ಬರ್ತ್‌ಡೇ, ಪ್ರಿವೆಡ್ಡಿಂಗ್‌ ಶೂಟ್‌ಗೆ ಇನ್ಮುಂದೆ ಬಾಡಿಗೆಗೆ ಸಿಗುತ್ತೆ ಡಬಲ್‌ ಡೆಕ್ಕರ್‌ ಅಂಬಾರಿ ಬಸ್‌, ದಿನದ ಬಾಡಿಗೆ ಎಷ್ಟು?

Published : Jul 30, 2026, 04:11 PM IST
double decker Ambaari bus

ಸಾರಾಂಶ

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (KSTDC) 'ಅಂಬಾರಿ' ಡಬಲ್ ಡೆಕ್ಕರ್ ಬಸ್ ಅನ್ನು ಈಗ ಬೆಂಗಳೂರಿನಲ್ಲಿ ಖಾಸಗಿ ಸಮಾರಂಭಗಳು, ಕಾರ್ಪೊರೇಟ್ ಈವೆಂಟ್‌ಗಳು ಮತ್ತು ಪ್ರೀ-ವೆಡ್ಡಿಂಗ್ ಫೋಟೋಶೂಟ್‌ಗಳಿಗಾಗಿ ಬುಕ್ ಮಾಡಬಹುದು.

ಬೆಂಗಳೂರು (ಜು.30): ಕಲ್ಯಾಣ ಮಂಟಪ ಅಥವಾ ರೆಸಾರ್ಟ್‌ಗಳಲ್ಲಿ ನಿಮ್ಮನೆಯ ವಿಶೇಷ ಸಮಾರಂಭ ಆಚರಿಸಿ ಬೋರ್‌ ಆಗಿದ್ದಲ್ಲಿ ನಿಮಗಿಲ್ಲಿದೆ ಸಿಹಿ ಸುದ್ದಿ. ಈಗ ನೀವು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (KSTDC) 'ಅಂಬಾರಿ' ಡಬಲ್ ಡೆಕ್ಕರ್ ಬಸ್ ಅನ್ನು ಖಾಸಗಿ ಸೆಲಬ್ರೇಷನ್‌ ಹಾಗೂ ಪೋಟೋಶೂಟ್‌ಗಳಿಗಾಗಿ ಬುಕ್ ಮಾಡಬಹುದು. ಪ್ರೀ-ವೆಡ್ಡಿಂಗ್ ಫೋಟೋಶೂಟ್ ಬಯಸುವ ಜೋಡಿಗಳು ಈ ಓಪನ್-ಟಾಪ್ ಡಬಲ್ ಡೆಕ್ಕರ್ ಬಸ್ ಅನ್ನು ಬಾಡಿಗೆಗೆ ಪಡೆಯಬಹುದಾಗಿದ್ದು, ನಗರದ ಪ್ರಮುಖ 26 ಪ್ರವಾಸಿ ತಾಣಗಳನ್ನು ವೀಕ್ಷಿಸುತ್ತಲೇ ಸಂಭ್ರಮಾಚರಣೆ ಅಥವಾ ಶೂಟಿಂಗ್ ನಡೆಸಬಹುದಾಗಿದೆ.

ಈ ಬಗ್ಗೆ ವರದಿ ಮಾಡಿರುವ ದಿ ಹಿಂದೂ, 2026ರ ಜನವರಿಯಲ್ಲಿ 'ಅಂಬಾರಿ' ಡಬಲ್ ಡೆಕ್ಕರ್ ಬಸ್‌ಗಳ ಸೇವೆಯನ್ನು ಪ್ರಾರಂಭಿಸಲಾಯಿತು. ಕೆಎಸ್‌ಟಿಡಿಸಿ (KSTDC) ನಿರ್ವಹಿಸುವ ಮೂರು ಬಸ್‌ಗಳು ಇದುವರೆಗೆ ಪ್ರವಾಸಿಗರಿಗೆ ನಗರ ಪರ್ಯಟನೆಯ 'ಹಾಪ್-ಆನ್, ಹಾಪ್-ಆಫ್' (Hop-on, Hop-off) ಸೇವೆಯನ್ನು ನೀಡುತ್ತಿದ್ದವು. ಇವು ರವೀಂದ್ರ ಕಲಾಕ್ಷೇತ್ರ, ಹಡ್ಸನ್ ಸರ್ಕಲ್, ಕಸ್ತೂರ್ಬಾ ರಸ್ತೆ, ಕಂಠೀರವ ಕ್ರೀಡಾಂಗಣ, ಕಬ್ಬನ್ ರಸ್ತೆ, ವಿಧಾನ ಸೌಧ ಹಾಗೂ ವಿಶ್ವೇಶ್ವರಯ್ಯ ಮ್ಯೂಸಿಯಂ ಸೇರಿದಂತೆ ಒಟ್ಟು 26 ಪ್ರಮುಖ ಆಕರ್ಷಣೀಯ ಸ್ಥಳಗಳನ್ನು ಸುತ್ತಿಬರುತ್ತವೆ.

