Bengaluru: ಗ್ರೀನ್ SM ಕ್ಯಾಬ್ ಕಂಪನಿಗೆ ಬಿಗ್ ಶಾಕ್; ಬೆಂಗಳೂರಿನಲ್ಲಿ ಜಸ್ಟ್ 10 ಕಾರುಗಳಿಗೆ ಮಾತ್ರ ಅನುಮತಿ!

Published : Nov 16, 2026, 04:44 PM IST
Green SM Cab

ಸಾರಾಂಶ

ವಿಯೆಟ್ನಾಂ ಮೂಲದ ಗ್ರೀನ್ SM ಕ್ಯಾಬ್‌ಗೆ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸಲು ಸದ್ಯಕ್ಕೆ ಅನುಮತಿ ಇಲ್ಲ ಎಂದು ಸಾರಿಗೆ ಸಚಿವ ಭೈರತಿ ಸುರೇಶ್ ಸ್ಪಷ್ಟಪಡಿಸಿದ್ದಾರೆ. ಕಡಿಮೆ ದರದಿಂದ ಸ್ಥಳೀಯ ಚಾಲಕರಿಗೆ ನಷ್ಟವಾಗುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ.

ಬೆಂಗಳೂರು: ವಿಯೆಟ್ನಾಂ ಮೂಲದ ಕ್ಯಾಬ್ ಕಂಪನಿಗೆ ಬೆಂಗಳೂರಿಗೆ 10 ಸಾವಿರ ಕಾರುಗಳನ್ನು ತರಿಸಿದೆ ಎಂದು ಹೇಳುತ್ತಾರೆ. ಆದರೆ ನಮ್ಮ ಅಧಿಕಾರಿಗಳ ಮಾಹಿತಿಯ ಅನ್ವಯ, ಬೆಂಗಳೂರಿನಲ್ಲಿ ಕೇವಲ 100 ಕಾರುಗಳಿಗೆ ಮಾತ್ರ ಅನುಮತಿ ನೀಡಲಾಗಿದೆ ಎಂದು ಸಾರಿಗೆ ಸಚಿವ ಭೈರತಿ ಸುರೇಶ್ ತಿಳಿಸಿದ್ದಾರೆ.

ಕಂಪನಿಯವರಿಗೆ ನೋ ಎಂದು ಹೇಳಿದ್ದೇನೆ!

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಈಗಾಗಲೇ ನಾನು ಗ್ರೀನ್ SM ಕ್ಯಾಬ್ ಕಂಪನಿಗೆ ಅನುಮತಿ ನೀಡಬಾರದು ಎಂದು ಸೂಚನೆ ನೀಡಿದ್ದೇನೆ. ಅವರು ಕೇವಲ 08 ರೂಪಾಯಿ ಸೇವೆ ನೀಡಿದರೆ, ನಮ್ಮ ಚಾಲಕರಿಗೆ ನಷ್ಟ ಆಗುತ್ತದೆ. ಆದ್ದರಿಂದ ಕಂಪನಿ ಅವರಿಗೆ ನೋ ಎಂದು ಹೇಳಿದ್ದೇನೆ. ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ, ಆ ಬಳಿಕಷ್ಟೇ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.

ವಿಯೆಟ್ನಾಂ ಇಂದ ನೈಜವಾಗಿ ಬರುತ್ತಿರುವ ಕಾರುಗಳ ಸಂಖ್ಯೆ ಎರಡು ಸಾವಿರ ಎಂದು ತಿಳಿದು ಬಂದಿದೆ. ಇಷ್ಟು ಕಡಿಮೆ ಬೆಲೆ ಸೇವೆ ನೀಡಿದರೆ ಸ್ಥಳೀಯ ಕಾರು ಚಾಲಕರಿಗೆ ಇದರಿಂದ ಭಾರೀ ನಷ್ಟ ಎದುರಾಗುತ್ತದೆ. ಈ ಕಾರಣದಿಂದಲೇ ನಾನು ನೋ ಎಂದು ಹೇಳಿದ್ದೇನೆ. ಚಾಲಕರು ಈ ಬಗ್ಗೆ ನನ್ನನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಆ ಬಳಿಕ ಕಂಪನಿಯವರು ಕೂಡ ಅನುಮತಿ ಕೊಡಿ ಅಂತ ನನ್ನ ಬಳಿಗೆ ಬಂದಿದ್ದರು. ಆದರೆ ನಾನು ನೋ ಎಂದು ಹೇಳಿದ್ದೀನಿ. ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಗ್ರೀನ್ SM ಕ್ಯಾಬ್‌ಗಳನ್ನು ಯಾವ ರೀತಿ ಸ್ಟ್ರೀಮ್ ಲೈನ್ ಮಾಡುವುದು ಎಂದು ಚರ್ಚೆ ಮಾಡುತ್ತೇವೆ. ಅಲ್ಲಿಯ ವರೆಗೂ ಯಾವುದೇ ಅನುಮತಿಯನ್ನು ಸಂಸ್ಥೆಗೆ ನೀಡಬಾರದು ಎಂದು ಸಚಿವರು ತಿಳಿಸಿದ್ದಾರೆ.

