ಬೆಂಗಳೂರು, ಹುಬ್ಬಳ್ಳಿ-ಧಾರವಾಡ ಸಮೀಪ 1000 ಎಕ್ರೆಲಿ ಸ್ಟಾರ್ಟ್‌ಅಪ್‌ ಪಾರ್ಕ್‌ ಸ್ಥಾಪನೆ!

Published : Nov 19, 2026, 07:47 AM IST
Startup park Hubballi Dharwad

ಸಾರಾಂಶ

ರಾಜ್ಯದಲ್ಲಿ ನವೋದ್ಯಮಗಳಿಗೆ ಉತ್ತೇಜನ ನೀಡಲು ಬೆಂಗಳೂರು ಹಾಗೂ ಹುಬ್ಬಳ್ಳಿ-ಧಾರವಾಡ ಸಮೀಪ ಬೃಹತ್ ಸ್ಟಾರ್ಟ್‌ಅಪ್‌ ಪಾರ್ಕ್‌ ಸ್ಥಾಪಿಸಲು ಸರ್ಕಾರ ಮುಂದಾಗಿದೆ. ನವೋದ್ಯಮಗಳಿಗೆ ಕಡಿಮೆ ಬೆಲೆಗೆ ಭೂಮಿ ಮತ್ತು ಹೆಚ್ಚುವರಿ ಸಹಾಯಧನ ನೀಡುವ ಬಗ್ಗೆ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಸಮ್ಮೇಳನದಲ್ಲಿ ಭರವಸೆ ನೀಡಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿ ನವೋದ್ಯಮಗಳಿಗೆ ಮತ್ತಷ್ಟು ಉತ್ತೇಜನ ನೀಡಲು ಬೆಂಗಳೂರು ಸಮೀಪ ಒಂದು ಸಾವಿರ ಎಕರೆ ವಿಸ್ತೀರ್ಣದಲ್ಲಿ ಮತ್ತು ಹುಬ್ಬಳ್ಳಿ-ಧಾರವಾಡ ಸಮೀಪ 100ರಿಂದ 200 ಎಕರೆ ವಿಸ್ತೀರ್ಣದಲ್ಲಿ ಸ್ಟಾರ್ಟ್‌ಅಪ್‌ ಪಾರ್ಕ್‌ ಸ್ಥಾಪಿಸಲಾಗುವುದು ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.

ನವೋದ್ಯಮಿಗಳಿಗೆ ಅನುಕೂಲ

ಬೆಂಗಳೂರು ಟೆಕ್‌ ಸಮ್ಮಿಟ್‌ನಲ್ಲಿ ಬುಧವಾರ ನವೋದ್ಯಮ ಸ್ಥಾಪಕರು ಮತ್ತು ಹೂಡಿಕೆದಾರರ ಜತೆಗೆ ಅವರು ಸಂವಾದ ನಡೆಸಿ ವೇಳೆ ನವೋದ್ಯಮಿಗಳು, ಬೆಂಗಳೂರಿನಲ್ಲಿ ಭೂಮಿಯ ಬೆಲೆ ಹೆಚ್ಚಾಗಿದೆ. ಕಡಿಮೆ ಬೆಲೆಗೆ ಭೂಮಿ ಸಿಕ್ಕಿದರೆ ನವೋದ್ಯಮಿಗಳಿಗೆ ಅನುಕೂಲವಾಗುತ್ತದೆ ಎಂದು ಗಮನ ಸೆಳೆದರು.

ಹುಬ್ಬಳ್ಳಿ-ಧಾರವಾಡದಲ್ಲಿ ಸ್ಟಾರ್ಟ್‌ಅಪ್‌ ಪಾರ್ಕ್‌

ಅದಕ್ಕೆ ಉತ್ತರಿಸಿದ ಸಚಿವ ಎಂ.ಬಿ.ಪಾಟೀಲ, ಈ ಸಮಸ್ಯೆ ಬಗೆಹರಿಸಲು ಬೆಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡದಲ್ಲಿ ಸ್ಟಾರ್ಟ್‌ಅಪ್‌ ಪಾರ್ಕ್‌ ಸ್ಥಾಪಿಸಲಾಗುತ್ತದೆ. ಈ ಉದ್ದೇಶಿತ ಸ್ಟಾರ್ಟ್‌ಅಪ್‌ ಪಾರ್ಕ್‌ಗಳಲ್ಲಿ ಕೈಗಾರಿಕಾ ನಿವೇಶನಗಳನ್ನು ಲೀಸ್‌ ಕಂ ಸೇಲ್‌ ಅಥವಾ ಬೇರೆ ಯಾವ ಸ್ವರೂಪದಲ್ಲಿ ನೀಡಬಹುದು ಎನ್ನುವುದರ ಕುರಿತು ಚರ್ಚಿಸಲಾಗುತ್ತದೆ. ಜತೆಗೆ ಬೆಂಗಳೂರಿನ ಹೊರಗಿರುವ ನವೋದ್ಯಮಗಳಿಗೆ ಈಗ ನೀಡಲಾಗುತ್ತಿರುವ ಸಹಾಯಧನದ ಜತೆಗೆ ಹೆಚ್ಚುವರಿಯಾಗಿ ಶೇ.5ರಷ್ಟು ಸಹಾಯಧನ ನೀಡಲು ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು.

ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್‌, ಆಯುಕ್ತೆ ಖುಷ್ಬು ಗೋಯಲ್‌, ಸರ್ಕಾರದ ನವೋದ್ಯಮ ವಿಷನ್‌ ಗ್ರೂಪ್‌ ಅಧ್ಯಕ್ಷ ಪ್ರಶಾಂತ್‌ ಪ್ರಕಾಶ್‌, ಸ್ಪೆಷಲ್‌ ಇನ್ವೆಸ್ಟ್‌ ಕಂಪೆನಿಯ ಅರ್ಜುನ್‌ ರಾವ್‌, ಸ್ಯಾಮ್ಸಂಗ್‌ ವೆಂಚರ್ಸ್‌ ಪಾಲುದಾರ ರೋಹನ್‌ ಶೆಟ್ಟಿ, ಅಕ್ಷಯಕಲ್ಪ ಸಂಸ್ಥೆಯ ಶಶಿಕುಮಾರ್‌ ಇತರರಿದ್ದರು.

PREV
Read more Articles on
click me!

Recommended Stories

ಏರ್‌ಪೋರ್ಟ್‌ಗೆ ಗೆದ್ದಲಹಳ್ಳಿಯಿಂದ ಹೊಸ ಮೇಲ್ಸೇತುವೆ; ಬೆಂಗಳೂರು ವ್ಯಾಪ್ತಿಗೆ 111 ಹಳ್ಳಿ
ಬಳ್ಳಾರಿಯಲ್ಲಿ ಅಳಿವಿನಂಚಿನ ಅಪರೂಪದ ಹೆಬ್ಬಾಕ ಪಕ್ಷಿಗಳ ಸಂರಕ್ಷಣೆಗೆ ಹೈಕೋರ್ಟ್ ಮಹತ್ವದ ನಿರ್ದೇಶನ.