಯವಾಗಿದೆ. ರೈಲ್ವೇ ಗೇಟ್ ಬಳಿ ವಾಹನಗಳು ನಿಂತಲ್ಲೇ ಒಂದೆರೆಡು ಗಂಟೆ ನಿಂತಿರುತ್ತದೆ. ಹೀಗೆ ರೈಲ್ವೇ ಗೇಟ್ ತೆರೆದು ಮತ್ತೊಂದು ರೈಲು ಬರುವಾಗಲೂ ಇಲ್ಲಿನ ಟ್ರಾಫಿಕ್ ಕ್ಲಿಯರ್ ಆಗಲ್ಲ ಅನ್ನೋದು ಇಲ್ಲಿ ಓಡಾಡುವ ಜನರ ಮಾತು. ಹೀಗಾಗಿ ಟ್ರೈನ್ ಕೂಡ ಬೆಂಗಳೂರು ಟ್ರಾಫಿಕ್‌ಗೆ ಸಿಲುಕಿ ಒದ್ದಾಡಿದೆ ಎಂದು ಹಲವರು ವಿಡಿಯೋಗೆ ಕಮೆಂಟ್ ಮಾಡಿದ್ದಾರೆ.

ಈ ವಿಡಿಯೋದಲ್ಲಿ ರೈಲ್ವೇ ಕ್ರಾಸಿಂಗ್ ಬಳಿ ರೈಲು ನಿಂತಿದೆ. ರೈಲು ಗೇಟುಗಳು ಓಪನ್ ಆಗಿವೆ.ಸಾಮಾನ್ಯವಾಗಿ ರೈಲು ಬರುವಾಗ ಗೇಟು ಮುಚ್ಚಲಾಗುತ್ತದೆ. ರೈಲು ಸಾಗಿದ ಬಳಿಕ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ. ಆದರೆ ಇಲ್ಲಿ ಗೇಟ್ ಮುಚ್ಚಲು ಟ್ರಾಫಿಕ್ ಜಾಮ್ ಬಿಡುವುದಿಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. 

 

 

ಈ ರೈಲ್ವೇ ಕ್ರಾಸಿಂಗ್ ಬಳಿ ವಾಹನಗಳು ಸಾಲು ಗಟ್ಟಿ ನಿಂತಿರುತ್ತದೆ. ಈ ವಿಡಿಯೋ ಅಸಲಿ ಬೆಂಗಳೂರಿನ ಕತೆ ಹೇಳುತ್ತಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದೇ ವೇಳೆ ಹಲವರು ಈ ವಿಡಿಯೋವನ್ನು ಮೀಮ್ಸ್, ಜೋಕ್ಸ್‌ಗೆ ಬಳಸಿದ್ದಾರೆ. ಟ್ರಾಫಿಕ್‌ನಲ್ಲಿ ಸಿಲುಕಿದ ಬೆನ್ನಲ್ಲೇ ಲೋಕೋ ಪೈಲೆಟ್  ಗೂಗಲ್ ಮ್ಯಾಪ್ ಮೂಲಕ ಬೇರೆ ರೂಟ್ ಹುಡುಕುತ್ತಿದ್ದಾರೆ ಎಂದು ಮೀಮ್ಸ್ ಮಾಡಿದ್ದಾರೆ. 

ಬೆಂಗಳೂರಿನಲ್ಲಿ ಭಾರತದ ಮೊದಲ ಬುಟೆಲ್ ಟ್ರೈನ್ ತಯಾರಿ, ಗಂಟೆಗೆ 250 ರಿಂದ 280 ಕಿ.ಮೀ ವೇಗ!

ರೈಲು ಟ್ರಾಫಿಕ್ ಸಂಕಷ್ಟದಲ್ಲಿ ಸಿಲುಕಿರುವ ವಿಡಿಯೋ ಚಿತ್ರೀಕರಿಸಿದ ಕಾರಣ ಇದೀಗ ಜಗತ್ತಿಗೆ ಟ್ರಾಫಿಕ್ ಸಮಸ್ಯೆ ಗೊತ್ತಾಗಿದೆ. ಶೀಘ್ರದಲ್ಲೆ ಬೆಂಗಳೂರು ವಿಮಾನ ಕೂಡ ಇದೇ ರೀತಿ ಟ್ರಾಫಿಕ್ ಸಮಸ್ಯೆಗೆ ಸಿಲುಕಿದರೂ ಅಚ್ಚರಿಯಿಲ್ಲ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಈ ರೈಲು ಟ್ರಾಫಿಕ್ ಸಮಸ್ಯೆಯಿಂದ ನಿಲ್ಲಿಸಲಾಗಿದೆಯಾ ಅಥವಾ ತಾಂತ್ರಿಕ ಸಮಸ್ಯೆಯಿಂದ ನಿಲ್ಲಿಸಲಾಗಿತ್ತಾ ಅನ್ನೋ ಮಾಹಿತಿ ಸ್ಪಷ್ಟವಾಗಿಲ್ಲ. 
 

click me!