
ಬೆಂಗಳೂರು (ಅ.19) ರಾಹುಲ್ ದ್ರಾವಿಡ್ ದಿಗ್ಗಜ ಕ್ರಿಕೆಟಿಗ, ಟೀಂ ಇಂಡಿಯಾದ ಮಾಜಿ ಕೋಚ್, ಆದರೆ ಮೈದಾನದ ಹೊರಗೂ ದ್ರಾವಿಡ್ ಜಂಟಲ್‌ಮೆನ್. ಅತ್ಯಂತ ಸರಳ ವ್ಯಕ್ತಿ. ಎಲ್ಲರಂತೆ ದ್ರಾವಿಡ್ ಆರ್ಡಿನರಿ ವಿಮಾನ ಹತ್ತಿ ಪ್ರಯಾಣ ಬೆಳೆಸಿದ್ದಾರೆ. ಮೂವರು ಒಡಹುಟ್ಟಿದವರಿಗೆ ಬಿಗ್ ಸರ್ಪ್ರೈಸ್. ಕಾರಣ ತಮ್ಮ ಪಕ್ಕದ ಸೀಟಿನಲ್ಲಿ ಕುಳಿತಿರುವುದು ರಾಹುಲ್ ದ್ರಾವಿಡ್. ದಿಗ್ಗಜನ ಮಾತನಾಡಿಸುವುದು ಹೇಗೆ? ಆಟೋಗ್ರಾಫಿ ಕೇಳಿದರೆ ಕೊಡುತ್ತಾರಾ, ಅವರ ಪ್ರಯಾಣ ಸಮಯದಲ್ಲಿ ಡಿಸ್ಟರ್ಬ್ ಮಾಡುವುದು ಸರಿಯೇ? ಅನ್ನೋ ಹಲವು ಪ್ರಶ್ನೆಗಳ ನಡುವೆ ಧೈರ್ಯ ಮಾಡಿ ಮಾತನಾಡಿಸಿದರೆ ಅಚ್ಚರಿ ಕಾದಿತ್ತು. ಸಾಮಾನ್ಯರಲ್ಲಿ ಸಾಮಾನ್ಯರಂತೆ ದ್ರಾವಿಡ್ ಎಲ್ಲರನ್ನು ಆತ್ಮೀಯವಾಗಿ ಮಾತನಾಡಿಸಿದ್ದಾರೆ. ಜೊತೆಗೆ ಆಟೋಗ್ರಾಫ್ ಕೂಡ ನೀಡಿದ್ದಾರೆ. ಈ ಘಟನೆ ಕುರಿತ ವಿಡಿಯೋ ಇದೀಗ ಭಾರಿ ಸದ್ದು ಮಾಡುತ್ತಿದೆ.
ಮೂವರು ಒಡಹುಟ್ಟಿದವರು ಇಂಡಿಗೋ ವಿಮಾನದಲ್ಲಿ ಪ್ರಯಾಣಕ್ಕಾಗಿ ಕುಳಿತಿದ್ದಾರೆ. ಅದು ಬ್ಯೂಸಿನೆಸ್ ಕ್ಲಾಸ್ ವಿಮಾನವಲ್ಲ. ಇದೇ ವಿಮಾನದಲ್ಲಿ ರಾಹುಲ್ ದ್ರಾವಿಡ್ ಕಾಣಿಸಿಕೊಂಡಿದ್ದಾರೆ. ಮೂವರಿಗೂ ಸಂಭ್ರಮ. ತಮ್ಮ ಆರ್ಡನರಿ ವಿಮಾನ ಪ್ರಯಾಣ ಇದೀಗ ಹೈಫೈ ಆಗಿದೆ ಅನ್ನೋ ಖುಷಿ. ಪಕ್ಕದ ಸೀಟಿನಲ್ಲಿ ಕುಳಿತ ರಾಹುಲ್ ದ್ರಾವಿಡ್ ಮಾತನಾಡಿಸಿದ್ದಾರೆ. ರಾಹುಲ್ ದ್ರಾವಿಡ್ ಖುಷಿಯಿಂದ ಎಲ್ಲರನ್ನು ಮಾತನಾಡಿಸಿದ್ದಾರೆ. ಜೊತೆಗೆ ಆಟೋಗ್ರಾಫ್ ಕೂಡ ನೀಡಿದ್ದಾರೆ.
