ಸಚಿವ ಕೆಜೆ ಜಾರ್ಜ್ ಜೊತೆ ಶಾರದೆಯ ದರ್ಶನ ಪಡೆದ ನೂತನ ರಾಜ್ಯಪಾಲ ಡಾ.ಸುಧಾ ಯಾದವ್

Published : Oct 17, 2026, 10:00 PM IST
Dr Sudha Yadav Offers Prayers to Sharade

ಸಾರಾಂಶ

ಕರ್ನಾಟಕದ ನೂತನ ರಾಜ್ಯಪಾಲರಾದ ಅಧಿಕಾರ ಸ್ವೀಕರಿಸಿದ ದಿನವೇ ಡಾ.ಸುಧಾ ಯಾದವ್ ಶಾರದೆಯ ದರ್ಶನ ಪಡೆದಿದ್ದಾರೆ. ಸಚಿವ ಕೆಜೆ ಜಾರ್ಜ್ ಜೊತೆ ಶ್ರೀ ಶಾರದಾ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

ಬೆಂಗಳೂರು(ಅ.17): ನೂತನ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ‌ ದಿನವೇ ಡಾ. ಸುಧಾ ಯಾದವ್ ಅವರು ಇಂಧನ ಮತ್ತು ಪ್ರವಾಸೋದ್ಯಮ ಸಚಿವರಾದ ಕೆ.ಜೆ. ಜಾರ್ಜ್ ಅವರೊಂದಿಗೆ ನಗರದ ಶ್ರೀ ಸುರಭಾರತಿ ಸಂಸ್ಕೃತ ಹಾಗೂ ಸಾಂಸ್ಕೃತಿಕ ಪ್ರತಿಷ್ಠಾನದ ಶ್ರೀ ಶಾರದಾ ದೇವಾಲಯಕ್ಕೆ ಸಂಜೆ ಭೇಟಿ ನೀಡಿದರು. ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದ ಶ್ರೀ ಸುರಭಾರತಿ ಕ್ಷೇತ್ರಕ್ಕೆ ರಾಜ್ಯಪಾಲರನ್ನು ಆತ್ಮೀಯವಾಗಿ ಬರಮಾಡಿಕೊಂಡ ಸಚಿವ ಜಾರ್ಜ್, ಪ್ರತಿಷ್ಠಾನದಲ್ಲಿ ಪೂಜಾ ವಿಧಿವಿಧಾನಗಳು ಸಂಪನ್ನಗೊಳ್ಳುವವರೆಗೂ ಅವರ ಜತೆ ಇದ್ದರು.

ಶರನ್ನವರಾತ್ರಿ ಮಹೋತ್ಸವದ ಆರನೇ ದಿನದ ವಿಶೇಷ ಸಂದರ್ಭದಲ್ಲಿ ವೀಣಾಪಾಣಿಯಾದ ಶ್ರೀಶಾರದೆಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ವೇದ ಮಂತ್ರ ಘೋಷಗಳ ನಡುವೆ ಲಕ್ಷ ಕುಂಕುಮಾರ್ಚನೆಯೂ ನಡೆಯಿತು. ಈ ಧಾರ್ಮಿಕ ಕೈಂಕರ್ಯದಲ್ಲಿ ರಾಜ್ಯಪಾಲರು ಮತ್ತು ಸಚಿವರು ಪಾಲ್ಗೊಂಡರು. ಡಾ. ಸುಧಾ ಯಾದವ್ ಅವರು ಪ್ರಮಾಣ ವಚ‌ನ ಸ್ವೀಕರಿಸಿ ಲೋಕಭವನ ಅಧಿಕಾರ ವಹಿಸಿಕೊಂಡ ಬಳಿಕ ಗಣ್ಯರ ಶುಭ ಹಾರೈಕೆ ಸ್ವೀಕರಿಸಿ ಶ್ರೀಶಾರದಾಂಬೆಯ ದರ್ಶನಾಶಿರ್ವಾದ ಪಡೆದುಕೊಂಡರು. ಬಳಿಕ ವಿಶೇಷ ಗೊಂಬೆಗಳ‌ ಪ್ರದರ್ಶನವನ್ನು ವೀಕ್ಷಿಸಿದರು.

ಕುಟುಂಬ ಸದಸ್ಯರ ಜೊತೆ ದೇವಸ್ಥಾನಕ್ಕೆ ಭೇಟಿ ನೀಡಿದ ಡಾ.ಸುಧಾ ಯಾದವ್

ಶ್ರೀ ಸುರಭಾರತೀ ಪ್ರತಿಷ್ಠಾನದ ಟ್ರಸ್ಟಿ ನಾಗರಾಜ್, ನಿವೃತ್ತ ಐಪಿಎಸ್ ಅಧಿಕಾರಿ ರಾಮಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ಇತ್ತೀಚೆಗೆ ಕೇಂದ್ರ ಸರ್ಕಾರ ಕೆಲ ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ ಮಾಡಿತ್ತು. ಕರ್ನಾಟಕ ರಾಜ್ಯಪಾಲರಾಗಿದ್ದ ಥಾವರ್ ಚಂದ್ ಗೆಹ್ಲೋಟ್ ಸ್ಥಾನಕ್ಕೆ ಡಾ. ಸುಧಾ ಯಾದವ್ ಅವರನ್ನು ನೇಮಕ ಮಾಡಲಾಗಿತ್ತು. ಥಾವರ್ ಚಂದ್ ಗೆಹ್ಲೋಟ್‌ಗೆ ಇತ್ತೀಚೆಗೆ ಲೋಕಭವನದಲ್ಲಿ ಅತ್ಮೀಯ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು. ಇದೀಗ ಡಾ.ಸುಧಾ ಯಾದವ್ ಕರ್ನಾಟಕ ನೂತನ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ್ದಾರೆ.

PREV
Read more Articles on
click me!

Recommended Stories

ಕ್ವಿನ್ ಸಿಟಿ ಯೋಜನೆ, ಮಾರ್ಚ್ ಒಳಗೆ ನಿವೇಶನ ಹಂಚಿಕೆ ಗುರಿ ಎಂದ ಎಂಬಿ ಪಾಟೀಲ
ಎರಡು ಕಾರಣಕ್ಕೆ ಬೆಂಗಳೂರಿನ IND vs WI ಪಂದ್ಯಕ್ಕೆ ಕಾದು ಕುಳಿತ ಆರ್‌ಸಿಬಿ ಫ್ಯಾನ್ಸ್, ಮಳೆಯಿಂದ ನಿರಾಸೆ