
ಬೆಂಗಳೂರು (ಅ.17) ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಪ್ರತಿಭಟನೆ ಹಾಗೂ ಹೋರಾಟಕ್ಕೆ ರಾಜ್ಯ ಸರ್ಕಾರ ಸಂಕಷ್ಟಕ್ಕೆ ಸಿಲುಕಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ನಡೆಸಿದ ಷಡ್ಯಂತ್ರದ ಸ್ಟಿಂಗ್ ಸೂತ್ರಧಾರನ ಬಂಧಿಸುವಂತೆ ಆಗ್ರಹಿಸಿ ಕುಮಾರಸ್ವಾಮಿ ಹೋರಾಟ ತೀವ್ರಗೊಳಿಸಿದ್ದಾರೆ. ಸ್ಟಿಂಗ್ ಸೂತ್ರಧಾರನ ಬಂಧಿಸುವ ಬದಲು ತಮ್ಮ ಕಾರ್ಯಕರ್ತರ ಬಂಧಿಸಿರುವ ಪೊಲೀಸರ ನಡೆ ವಿರುದ್ದ ಕುಮಾರಸ್ವಾಮಿ ಕೆಂಡಾಮಂಡಲರಾಗಿದ್ದಾರೆ. ಇಂದು ಕುಮಾರಸ್ವಾಮಿ ಹಾಗೂ ಜೆಡಿಎಸ್ ಕಾರ್ಯಕರ್ತರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಮೆಜೆಸ್ಟಿಕ್ ಸುತ್ತಮತ್ತು, ಫ್ರೀಡಂ ಪಾರ್ಕ್, ನಪತುಂಗಾ ರಸ್ತೆ, ಡಿಜಿ ಕಚೇರಿ ಸೇರಿದಂತೆ ಸುತ್ತ ಮುತ್ತ ಪ್ರದೇಶಕ್ಕೆ ಪ್ರತಿಭಟನೆ ಬಿಸಿ ತಟ್ಟಿದೆ. ಡಿಜಿ ಕಚೇರಿ ಮುಂದಂ ಹೈಡ್ರಾಮ ನಡದಿದೆ. ಕಚೇರಿ ಮುಂದೆ ಧರಣಿ ಆರಂಭಿಸಿದ್ದು, ರಾಜಕೀಯ ಕೋಲಾಹಲ ಸೃಷ್ಟಿಯಾಗಿದೆ.
ಸ್ಟಿಂಗ್ ಆಪರೇಶನ್ ಹಾಗೂ ಸೂತ್ರಧಾರರ ಕುರಿತು ಕಳೆದೆರ ಕೆಲ ದಿನಗಳಿಂದ ಕುಮಾರಸ್ವಾಮಿ ಸತತವಾಗಿ ಸುದ್ದಿಗೋಷ್ಠಿ ಮೂಲಕ ಸರ್ಕಾರದ ನಡೆಯನ್ನು ಪ್ರಶ್ನಿಸುತ್ತಿದ್ದಾರೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಗೃಹ ಸಚಿವ ಪ್ರಿಯಾಂಕ ಖರ್ಗೆ ವಿರುದ್ದ ವಾಗ್ದಾಳಿ ನಡೆಸಿದ್ದರು. ಇಂದು ಬೀದಿಗಿಳಿದು ಕುಮಾರಸ್ವಾಮಿ ಹೋರಾಟ ಮುಂದುವರಿಸಿದ್ದಾರೆ. ಪ್ರತಿಭಟನಾ ಮೆರವಣಿ ಮೂಲಕ ಫ್ರೀಡಂ ಪಾರ್ಕ್ಗೆ ಆಗಮಿಸಿದ ಹೆಚ್ಡಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ಕಾರ್ಯಕರ್ತರು ಸರ್ಕಾರದ ವಿರುದ್ದ ಘೋಷಣೆ ಕೂಗಿದ್ದಾರೆ.
ಫ್ರೀಡಂ ಪಾರ್ಕ್ನಿಂದ ಪಾದಯಾತ್ರೆ ಮೂಲಕ ಡಿಜಿ ಕಚೇರಿಗೆ ತೆರಳು ಮುಂದಾಗಿದ್ದ ಕುಮಾರಸ್ವಾಮಿಯನ್ನು ಪೊಲೀಸರು ಮನಒಲಿಸಿದ್ದಾರೆ. ಹೀಗಾಗಿ ಕಾರಿನ ಮೂಲಕ ಡಿಜಿ ಕಚೇರಿಗೆ ಆಗಮಿಸಿದ ಕುಮಾರಸ್ವಾಮಿ ಧರಣಿ ಆರಂಭಿಸಿದ್ದಾರೆ. ಇತ್ತ ಜೆಡಿಎಸ್ ಕಾರ್ಯಕರ್ತರನ್ನು ಪೊಲೀಸರು ತಡೆದಿದ್ದಾರೆ. ಇತ್ತ ಹಲವು ದಿಕ್ಕಿನಿಂದ ಜೆಡಿಎಸ್ ಕಾರ್ಯಕರ್ತರು ಡಿಜಿ ಕಚೇರಿಗೆ ಆಗಮಿಸಿದ್ದಾರೆ. ಭಾರಿ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿದ ಕಾರಣ ಪೊಲೀಸರು ಡಿಜಿ ಕಚೇರಿ ಗೇಟ್ ಕ್ಲೋಸ್ ಮಾಡಿದ್ದಾರೆ. ಕಾರ್ಯಕರ್ತರು, ಪೊಲೀಸರು ನಡುವೆ ನೂಕಾಟ , ತಳ್ಳಾಟ, ವಾಗ್ವಾದಗಳು ನಡೆದಿದೆ. ಗೇಟ್ ಬಂದ್ ಮಾಡಿದ ಡಿಜಿ ಕಚೇರಿಗೆ ನುಗ್ಗಲು ಪೊಲೀಸರು ಪ್ರಯತ್ನಿಸಿದ್ದಾರೆ.
ಡಿಜಿ ಕಚೇರಿಯಲ್ಲಿ ಒಂದೆಡೆ ಜೆಡಿಎಸ್ ಕಾರ್ಯಕರ್ತರು ಭಾರಿ ಪ್ರತಿಭಟನೆ, ಹೋರಾಟ ಮುಂದುವರಿಸಿದ್ದಾರೆ. ಹೈಡ್ರಾಮ ಮುಂದುವರಿದಿದೆ. ಇತ್ತ ಡಿಜಿಪಿ ಎಂಎ ಸಲೀಮ್ ಭೇಟಿಯಾದ ಕುಮಾರಸ್ವಾಮಿ ಕೆಲ ಬೇಡಿಕೆ ಮುಂದಿಟ್ಟಿದ್ದಾರೆ. ಸ್ಟಿಂಗ್ ಷಡ್ಯಂತ್ರ ನಡೆಸಿದವರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಇದೇ ವೇಳೆ ಅನಾವಶ್ಯಕವಾಗಿ ಜೆಡಿಎಸ್ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಸೂತ್ರಧಾರಿಯನ್ನು ಬಂಧಿಸದೆ, ಇನ್ಯಾರನ್ನೋ ಬಂಧಿಸಿ ಸರ್ಕಾರ ಕಳ್ಳಾಟ ಆಡುತ್ತಿದೆ. ತಕ್ಷಣವೇ ಎಸ್ಐಟಿ ರಚನೆ ಮಾಡಿ ತನಿಖೆ ನಡೆಯಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.