38 ದೇಶಗಳ ಒಪ್ಪಂದ: 1 ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧಿಸುವ ಗುರಿ: ಸಚಿವ MB ಪಾಟೀಲ್

Published : Oct 31, 2026, 07:32 AM IST
MB Patil

ಸಾರಾಂಶ

ಕಳೆದ ಆರ್ಥಿಕ ವರ್ಷದಲ್ಲಿ 12,939 ಮಿಲಿಯನ್ ಡಾಲರ್ ವಿದೇಶಿ ಬಂಡವಾಳ ಆಕರ್ಷಿಸಿರುವ ಕರ್ನಾಟಕ ದೇಶದಲ್ಲೇ ದ್ವಿತೀಯ ಸ್ಥಾನದಲ್ಲಿದೆ. ಕೇಂದ್ರ ಸರ್ಕಾರ 38 ರಾಷ್ಟ್ರಗಳೊಂದಿಗೆ ಮಾಡಿಕೊಂಡಿರುವ ಮುಕ್ತ ವ್ಯಾಪಾರ ಒಪ್ಪಂದಗಳಿಂದ ರಾಜ್ಯದ ರಫ್ತು ವಲಯಕ್ಕೆ ಬೃಹತ್ ಅವಕಾಶಗಳು ಸೃಷ್ಟಿಯಾಗಲಿವೆ. ಇದನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು 1 ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧಿಸುವ ಗುರಿಯನ್ನು ಸಚಿವ ಎಂ.ಬಿ. ಪಾಟೀಲ್ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಕಳೆದ ಆರ್ಥಿಕ ವರ್ಷದಲ್ಲಿ ರಾಜ್ಯಕ್ಕೆ 12939 ಮಿಲಿಯನ್‌ ಡಾಲರ್‌ ವಿದೇಶಿ ನೇರ ಬಂಡವಾಳ ಬಂದಿದ್ದು, ದೇಶದಲ್ಲಿ ದ್ವಿತೀಯ ಸ್ಥಾನದಲ್ಲಿದ್ದೇವೆ. ಕೇಂದ್ರ ಸರ್ಕಾರವು 38 ರಾಷ್ಟ್ರಗಳ ಜತೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಿರುವುದು, ಹಲವು ವಲಯಗಳಲ್ಲಿ ರಫ್ತಿಗೆ ಹೆಚ್ಚಿನ ಅವಕಾಶ ಸೃಷ್ಟಿಯಾಗುತ್ತಿವೆ. ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು 1 ಟ್ರಿಲಿಯನ್‌ ಡಾಲರ್‌ ಮೌಲ್ಯದ ಆರ್ಥಿಕತೆ ಸೃಷ್ಟಿಸಬೇಕು ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಕರೆ ನೀಡಿದರು.

ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯ ಹಾಗೂ ರಾಜ್ಯದ ವಿಶ್ವೇಶ್ವರಯ್ಯ ರಫ್ತು ಉತ್ತೇಜನ ಸಂಸ್ಥೆ ಮತ್ತು ಭಾರತೀಯ ರಫ್ತು ಸಂಘಟನೆಗಳ ಒಕ್ಕೂಟಗಳ ಸಹಯೋಗದಲ್ಲಿ ಮುಖ್ಯ ವ್ಯಾಪಾರ ಒಪ್ಪಂದಗಳ ಪ್ರಯೋಜನೆ ಕುರಿತಂತೆ ಶುಕ್ರವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಎಂ.ಬಿ. ಪಾಟೀಲ್‌ ಮಾತನಾಡಿದರು.

