ಅಂಧ ಟೈಲರ್ ಯುವತಿಯ ಫೋಟೊ ಬಳಕೆ : ಕರವೇ ವಿವಾದ

By Kannadaprabha NewsFirst Published Nov 8, 2019, 12:35 PM IST
Highlights

ಕರ್ನಾಟಕ ರಕ್ಷಣಾ ವೇದಿಕೆ ಬಳಕೆ ಮಾಡಿರುವ ಪೋಸ್ಟರ್ ಒಂದು ಇದೀಗ ವಿವಾದಕ್ಕೆ ಕಾರಣವಾಗಿದೆ. ಅಂಧ ಯುವತಿಯ ಫೋಟೊ ಬಳಿಸಿಕೊಂಡಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. 

ಬೆಂಗಳೂರು (ನ.08) : ಮಿಂಟೋ ಆಸ್ಪತ್ರೆ ವೈದ್ಯರ ವಿರುದ್ಧ  ಪ್ರತಿಭಟನೆ ನಡೆಸುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಅಂಧ ಯುವತಿಯೊಬ್ಬಳ ಭಾವಚಿತ್ರ ಬಳಸಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ. 

‘ಟೈಲರ್ ಕೆಲಸ ಮಾಡುತ್ತಾ ಬದುಕುತ್ತಿದ್ದೆ. ಮಿಂಟೋ ಆಸ್ಪತ್ರೆ ವೈದ್ಯರು ನನ್ನ ಕಣ್ಣನ್ನೇ ಕಿತ್ತುಕೊಂಡರು. ನನಗೀಗ ಸೂಜಿಗೆ ದಾರ ಪೋಣಿಸಲು ಸಹ ಆಗುತ್ತಿಲ್ಲ. ನಾನಿನ್ನು ಬದುಕು ವುದು ಹೇಗೆ? ನಕಲಿ ವೈದ್ಯರನ್ನು ಬಂಧಿಸಿ ಜೈಲಿಗೆ ಕಳಿಸಿ’ ಎಂಬ ಭಿತ್ತಿಪತ್ರವನ್ನು ವಿವಿಧೆಡೆ ಅಂಟಿಸಲಾಗಿದೆ. 

ಅದರಲ್ಲಿ ಯುವತಿಯೊಬ್ಬಳ ಫೋಟೋ ಇದೆ. ‘ಆದರೆ, ಆ ಯುವತಿ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನೇ ಪಡೆದಿರಲಿಲ್ಲ. ಸಾಮಾಜಿಕ ಜಾಲತಾಣದಲ್ಲಿನ ಫೋಟೊ ಬಳಸಿಕೊಂಡು ಮಿಂಟೋ ಆಸ್ಪತ್ರೆಗೆ ಮಸಿ ಬಳಿಯುವ ಕೆಲಸ ನಡೆಯುತ್ತಿದೆ’ ಎಂದು ಮಿಂಟೋ ವೈದ್ಯರು ಆರೋಪಿಸಿದ್ದಾರೆ.

ಮಿಂಟೋ ವೈದ್ಯರ ಮೇಲೆ ಕರವೇ ಕಾರ್ಯಕರ್ತೆ ಹಲ್ಲೆ..?...

ಈಗಾಗಲೇ ರಾಜ್ಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ವೈದ್ಯರ ನಡುವೆ ಮಾಸ್ ವಾರ್ ನಡೆಯುತ್ತಿದ್ದು, ರಾಜ್ಯದಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಒಪಿಡಿ ಬಂದ್ ಮಾಡಿ ಎಲ್ಲಾ ಖಾಸಗಿ ಆಸ್ಪತ್ರೆಗಳು ಪ್ರತಿಭಟನೆಗೆ ಇಳಿದಿವೆ.

click me!