ಕನ್ನಡ ಮಿತ್ರರು UAE ಆಯೋಜನೆಯ ಕನ್ನಡ ಪಾಠ ಶಾಲೆ ದುಬೈಗೆ ಗಡಿನಾಡು ಸಾಧಕ ಅಂತಾರಾಷ್ಟ್ರೀಯ ಪುರಸ್ಕಾರ

Published : Oct 28, 2025, 08:14 PM IST
Kannada Patha Shale Dubai

ಸಾರಾಂಶ

Kannada Patha Shale Dubai Wins Gadinaadu Sadhaka International Award ದುಬೈ ಗಡಿನಾಡ ಉತ್ಸವದಲ್ಲಿ, ಅನಿವಾಸಿ ಮಕ್ಕಳಿಗೆ ಉಚಿತ ಕನ್ನಡ ಶಿಕ್ಷಣ ನೀಡುತ್ತಿರುವ ಕನ್ನಡ ಪಾಠ ಶಾಲೆ ದುಬೈಯ ಸಂಸ್ಥಾಪಕ ಶಶಿಧರ್ ನಾಗರಾಜಪ್ಪ ಮತ್ತು ಅವರ ತಂಡವನ್ನು 'ಕನ್ನಡ ಸಾಧಕ ಪುರಸ್ಕಾರ' ನೀಡಿ ಗೌರವಿಸಲಾಯಿತು. 

ಬೆಂಗಳೂರು (ಅ.28): ಅನಿವಾಸಿ ಯುವ ಪೀಳಿಗೆ ಕನ್ನಡ ಸಾಕ್ಷರತೆಯನ್ನು ಸಾರುವ ಕನ್ನಡ ಸಾಕ್ಷರತೆಯ ಮಹಾ ಅಭಿಯಾನವನ್ನು ಆರಂಭಿಸಿ, ಜಾಗತಿಕ ಕನ್ನಡ ಕಲಿಕಾ ಚಳುವಳಿಯ ಹರಿಕಾರ ಎಂದು ಪ್ರಖ್ಯಾತರಾಗಿರುವ ಶಶಿಧರ್ ನಾಗರಾಜಪ್ಪ ಮತ್ತು ಅವರ ತಂಡವನ್ನು ದುಬೈ ಗಡಿನಾಡ ಉತ್ಸವ -2025 ರಲ್ಲಿ ಪುರಸ್ಕರಿಸಿ ಗೌರವಿಸಲಾಯಿತು.

ದುಬೈ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡಮಿ {ರಿ }ಯುಎಇ ಘಟಕ ಮತ್ತು ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರಕಾರ ಇವರ ಜಂಟಿ ಆಶ್ರಯದಲ್ಲಿ ದುಬೈಯ ಗ್ಲೆಂಡೆಲ್ international school ಸಭಾಂಗಣದ ವೇದಿಕೆಯಲ್ಲಿ 4ನೇ ವರ್ಷದ ದುಬೈ ವಿಶೇಷ ಕಾರ್ಯಕ್ರಮದಲ್ಲಿ ಹಲವರಿಗೆ ಸನ್ಮಾನಿಸಲಾಯಿತು. ಕರ್ನಾಟಕ ರಾಜ್ಯ ಹೆಲ್ತ್ ಕೌನ್ಸಿಲ್ ನ ಅಧ್ಯಕ್ಷರಾದ ಡಾ.ಯು.ಟಿ.ಇಪ್ತಿಕಾರ್ ಅಲಿ, ಕಾಸರಗೋಡಿನ ಶಾಸಕರಾದ ಎನ್.ಎ ನೆಲ್ಲಿಕುನ್ನು, ಮಂಜೇಶ್ವರದ ಶಾಸಕರದ ಎ.ಕೆ.ಎಂ.ಅಶ್ರಪ್ , ಸುಬ್ಬಯ್ಯ ಕಟ್ಟೆ , ಅಮರದೀಪ ಕಲ್ಲೂರಾಯ ಉದ್ಯಮಿ ರೊನಾಲ್ಡ್ ಮಾರ್ಟಿಸ್ ಮತ್ತು ಇತರ ಗಣ್ಯಾತಿ ಗಣ್ಯರ ಸಮ್ಮುಖದಲ್ಲಿ ಕನ್ನಡ ಪಾಠ ಶಾಲೆ ದುಬೈ ನ ಅಧ್ಯಕ್ಷರಾದ ಶ್ರೀ ಶಶಿಧರ್ ನಾಗರಾಜಪ್ಪ ಮತ್ತು ಸಂಸ್ಥೆ ಯ ಆಡಳಿತ ಮಂಡಳಿ ಯ ಸದಸ್ಯರಾದ ಶಾಲಾ ಉಪಾಧ್ಯಕ್ಷ ಸಿದ್ದಲಿಂಗೇಶ್ ರೇವಪ್ಪ, ಕಾರ್ಯದರ್ಶಿ ಸುನೀಲ್ ಗವಾಸ್ಕರ್, ಮುಖ್ಯ ಸಂಚಾಲಕಿ ರೂಪ ಶಶಿಧರ್ ಮತ್ತು ಖಜಾಂಚಿ ನಾಗರಾಜ್ ರಾವ್ ರವರಿಗೆ ಕನ್ನಡ ಸಾಧಕ ಪುರಸ್ಕಾರ ನೀಡಿ ಗೌರವಿಸಲಾಯಿತು.