38 ದೇಶಗಳೊಂದಿಗೆ ಮುಖ್ಯ ವ್ಯಾಪಾರ ಒಪ್ಪಂದ

ಕೇಂದ್ರ ಸರ್ಕಾರ ಇತ್ತೀಚೆಗೆ ಸಂಯುಕ್ತ ಅರಬ್‌ ಸಂಸ್ಥಾನ, ಆಸ್ಟ್ರೇಲಿಯಾ, ಯುಕೆ, ಒಮಾನ್‌, ಯೂರೋಪಿಯನ್‌ ಒಕ್ಕೂಟ, ನ್ಯೂಜಿಲೆಂಡ್‌ ಸೇರಿದಂತೆ 38 ದೇಶಗಳೊಂದಿಗೆ ಮುಖ್ಯ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ. ಸದ್ಯದಲ್ಲೇ ಅಮೆರಿಕದ ಜತೆಗೂ ಅಂತಹ ಒಪ್ಪಂದ ಮಾಡಿಕೊಳ್ಳುವ ನಿರೀಕ್ಷೆಯಿದೆ. ಅದರಿಂದಾಗಿ ಸಹಜವಾಗಿಯೇ ದೇಶ ಮತ್ತು ರಾಜ್ಯದ ಜಿಡಿಪಿ ವ್ಯಾಪ್ತಿ ಹಿಗ್ಗಲಿದೆ. ರಾಜ್ಯದ ಎಲೆಕ್ಟ್ರಾನಿಕ್ಸ್‌, ಎಲೆಕ್ಟ್ರಿಕ್‌ ಉತ್ಪನ್ನಗಳು, ಕೃಷಿ, ಆಹಾರೋತ್ಪನ್ನಗಳು, ಜವಳಿ ಮತ್ತು ಸಿದ್ಧ ಉಡುಪು, ಸಾಗರೋತ್ಪನ್ನಗಳು, ಎಂಜಿನಿಯರಿಂಗ್‌ ಸಾಧನಗಳು, ಔಷಧ ಹಾಗೂ ಸಸ್ಯಾಧಾರಿತ ಉತ್ಪನ್ನಗಳ ರಫ್ತಿಗೆ ಒಳ್ಳೆಯ ಅವಕಾಶ ಸೃಷ್ಟಿಯಾಗಲಿವೆ ಎಂದು ವಿವರಿಸಿದರು.

ಕಾರ್ಯಾಗಾರದಲ್ಲಿ 200ಕ್ಕೂ ಹೆಚ್ಚಿನ ಉದ್ಯಮಿಗಳು, ರಫ್ತುದಾರರು, ಜಿಲ್ಲಾ ಕೈಗಾರಿಕಾ ಕೇಂದ್ರಗಳ ಅಧಿಕಾರಿಗಳು ಪಾಲ್ಗೊಂಡಿದ್ದರು. ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್‌, ಭಾರತ ವ್ಯಾಪಾರ ಉತ್ತೇಜನಾ ಸಂಘದ ಸಲಹೆಗಾರ್ತಿ ಡಾ.ತಮನ್ನಾ ಚತುರ್ವೇದಿ, ಜಂಟಿ ನಿರ್ದೇಶಕಿ ಸೋಮಾ ಚೌಧರಿ, ಉಪ ಮಹಾನಿರ್ದೇಶಕ ಅರ್ಜುನ್‌ ಉಪಾಧ್ಯ ಹಾಜರಿದ್ದರು.

PREV
Read more Articles on
click me!

Recommended Stories

ಮೆಟ್ರೋದಲ್ಲಿ ಯುವತಿಯ ವಿಡಿಯೋ ಮಾಡಿದವನ ವಶಕ್ಕೆ ಪಡೆದ ಪೊಲೀಸರು; ಮೊಬೈಲ್‌ನಲ್ಲಿ ಏನಿತ್ತು?
ಪ್ರಧಾನಿ ಮೋದಿಗೆ ಸಿಎಂ ಡಿಕೆ ಪತ್ರ: ಕಬ್ಬು ಬೆಳೆಗಾರರಿಗೆ ಸಿಗುತ್ತಾ ಸಿಹಿ ಸುದ್ದಿ? ಪತ್ರದಲ್ಲೇನಿದೆ?