ಕೇವಲ 100 ಕ್ಯಾಬ್‌ಗಳಿಗೆ ಅನುಮತಿ!

ಗ್ರೀನ್ SM ಕ್ಯಾಬ್ ಸಂಸ್ಥೆಯವರು ಅಲ್ಲಿಂದ ಚಾಲಕರನ್ನು ಕರೆದುಕೊಂಡು ಬರಲು ಆಗೋದಿಲ್ಲ. ಗ್ರೀನ್ SM ಕ್ಯಾಬ್‌ನವರು ನಮ್ಮ ಚಾಲಕರಿಗೆ ಏನು ಕೊಡ್ತಾರೆ ಅಂತ ಮಾಹಿತಿ ಪಡೆದುಕೊಳ್ಳುತ್ತೇವೆ. ಒಂದು ಸ್ಟ್ರೀಮ್ ಲೈನ್ ಮಾಡುವ ವರೆಗೂ ಗ್ರೀನ್ SM ಕ್ಯಾಬ್ ಓಡಾಡಲು ಬಿಡೋದಿಲ್ಲ. ಈಗಾಗಲೇ 100 ಕ್ಯಾಬ್‌ಗಳಿಗೆ ಅನುಮತಿ ನೀಡಲಾಗಿದೆ. ಇದನ್ನು ನಾನು ಏನು ಮಾಡೋದಿಲ್ಲ, ನಮ್ಮ ಚಾಲಕರ ರಕ್ಷಣೆ ಹೇಗಿರಬೇಕು ಎಂದು ಚರ್ಚೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಈಗಾಗಲೇ ಕೆಲವು ಕಾರುಗಳನ್ನು ತೆಗೆದುಕೊಂಡು ಬಂದು ಕಾರುಗಳನ್ನು ನಿಲ್ಲಿಸಿದ್ದಾರೆ. ಆದರೆ ಅನುಮತಿ ನೀಡುವವರೆಗೂ ಅವರ ಓಡಿಸಲು ಅವಕಾಶ ಇರೋದಿಲ್ಲ. ಆದ್ದರಿಂದ ನಾವು ಕ್ಯಾಬ್‌ಗಳಿಗೂ ಮೀಟರ್‌ ಕಡ್ಡಾಯ ಮಾಡುತ್ತಿದ್ದೇವೆ. ಆಪ್‌ನಲ್ಲಿ ಕಾರು ಬುಕ್ ಮಾಡಿದರೂ, ಹಣವನ್ನು ಮೀಟರ್ ಆಧಾರಿಸಿಯೇ ಪಡೆದುಕೊಳ್ಳಬೇಕು. ಸಾರಿಗೆ ಇಲಾಖೆ ನಿಗದಿ ಪಡಿಸಿದರ ದರವನ್ನೇ ಪಡೆದುಕೊಳ್ಳಬೇಕು ಎಂದು ಸಚಿವ ಭೈರತಿ ಸುರೇಶ್ ತಿಳಿಸಿದ್ದಾರೆ.

PREV
Read more Articles on
click me!

Recommended Stories

ಡಿಕೆ ಶಿವಕುಮಾರ್ ನೂತನ ಗೃಹಪ್ರವೇಶದಲ್ಲಿ ಅಜ್ಜಯ್ಯನಿಗೆ ಪೂಜೆ, ಕಾರ್ಮಿಕರ ಜೊತೆ ಊಟ, ಮನೆ ಫೋಟೋಸ್
26 ವರ್ಷಗಳಿಂದ ಮಕ್ಕಳಿಗೆ ಹೊಸ ಉಸಿರು: ಆಸ್ಪತ್ರೆಯಾಚೆಗೂ ವಿಶೇಷ ಆರೈಕೆ ವಿಸ್ತರಿಸಿದ ಮಣಿಪಾಲ್ ಆಸ್ಪತ್ರೆಯ CASC