ಮೂವರು ಒಡಹುಟ್ಟಿದವರು ರಾಹುಲ್ ದ್ರಾವಿಡ್ ಮಾತನಾಡಿಸಿ ಆಟೋಗ್ರಾಫ್ ಪಡೆದಿದ್ದಾರೆ. ಇದೇ ವೇಳೆ ಇತರ ಪ್ರಯಾಣಿಕರು ರಾಹುಲ್ ದ್ರಾವಿಡ್ ಜೊತೆ ಮಾತನಾಡಿದ್ದಾರೆ. ವಿಮಾನ ಲ್ಯಾಂಡಿಂಗ್ ಆದ ಬಳಿ ರಾಹುಲ್ ದ್ರಾವಿಡ್ ಏರ್‌ಪೋರ್ಟ್ ಬಸ್‌ನಲ್ಲಿ ಪ್ರಯಾಣ ಮಾಡಿದ್ದಾರೆ. ಈ ವೇಳೆ ದ್ರಾವಿಡ್ ಪಕ್ಕದಲ್ಲಿದ್ದ ಪ್ರಯಾಣಿಕರ ಜೊತೆಗೂ ಮಾತನಾಡಿದ್ದಾರೆ. ಈ ದಿಗ್ಗಜ ವ್ಯಕ್ತಿ ಇಷ್ಟು ಸರಳವಾಗಿರಲು ಸಾಧ್ಯವೇ ಎಂದು ಹಲವರು ಪ್ರಶ್ನಿಸಿದ್ದಾರೆ.
ರಾಹುಲ್ ದ್ರಾವಿಡ್ ಜೊತೆಗಿನ ಮಾತುಕತೆ, ಆಟೋಗ್ರಾಫ್, ಪ್ರಯಾಣದ ಖುಷಿಯನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಇಂದಿರಾನಗರದ ಗೂಂಡ ನಿಜವಾಗಿ ತುಂಬಾ ಸ್ವೀಟ್ ಎಂದು ಬರೆದುಕೊಂಡಿದ್ದಾರೆ. ರಾಹುಲ್ ದ್ರಾವಿದ್ ಜಾಹೀರಾತು ಒಂದರಲ್ಲಿ ತಮ್ಮ ತಾಳ್ಮೆಯ ಸ್ವಭಾವಕ್ಕೆ ವಿರುದ್ಧವಾಗಿ ಕಾಣಿಸಿಕೊಂಡಿದ್ದರು. ನಾನು ಇಂದಿರಾನಗರ ಗೂಂಡಾ ಎಂದು ಡೈಲಾಗ್ ಹೇಳಿದ್ದರು. ಇದೇ ಡೈಲಾಗ್ ಹಿಡಿದು ರಾಹುಲ್ ದ್ರಾವಿಡ್ ತುಂಬಾ ಸ್ವೀಟ್ ಎಂದು ಬರೆದುಕೊಂಡಿದ್ದಾರೆ.
ರಾಹುಲ್ ದ್ರಾವಿಡ್ ಕ್ರಿಕೆಟ್‌ನ ಜಂಟಲ್‌ಮನ್ ಎಂದೇ ಗುರುತಿಸಿಕೊಂಡಿದ್ದಾರೆ. ಯಾರ ಜೊತೆಗೂ ಕಿರಿಕ್ ಮಾಡಿದವರಲ್ಲ. ಇನ್ನು ಸ್ಲೆಡ್ಜಿಂಗ್ ಮಾಡಿದರೂ ಮಾತಿನಿಂದ, ವರ್ತನೆಯಿಂದ ತಿರುಗೇಟು ಕೊಟ್ಟವರಲ್ಲ, ಏನಿದ್ದರೂ ತಮ್ಮ ಬ್ಯಾಟ್ ಮೂಲಕ ಉತ್ತರ ನೀಡುವ ಜಂಟಲ್‌ಮೆನ್. ಈ ವಿಡಿಯೋ ನೋಡಿದ ಹಲವರು ಮೈದಾನದ ಹೊರಗೂ ದ್ರಾವಿಡ್ ಜಂಟಲ್‌ಮನ್ ಎಂದಿದ್ದಾರೆ. ಇಷ್ಟೇ ಅಲ್ಲ ದ್ರಾವಿಡ್ ಜೊತೆ ಪ್ರಯಾಣಿಸುವ, ಮಾತನಾಡಿಸುವ ಅವಕಾಶ ಸಿಕ್ಕಿದೆ. ನೀವು ತುಂಬಾ ಲಕ್ಕಿ ಎಂದು ಹಲವರು ಕಮೆಂಟ್ಸ್ ಮಾಡಿದ್ದಾರೆ.