20,000 ಪ್ರವಾಸಿಗರ ಬಳಕೆ – ಹೊಸ ಸೇವೆಗೆ ಚಾಲನೆ

ಕೆಎಸ್‌ಟಿಡಿಸಿ ಅಧಿಕಾರಿಯೊಬ್ಬರು,ಜನವರಿಯಿಂದ ಇದುವರೆಗೆ ಸುಮಾರು 20,000 ಜನರು ಈ ಹಾಪ್-ಆನ್, ಹಾಪ್-ಆಫ್ ಸೇವೆಯನ್ನು ಬಳಸಿಕೊಂಡಿದ್ದಾರೆ. ವಾರಾಂತ್ಯಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತದೆ ಹಾಗೂ ವಾರದ ದಿನಗಳಲ್ಲೂ ಉತ್ತಮ ಸ್ಪಂದನೆ ಸಿಗುತ್ತಿದೆ. ತಂಪಾದ ವಾತಾವರಣವಿದ್ದಾಗ ಹೆಚ್ಚಿನವರು ಟಾಪ್‌ ಡೆಕ್‌ ಸೀಟುಗಳನ್ನೇ ಇಷ್ಟಪಡುತ್ತಾರೆ. ಇದನ್ನೇ ಆಧಾರವಾಗಿಟ್ಟುಕೊಂಡು, ಈಗ ಸಾರ್ವಜನಿಕರಿಗೆ ಜನ್ಮದಿನದ ಆಚರಣೆಗಳು, ಕಾರ್ಪೊರೇಟ್ ಈವೆಂಟ್‌ಗಳು ಹಾಗೂ ಪ್ರೀ-ವೆಡ್ಡಿಂಗ್ ಫೋಟೋಶೂಟ್‌ಗಳಿಗೆ ಅಂಬಾರಿ ಬಸ್‌ಗಳನ್ನು ಕಾಯ್ದಿರಿಸಲು ಅವಕಾಶ ನೀಡಲು ನಿರ್ಧರಿಸಲಾಗಿದೆ" ಎಂದು ತಿಳಿಸಿದ್ದಾರೆ.

ದಿನದ 5 ಗಂಟೆ ಅವಧಿಯ ಬಾಡಿಗೆ ಎಷ್ಟು?

ಸಾಮಾನ್ಯ ಪ್ರಯಾಣ ದರ: ಹಾಪ್-ಆನ್, ಹಾಪ್-ಆಫ್ ಸೇವೆಗೆ ಎಲ್ಲಾ ವಯೋಮಾನದವರಿಗೂ ಟಿಕೆಟ್ ದರ ₹ 180 ಆಗಿದೆ.

ಸಮಾರಂಭಗಳು ಮತ್ತು ಪಾರ್ಟಿಗಳಿಗೆ (5 ಗಂಟೆಗಳ ಅವಧಿ)

  • ವಾರಾಂತ್ಯ (Sat-Sun): ₹ 28,000 + % 5 GST.
  • ವಾರದ ದಿನಗಳು (Mon-Fri): ₹ 26,000 + % 5 GST.
  • ನಿಯಮಿತ ಸಮಯ ಮೀರಿದರೆ, ಇಡೀ ದಿನದ ದರ ಅನ್ವಯಿಸುತ್ತದೆ (ವಾರಾಂತ್ಯಕ್ಕೆ ₹ 40,000 ಹಾಗೂ ವಾರದ ದಿನಗಳಿಗೆ ₹ 32,000).

ಫೋಟೋಶೂಟ್‌ಗಳಿಗೆ (2 ಗಂಟೆಗಳ ಅವಧಿ)

  • ವಾರಾಂತ್ಯ (Sat-Sun): ₹ 16,000 + % 5 GST.
  • ವಾರದ ದಿನಗಳು (Mon-Fri): ₹ 12,000 + % 5 GST.
  • 2 ಗಂಟೆಗಿಂತ ಹೆಚ್ಚುವರಿ ಸಮಯಕ್ಕೆ ವಾರಾಂತ್ಯದಲ್ಲಿ ಪ್ರತಿ ಗಂಟೆಗೆ ₹ 7,000 ಹಾಗೂ ವಾರದ ದಿನಗಳಲ್ಲಿ ಪ್ರತಿ ಗಂಟೆಗೆ ₹ 6,000 ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ.

