ರಾಮ ಮಂದಿರ ಕಟ್ಟಲು ಮುಸ್ಲಿಂ ಸ್ವಯಂ ಸೇವಕರಾಗಿ ನಾವೂ ಬರ್ತೀವಿ: ರೋಷನ್ ಬೇಗ್

By Web DeskFirst Published Nov 9, 2019, 2:19 PM IST
Highlights

ರಾಮಮಂದಿರ ನಮ್ಮ ದೇಶದಲ್ಲಿ ಕಟ್ಟದೆ ಪಾಕಿಸ್ತಾನದಲ್ಲಿ ಕಟ್ಟೋಕಾಗತ್ತಾ..? ಎಂದು ಪ್ರಶ್ನಿಸಿರುವ ಅನರ್ಹ ಶಾಸಕ ರೋಷನ್ ಬೇಗ್ ಅಯೋಧ್ಯೆ ತೀರ್ಪನ್ನು ಸ್ವಾಗತಿಸುವುದಾಗಿ ಹೇಳಿದ್ದಾರೆ. ಹಾಗೆಯೇ ರಾಮಮಂದಿರ ನಿರ್ಮಿಸುವಾಗ ನಾವು ಸ್ವಯಂ ಸೇವಕರನ್ನು ಕರೆದುಕೊಂಡು ಬಂದು ನೆರವಾಗ್ತೀವಿ ಎಂದು ಭರವಸೆ ನೀಡಿದ್ದಾರೆ.

ಬೆಂಗಳೂರು(ನ.09): ಅಯೋಧ್ಯೆ ರಾಮಜನ್ಮ ಭೂಮಿ ವಿವಾದಕ್ಕೆ ಸುಪ್ರೀಂ ಕೋರ್ಟ್ ತೆರೆ ಎಳೆದಿದ್ದು, ಈ ಬಗ್ಗೆ ಅನರ್ಹ ಶಾಸಕ ರೋಷನ್ ಬೇಗ್ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನ ರಸೆಲ್ ಮಾರ್ಕೆಟ್ ಚೌಕ್ ಭೇಟಿ ನೀಡಿದ ಅನರ್ಹ ಶಾಸಕ ರೋಷನ್ ಬೇಗ್ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿ, ರಾಮಮಂದಿರ ನಮ್ಮ ದೇಶದಲ್ಲಿ ಕಟ್ಟದೆ ಪಾಕಿಸ್ತಾನದಲ್ಲಿ ಕಟ್ಟೋಕಾಗತ್ತಾ..? ಎಂದು ಪ್ರಶ್ನಿಸಿದ್ದಾರೆ. ಅಯೋಧ್ಯೆ ತೀರ್ಪನ್ನು ಸ್ವಾಗತಿಸುತ್ತೇವೆ ಎಂದಿದ್ದಾರೆ.

ರಾಮನಿಗೆ ಇಂದು ನ್ಯಾಯ ಸಿಕ್ಕಿದೆ: ಪ್ರಮೋದ್ ಮುತಾಲಿಕ್.

ರೋಷನ್ ಬೇಗ್ ಬರುತ್ತಿದ್ದಂತೆ ಭಾರತ್ ಮಾತಾಕಿ ಜೈ ಎಂದು ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ. ಈ ಸಂದರ್ಭ ಮಾತನಾಡಿದ ಅವರು, ನಾನು ಒಂದು ವರ್ಷದ ಹಿಂದೆಯೇ ಹೇಳಿದ್ದೆ. ಅಯೋಧ್ಯೆ ತೀರ್ಪನ್ನು ಸ್ವಾಗತಿಸುತ್ತೇವೆ ಮಾಡುತ್ತೇವೆ. ನಮ್ಮ ಧರ್ಮದ ಗುರುಗಳು ಕೂಡ ಯಾವುದೇ ತೀರ್ಪು ಬಂದರೂ ಸ್ವಾಗತ ಮಾಡ್ತಿವಿ ಅಂತ ಹೇಳಿದ್ರು. ನಾವೆಲ್ಲರೂ ತೀರ್ಪನ್ನು ಸ್ವಾಗತಿಸುತ್ತೇವೆ ಎಂದಿದ್ದಾರೆ.

