ಬೆಂಗಳೂರಿನಲ್ಲಿ ಭರ್ಜರಿ ಡ್ರಗ್ಸ್ ಬೇಟೆ: ₹11.44 ಕೋಟಿ ಮೌಲ್ಯದ MDMA ಜಪ್ತಿ, ಪ್ರೇಮಿಗಳ ಬಂಧನ

Published : Nov 25, 2026, 11:55 AM IST
Imran Siddique Ayesha MDMA Drugs

ಸಾರಾಂಶ

ಬೆಂಗಳೂರಿನ ಯಲಹಂಕ ಉಪನಗರ ಪೊಲೀಸರು 11 ಕೋಟಿ 44 ಲಕ್ಷ ರೂ. ಮೌಲ್ಯದ ಎಂಡಿಎಂಎ ಡ್ರಗ್ಸ್ ವಶಪಡಿಸಿಕೊಂಡಿದ್ದು, ಇಮ್ರಾನ್ ಸಿದ್ದಿಕ್ ಮತ್ತು ಆಯಿಷಾ ಎಂಬ ಪ್ರೇಮಿಗಳನ್ನು ಬಂಧಿಸಿದ್ದಾರೆ. ಇವರು ಲೇಡೀಸ್ ಹ್ಯಾಂಡ್ ಬ್ಯಾಗ್‌ನಲ್ಲಿ ಡ್ರಗ್ಸ್ ಅಡಗಿಸಿ ಸಾಗಿಸುತ್ತಿದ್ದರು.

ಬೆಂಗಳೂರು (ನ.25): ಬೆಂಗಳೂರಿನಲ್ಲಿ ಮಾದಕವಸ್ತು ಮಾರಾಟ ಜಾಲದ ವಿರುದ್ಧ ಕಾರ್ಯಾಚರಣೆ ನಡೆಸಿರುವ ಯಲಹಂಕ ಉಪನಗರ ಪೊಲೀಸರು, ಬರೋಬ್ಬರಿ ₹11 ಕೋಟಿ 44 ಲಕ್ಷ ಮೌಲ್ಯದ ನಿಷೇಧಿತ MDMA ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೇಮಿಗಳಾದ ಇಮ್ರಾನ್ ಸಿದ್ದಿಕ್ ಮತ್ತು ಆಯಿಷಾ ಎಂಬುವವರನ್ನು ಬಂಧಿಸಲಾಗಿದೆ.

ಸಾಗಾಟದ ಹೊಸ ತಂತ್ರ:

ಆರೋಪಿಗಳು ದೆಹಲಿಯಿಂದ ಕಡಿಮೆ ಬೆಲೆಗೆ MDMA ತಂದು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು. ಪೊಲೀಸರ ಕಣ್ಣು ತಪ್ಪಿಸಲು ಇವರು ಹೊಸ ತಂತ್ರ ಹೂಡಿದ್ದರು. ಹೊಸ ಲೇಡೀಸ್ ಹ್ಯಾಂಡ್ ಬ್ಯಾಗ್‌ಗಳಲ್ಲಿ ಆಕಾರಕ್ಕಾಗಿ ಇಡುವ ಪೇಪರ್ ಬದಲಿಗೆ ಸ್ಪಾಂಜ್ ಇಟ್ಟು, ಅದರೊಳಗೆ MDMA ಪ್ಯಾಕೆಟ್‌ಗಳನ್ನು ಅಡಗಿಸಿಟ್ಟು ಸಾಗಾಟ ಮಾಡುತ್ತಿದ್ದರು.

ವಶಪಡಿಸಿಕೊಂಡ ವಸ್ತುಗಳು:

ಯಲಹಂಕ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕವಸ್ತು ಮಾರಾಟಕ್ಕೆ ಯತ್ನಿಸುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು, ಆರೋಪಿಗಳಿಂದ ಒಟ್ಟು 5 ಕೆಜಿ 720 ಗ್ರಾಂ ತೂಕದ MDMA ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಕಾರನ್ನು ಜಪ್ತಿ ಮಾಡಿದ್ದಾರೆ.

ಸದ್ಯ ಆರೋಪಿಗಳ ವಿರುದ್ಧ ಯಲಹಂಕ ಉಪನಗರ ಪೊಲೀಸ್ ಠಾಣೆಯಲ್ಲಿ NDPS (ಮಾದಕ ದ್ರವ್ಯ ಮತ್ತು ಅಮಲು ಪದಾರ್ಥಗಳ ನಿಯಂತ್ರಣ) ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

PREV
Read more Articles on
click me!

Recommended Stories

ಬೆಂಗಳೂರು ಸೇರಿ ಕರ್ನಾಟಕದ 16 ಜಿಲ್ಲೆಗಳಿಗೆ ಮಳೆ ಅಲರ್ಟ್, ಎಷ್ಟು ದಿನ ಇರಲಿದೆ ಈ ವಾತಾವರಣ?
ತಿಂಗಳಿಗೆ ₹40 ಸಾವಿರ ಸಂಬಳ, ರಾತ್ರಿ 8ರ ನಂತರ ನೋ ವರ್ಕ್ ಕಾಲ್ಸ್! ಬೆಂಗಳೂರಿನ ಈ ಅಡುಗೆಯವಳ ಲೈಫ್ ನೋಡಿ ನೆಟ್ಟಿಗರು ಶಾಕ್!