
ಬೆಂಗಳೂರು (ಜು.03) ಬೆಂಗಳೂರಿನ ಯುವೋದ್ಯಮಿ ಕುತೂಹಲ ಘಟನೆಯೊಂದನ್ನು ಬಹಿರಂಗಪಡಿಸಿದ್ದಾರೆ.ಶಿಕ್ಷಣ ಮುಗಿಸಿ ಉದ್ಯೋಗ ಅರಸಿ ಬಂತ ಯುವ ಉತ್ಸಾಹಿಗೆ ಕೈತುಂಬ ವೇತನದ ಉದ್ಯೋಗ ಆಫರ್ ಸಿಕ್ಕಿತ್ತು. ಸಂದರ್ಶನದಲ್ಲಿ ಯುವಕನ ಪ್ರತಿಭೆ ಕಂಡ ಮನಸೋತ ಸಿಇಒ ಭರ್ಜರಿ ಸ್ಯಾಲರಿಯ ಉದ್ಯೋಗ ಆಫರ್ ನೀಡಿದ್ದರು. ಆದರೆ ಇದೇ ಸಿಇಒ ಮುಂದೆ ನಿಮ್ಮ ಜಾಬ್ ಬೇಡ, ಸ್ಯಾಲರಿನೂ ಬೇಡ ಎಂದು ಹೊರ ನಡೆದ ಘಟನೆಯನ್ನು ಸದ್ಯ ಯವ ಉದ್ಯಮಿಯಾಗಿರುವ ಶಿಖರ್ ಸಕ್ಸೇನಾ ಬಹಿರಂಗಪಡಿಸಿದ್ದಾರೆ.
ಉದ್ಯೋಗ ತಿರಸ್ಕರಿಸಿದ ಕುರಿತು ಶಿಖರ್ ಸಕ್ಸೇನಾ ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಈ ಮಾಹಿತಿ ಪ್ರಕಾರ, ಬೆಂಗಳೂರಿನ ಸ್ಟಾರ್ಟ್ಅಪ್ ಕಂಪನಿಯಲ್ಲಿ ಉದ್ಯೋಗ ಆಫರ್ ಇತ್ತು. ಸಂದರ್ಶನ ನಡೆಯುತ್ತಿತ್ತು. ಕಂಪನಿ ಹೆಚ್ಆರ್ ಒಬ್ಬೊಬ್ಬರಿಗೆ ಬೇರೆ ಬೇರೆ ಸಮಯ ನಿಗದಿ ಮಾಡಿದ್ದರು. ಒಂದೇ ಬಾರಿಗೆ ಸಂದರ್ಶನ ನಡೆಸಿದರೆ ಸಮಸ್ಯೆಯಾಗಲಿದೆ ಎಂದು ಬೇರೆ ಬೇರೆ ದಿನ, ಬೇರೆ ಸಮಯ ನಿಗದಿ ಮಾಡಲಾಗಿತ್ತು. ಹೀಗೆ ತನಗೆ ಹೇಳಿದ ಸಮಯದಲ್ಲಿ ಶಿಖರ್ ಸಕ್ಸೇನಾ ಸ್ಟಾರ್ಟ್ಅಪ್ ಕಂಪನಿ ಕಚೇರಿಯಲ್ಲಿ ಹಾಜರಾಗಿದ್ದರು.
