ಬೆಂಗಳೂರು ಸೇರಿ ಕರ್ನಾಟಕದ 16 ಜಿಲ್ಲೆಗಳಿಗೆ ಮಳೆ ಅಲರ್ಟ್, ಎಷ್ಟು ದಿನ ಇರಲಿದೆ ಈ ವಾತಾವರಣ?

Published : Nov 25, 2026, 11:39 AM IST
Bengaluru rains

ಸಾರಾಂಶ

ಬೆಂಗಳೂರು ಸೇರಿದಂತೆ ಹಲವೆಡೆ ಭಾರಿ ಮಳೆಯಾಗಿದೆ. ಇದೀಗ ಹವಾಮಾನ ಇಲಾಖೆ ಮತ್ತೆ ಮಳೆ ಅಲರ್ಟ್ ನೀಡಿದೆ. ಬರೋಬ್ಬರಿ 16 ಜಿಲ್ಲೆಗಳಿಗೆ ಗುಡುಗು ಸಹಿತ ಮಳೆ ಎಚ್ಚರಿಕೆ ನೀಡಲಾಗಿದೆ. ಎಷ್ಟು ದಿನ ಈ ಮಳೆ ಆರ್ಭಟ ಇರಲಿದೆ?

ಬೆಂಗಳೂರು (ನ.25) ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನಿನ್ನೆ ಭಾರಿ ಮಳೆಯಾಗಿದೆ. ಇದೀಗ ಹವಾಮಾನ ಇಲಾಖೆ ಮತ್ತೊಂದು ಎಚ್ಚಿರಿಕೆ ನೀಡಿದೆ. ಇಂದು ಕೂಡ ಭಾರಿ ಮಳೆಯಾಗಲಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಿದೆ. ಮುಂದಿನ 2 ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಇದೇ ವೇಳೆ ಕರಾವಳಿ ಕರ್ನಾಟಕ ಹಾಗೂ ಉತ್ತರ ಒಳನಾಿನಲ್ಲಿ ಒಣಹವೇ ಮುಂದುವರಿಯಲಿದೆ ಎಂದಿದೆ.

ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ಮೋಡ ಕವಿದ ವಾತವಾರಣವಿತ್ತು. ಸರಿಸುಮಾರು ಬೆಳಗ್ಗೆ 9 ಗಂಟೆ ವರಗೆ ಕೆಲೆವಡೆ ಹನಿಗಳು ಬಿದ್ದಿದೆ. ಆದರೆ 9 ಗಂಟೆ ಬಳಿಕ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಸರಿದು ಬೆಳಕು ಹರಿದಿದೆ. ಸಂಜೆ ವೇಳೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಇಂದು ಎಲ್ಲೆಲ್ಲಿ ಮಳೆ ಮುನ್ಸೂಚನೆ?

ನವೆಂಬರ್ 25ರಂದು ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಇತ್ತ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕೊಡಗು, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಇ್ನು ಬಳ್ಳಾರಿ, ದಾವಣೆಗೆರೆ, ಚಿತ್ರದುರ್ಗ, ವಿಜಯನಗರ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಈಗಗಾಲೇ 48 ಗಂಟೆಗಳ ಮಳೆ ಎಚ್ಚರಿಕೆ ನೀಡಲಾಗಿದೆ. ಹೀಗಾಗಿ ನವೆಂಬರ್ 26ರಂದು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳು, ಕರಾವಳಿಯ ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಿದೆ. ಇತ್ತ ಉತ್ತರ ಕನ್ನಡದಲ್ಲಿ ಒಣಹವೆ ಮುಂದುವರಿಯಲಿದೆ. ಇನ್ನು ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಜಿಲ್ಲೆಗಳಲ್ಲಿ ಒಣಹವೇ ಮುಂದುವರಿಯಲಿದೆ ಎಂದಿದೆ.

ನವೆಂಬರ್ 24ರಂದು ಕರ್ನಾಟಕ ಹಲವು ಭಾಗದಲ್ಲಿ ಉತ್ತಮ ಮಳೆಯಾಗಿದೆ. ಬೆಂಗಳೂರಿನಲ್ಲಿ 3 ಗಂಟೆಯಾಗುತ್ತಿದ್ದಂತೆ ಮಳೆ ಮೋಡ ಆವರಿಸಿದೆ. ಸಂಜೆ 4 ಗಂಟೆಯಿಂದ ಮಳೆ ಆರಂಭಗೊಂಡಿದೆ. ಬೆಂಗಳೂರಿನ ಬಹುತೇಕ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಇತ್ತ ಫ್ರೀಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರು ಮಳೆಯಲ್ಲೂ ಪ್ರತಿಭಟನೆ ಮುಂದುವರಿಸಿದ್ದರು.

PREV
Read more Articles on
click me!

Recommended Stories

ತಿಂಗಳಿಗೆ ₹40 ಸಾವಿರ ಸಂಬಳ, ರಾತ್ರಿ 8ರ ನಂತರ ನೋ ವರ್ಕ್ ಕಾಲ್ಸ್! ಬೆಂಗಳೂರಿನ ಈ ಅಡುಗೆಯವಳ ಲೈಫ್ ನೋಡಿ ನೆಟ್ಟಿಗರು ಶಾಕ್!
ಚಳಿಗಾಲದಲ್ಲಿ ಬೆಂಗಳೂರಿಗೆ ಅಪ್ಪಳಿಸಿದ ಮಳೆ ಹಿಂದಿನ ರಹಸ್ಯ ಏನು? ಮುಂದಿನ 3 ದಿನ ಅಲರ್ಟ್