1200 ಮಕ್ಕಳಿಗೆ ದುಬೈನಲ್ಲಿ ಕನ್ನಡ ಪಾಠ

2014 ರಿಂದ ದುಬೈನಲ್ಲಿ ಅನಿವಾಸಿ ಭಾರತೀಯ ಮಕ್ಕಳಿಗೆ ಕನ್ನಡ ಭಾಷಾ ಬೋಧನೆಯನ್ನು ಉಚಿತವಾಗಿ ಮಾಡುತ್ತಾ ಬಂದಿರುವ ಕನ್ನಡ ಮಿತ್ರರು ಯು ಎ ಇ ಆಯೋಜನೆಯ ಕನ್ನಡ ಪಾಠ ಶಾಲೆ ದುಬೈ ಗೆ ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮನ್ನಣೆ ದೊರತಿದೆ. ಶಶಿಧರ್ ನಾಗರಾಜಪ್ಪ ನೇತೃತ್ವದ ಈ ಶಾಲೆಯಲ್ಲಿ 20 ಶಿಕ್ಷಕಿಯರು ಮತ್ತು 100 ಸ್ವಯಂಸೇವಕರು ಉಚಿತವಾಗಿ ಸೇವೆಸಲ್ಲಿಸುತ್ತಿದ್ದಾರೆ.

ಕನ್ನಡ ಪಾಠ ಶಾಲೆ ದುಬೈನಲ್ಲಿ ಪ್ರಸ್ತುತ 1200 ಮಕ್ಕಳು ಉಚಿತ ಕನ್ನಡ ಭಾಷಾ ಶಿಕ್ಷಣ ಪಡೆಯುತ್ತಿದ್ದು, ವಿಶ್ವದ ಅತೀ ದೊಡ್ಡ ಹೊರನಾಡ ಕನ್ನಡ ಪಾಠ ಶಾಲೆಯಾಗಿದೆ.

 

PREV
Read more Articles on
click me!

Recommended Stories

Justice for Bongo: ಮಗು ಹುಟ್ಟಿದ್ದಕ್ಕೆ ಸಾಕಿ ಸಲುಹಿದ ಶ್ವಾನ ಕೊಂದ್ರಾ ಪಾಪಿಗಳು? ಸಿಲಿಕಾನ್ ಸಿಟಿಯಲ್ಲಿ 'ಬೋಂಗೋ' ಸಾವಿನ ರೋಚಕ ಕಹಾನಿ!
ಪಬ್‌ನಲ್ಲಿ ಶಾರುಖ್ ಪುತ್ರನ ದುರ್ವರ್ತನೆ ಕೇಸ್: ಆರ್ಯನ್ ಖಾನ್ ಸೇರಿ ಮೂವರ ವಿರುದ್ಧ ಹಿಂದೂ ಮುಖಂಡನಿಂದ ದೂರು