ಉದ್ಯೋಗದ ಇಂಟರ್‌ವ್ಯೂವ್‌ಗಾಗಿ ಆಗಮಿಸಿದ ಶಿಖರ್ ಸಕ್ಸೇನಾ ಸಂದರ್ಶನಕ್ಕಾಗಿ ಬರೋಬ್ಬರಿ 40 ನಿಮಿಷ ಕಾಯಬೇಕಾಯಿತು. 40 ನಿಮಿಷದ ಬಳಿಕ ಇಂಟರ್‌ವ್ಯೂವ್ ಮಾಡಲಾಗಿತ್ತು. ಸಂದರ್ಶನದಲ್ಲಿ ಯುವಕನ ಪ್ರತಿಭೆಗೆ ಸಿಇಒ ಮನಸೋತಿದ್ದರು. ತಕ್ಷಣವೇ ಉತ್ತಮ ಸ್ಯಾಲರಿ ಆಫರ್ ಕೂಡ ಮಾಡಿದ್ದಾರೆ. ಆದರೆ ಸಿಇಒ ಮುಂದೆ ಜಾಬ್ ಆಫರ್ ತಿರಸ್ಕರಿಸಿದ್ದಾನೆ. ನಿಮ್ಮ ಜಾಬ್ ಬೇಡ, ಸ್ಯಾಲರಿನೂ ಬೇಡ ಎಂದು ಹೊರನಡೆದಿದ್ದಾನೆ.
ಶಿಖರ್ ಸಕ್ಸೇನಾ ಹೇಳಿಕೊಂಡಿರುವಂತೆ 40 ನಿಮಿಷ ಕಾಯಿಸಿದ ಸರಿಯಲ್ಲ. ಆದರೆ ಕಾಯಿಸಿದ ಬಳಿಕ ಕಂಪನಿ ಸಂಸ್ಥಾಪಕ ಒಂದು ಕ್ಷಮೆ ಕೂಡ ಕೇಳಲಿಲ್ಲ. ನನ್ನ ಸಮಯಕ್ಕೆ ಬೆಲೆ ಇಲ್ಲದ ರೀತಿ ನಡೆದುಕೊಂಡರು. ಕನಿಷ್ಠ ಒಂದು ಕ್ಷಮೆ ಕೇಳಿ ಇಂಟರ್‌ವ್ಯೂವ್ ಆರಂಭಿಸಿದ್ದರೆ ಪರಿಸ್ಥಿತಿ ಬೇರೆ ಇರುತ್ತಿತ್ತು. ಹೀಗಾಗಿ ನಾನು ಆಫರ್ ತಿರಸ್ಕರಿಸಿದೆ ಎಂದಿದ್ದಾರೆ. ಕೆಲ ದಿನಗಳ ಬಳಿಕ ಅಲ್ಲಿ ಸೇರಿಕೊಂಡ ಹಲವರ ಪರಿಸ್ಥಿತಿ ಶೋಚನೀಯವಾಗಿತ್ತು ಅನ್ನೋ ಮಾಹಿತಿ ತಿಳಿಯಿತು ಎಂದು ಶಿಖರ್ ಸಕ್ಸೇನಾ ಹೇಳಿದ್ದಾರೆ.
ಹಲವರು ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ. ಇಂತಹ ಕಂಪನಿಗಳಲ್ಲಿ ಕೆಲಸ ಮಾಡದಿರುವುದೇ ಒಳಿತು ಎಂದಿದ್ದಾರೆ. ಉದ್ಯೋಗಿಗಳ ಸಮಯ,ಪ್ರತಿಭೆಗೆ ಬೆಲೆ ಕೊಡದ ಕಂಪನಿಗಳು, ಬಾಸ್, ಮ್ಯಾನೇಜರ್ ಕೆಳಗೆ ಕೆಲಸ ಮಾಡದಿರುವುದು ಉತ್ತಮ. ಇದಕ್ಕಿಂತ ಬೇರೆ ದಾರಿ ಆಯ್ಕೆ ಮಾಡಿಕೊಂಡರೆ ಕರಿಯರ್ ಉತ್ತಮವಾಗಲಿದೆ. ಇದೀಗ ಶಿಖರ್ ಸಕ್ಸೇನಾ ಅಂದು ಕಂಪನಿ ಸೇರಿಕೊಂಡಿದ್ದರೆ, ಇಂದೂ ಕೂಡ ಉದ್ಯೋಗಿಯಾಗಿರುತ್ತಿದ್ದರು. ಇದೀಗ ಶಿಖರ್ ಉದ್ಯಮಿಯಾಗಿ ಹಲವರಿಗೆ ಕೆಲಸ ಕೊಟ್ಟಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.