"ಇದು ಕೇವಲ ಹೆಚ್ಚುವರಿ ಆದಾಯ ಗಳಿಕೆಯಷ್ಟೇ ಅಲ್ಲ, ಬೆಂಗಳೂರಿನಂತಹ ನಗರದಲ್ಲಿ ಪ್ರವಾಸಿಗರಿಗೆ ಮತ್ತು ಜನರಿಗೆ ಆಚರಣೆ ಮಾಡಲು ಹೊಸ ಮತ್ತು ವಿಶಿಷ್ಟ ಆಯ್ಕೆಗಳನ್ನು ಒದಗಿಸುವ ಪ್ರಯತ್ನವಾಗಿದೆ" ಎಂದು ಅಧಿಕಾರಿ ತಿಳಿಸಿದ್ದಾರೆ.

ಹೆಚ್ಚಿನ ಪ್ರಚಾರ ಅಗತ್ಯ - ಸಾರ್ವಜನಿಕರ ಅಭಿಪ್ರಾಯ

ಇದಕ್ಕೆ ಸೂಕ್ತ ಪ್ರಚಾರ ಸಿಗಬೇಕು, ಇದರಿಂದ ಹೆಚ್ಚಿನ ಜೋಡಿಗಳು ಪ್ರೀ-ವೆಡ್ಡಿಂಗ್ ಶೂಟ್‌ಗೆ ಅಂಬಾರಿ ಬಸ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಸಾಮಾನ್ಯವಾಗಿ ಜೋಡಿಗಳು 3-4 ಸ್ಥಳಗಳನ್ನು ಕಾಯ್ದಿರಿಸುತ್ತಾರೆ, ಆದರೆ ನಗರದ ಎಲ್ಲಾ ಪ್ರಮುಖ ಸ್ಥಳಗಳನ್ನು ಒಳಗೊಳ್ಳುವ ಈ ಅಂಬಾರಿ ಬಸ್ ಪ್ರವಾಸ ಉತ್ತಮ ಟ್ರೆಂಡ್ ಸೃಷ್ಟಿಸಬಹುದು. ಇದು ಸರಿಯಾಗಿ ಅನುಷ್ಠಾನಗೊಂಡರೆ ಭಾರತದಲ್ಲೇ ವಿಶಿಷ್ಟವಾದ ಶೂಟಿಂಗ್ ಅನುಭವವಾಗಲಿದೆ ಎಂದು ಕ್ಯಾಮೆರಾಮೆನ್‌ ಒಬ್ಬರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇವೆಂಟ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆಯ ಅಧಿಕಾರಿಯೊಬ್ಬರು, "ಕೆಎಸ್‌ಟಿಡಿಸಿಯು ಈ ಯೋಜನೆಯನ್ನು ಖಾಸಗಿ ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಗಳೊಂದಿಗೂ ಮುಕ್ತವಾಗಿ ಹಂಚಿಕೊಳ್ಳಬೇಕು. ಇದರಿಂದ ಜನ್ಮದಿನದ ಪಾರ್ಟಿಗಳು, ಕಾರ್ಪೊರೇಟ್ ಕಾರ್ಯಕ್ರಮಗಳು ಹಾಗೂ ಪೋಟೋಶೂಟ್‌ಗಳಿಗೆ ಹೊರಾಂಗಣದಲ್ಲಿ ಮತ್ತಷ್ಟು ಹೊಸ ಆಯ್ಕೆಗಳು ಜನರಿಗೆ ಲಭ್ಯವಾಗುತ್ತವೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

PREV
Read more Articles on
click me!

Recommended Stories

ಬೆಂಗಳೂರಲ್ಲಿ ಬ್ರಿಟೀಷ್ ಗವರ್ನರ್ ವಾರನ್ ಹೇಸ್ಟಿಂಗ್ ಸಹಿಯುಳ್ಳ 230 ವರ್ಷಗಳ ಹಿಂದಿನ ಚೆಕ್ ಪತ್ತೆ!
ಸಿಂಚನಾ ಹುಲಿಯ ಕೋರೆ ಹಲ್ಲಿಗೆ ರೂಟ್ ಕೆನಾಲ್! ಬನ್ನೇರುಘಟ್ಟದಲ್ಲಿ ಶಸ್ತ್ರಚಿಕಿತ್ಸೆ,