ಮೇಲ್ಮನವಿ ಹಾಕೋರಲ್ಲಿ ಒಂದು ಮನವಿ:

ಕೆಲವರು ಮೇಲ್ಮನವಿ ಹಾಕ್ತಿವಿ, ಅದೂ, ಇದೂ ಎಂದು ಹೇಳುತ್ತಿದ್ದಾರೆ. ಅಂತವರಿಗೆ ನಾನು ಮನವಿ ಮಾಡ್ತಿನಿ. ದಯವಿಟ್ಟು ಅಂತ ಕೆಲಸ ಮಾಡಬೇಡಿ. ನಮಗೂ ಸಾಕಾಗಿ ಸಾಕಾಗಿ ಹೋಗಿದೆ. ನಮಗೆ ಸಮಾನತೆ ಬೇಕು ಸೌಹಾರ್ದತೆಯಿಂದ ಬದುಕಬೇಕು. ಒಳ್ಳೆಯ ತೀರ್ಪು ಬಂದಿದೆ ಎಂದು ಮನವಿ ಮಾಡಿದ್ದಾರೆ. 

ರಾಮಮಂದಿರ ಕಟ್ಟುವಾಗ ನಾವು ಮುಸ್ಲಿಂ ಸ್ವಯಂ ಸೇವಕರನ್ನ ಕರೆದುಕೊಂಡು ಬರುತ್ತೇವೆ. 5 ಎಕರೆ ಜಾಗ ಕೊಡೋಕೆ ಹೇಳಿರುವ ಕಡೆ ಮಸೀದಿ ಕಟ್ಟುವಾಗ ಹಿಂದೂಗಳು ಬನ್ನಿ. ಹಿಂದೂ ಮುಸ್ಲಿಂಮರು ಸೇರಿ ರಾಮಮಂದಿರ, ಮಸೀದಿ ಕಟ್ಟೋಣ. ದೇಶದಲ್ಲಿ ಸಾಮರಸ್ಯದಿಂದ ಇಬ್ಬರೂ ಬದುಕೋಣ ಎಂದಿದ್ದಾರೆ.

ಮೈಸೂರು: ಅಯೋಧ್ಯೆ ತೀರ್ಪು ಸ್ವಾಗತಿಸಿ ಸಂಭ್ರಮಿಸಿದ ಹಿಂದೂ ಮುಸ್ಲಿಂ ಬಾಂಧವರು

7 ದಶಕಗಳ ಅಯೋಧ್ಯೆ ರಾಮ ಜನ್ಮ ಭೂಮಿ ವಿವಾದಕ್ಕೆ ಇಂದು ತೆರೆ ಬಿದ್ದಿದ್ದು, ಸುಪ್ರೀಂ ಇಂದು ಐತಿಹಾಸಿಕ ತೀರ್ಪು ಪ್ರಕಟಿಸಿದೆ. ವಿವಾದಿತ 2.77 ಎಕರೆ ಜಾಗವನ್ನು ರಾಮಲಲ್ಲಾಗೆ ವಹಿಸಿ ಸುಪ್ರೀಂ ತೀರ್ಪು ನೀಡಿದೆ. ಯಾರ ಭಾವನೆಗೂ ಧಕ್ಕೆಯಾಗದಂತೆ ಬಾಬರಿ ಮಸೀದಿಗೂ ಅಯೋಧ್ಯೆಯಲ್ಲೇ ಪ್ರತ್ಯೇಕ ಜಾಗವನ್ನು ಕಲ್ಪಿಸುವಂತೆ ಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ.

ರಾಮನ ಮಡಿಲಿಗೆ ಅಯೋಧ್ಯೆ: ಇವರೆಲ್ಲರ ಹೇಳಿಕೆಯಲ್ಲಿದೆ ಸಹೋದರತ್ವದ ವಿದ್ಯೆ!

ನವೆಂಬರ್ 9ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!