ಮೃತ್ಯುಕೂಪ ಮ್ಯಾನ್ ಹೋಲ್ ಮುಚ್ಚಿದ ಬೆಂಗಳೂರು ಪೊಲೀಸ್‌ಗೊಂದು ಶಹಬ್ಬಾಸ್

Published : Jul 11, 2019, 10:44 PM ISTUpdated : Jul 12, 2019, 11:35 AM IST
ಮೃತ್ಯುಕೂಪ ಮ್ಯಾನ್ ಹೋಲ್ ಮುಚ್ಚಿದ ಬೆಂಗಳೂರು ಪೊಲೀಸ್‌ಗೊಂದು ಶಹಬ್ಬಾಸ್

ಸಾರಾಂಶ

ಬೆಂಗಳೂರು ಪೊಲೀಸರು ಮಾಡುವ ಉತ್ತಮ ಕೆಲಸಗಳನ್ನು ಸೋಶಿಯಲ್ ಮೀಡಿಯಾ ಕೊಂಡಾಡುತ್ತದೆ.  ಮಳೆಗೆ ತತ್ತರಿಸಿದ ಬೆಂಗಳೂರು ರಸ್ತೆಗಳು ಜಲಪ್ರಳಯಕ್ಕೆ ಒಳಗಾಗಿದ್ದಾಗ ಪೊಲೀಸರೆ ಮುಂದಾಗಿ ನೀರು ತೆಗೆಯುವ ಕೆಲಸ ಮಾಡಿದ್ದರು. ಈಗ ಸಹ ಈ ಪೊಲೀಸ್ ಅಧಿಕಾರಿ ಮಾಡಿರುವ ಕೆಲಸವನ್ನು ಶ್ಲಾಘಿಸಲೇಬೇಕು.

ಬೆಂಗಳೂರು[ಜು. 11] ಇದು ಭಾನುವಾರ ಸಂಜೆ ನಡೆದ ಘಟನೆ. ಆದರೆ ಇದಕ್ಕೊಂದು ಮೆಚ್ಚುಗೆ ಬೇಕೆ ಬೇಕು. ದಾರಿಯಲ್ಲಿ ಮ್ಯಾನ್ ಹೋಲ್ ಕಂಡರೆ ಏನು ಮಾಡುತ್ತೇವೆ. ಪಕ್ಕದಲ್ಲಿ ದಾರಿ ಎಲ್ಲಿದೆ ಎಂದು ಹುಡುಕಿ ಹೆಜ್ಜೆ ಇಡುತ್ತೇವೆ. ಆದರೆ ಈ ಪೊಲೀಸ್ ಹಾಗೆ ಮಾಡಿಲ್ಲ.

ಎಚ್‌ಎಸ್‌ ಆರ್ ಲೇಔಟ್ ನ ಮೂರನೇ ಹಂತದಲ್ಲಿ ತೆರಳುತ್ತಿದ್ದ ಪೊಲೀಸ್ ಅಧಿಕಾರಿ  ಎಂ.ಗಿರೀಶ್ ಅವರಿಗೆ ತೆರೆದಿರುವ ಮ್ಯಾನ್ ಹೋಲ್ ಕಂಡಿದೆ. ತಕ್ಷಣ ಸ್ವಯಂ ಕಾರ್ಯನಿರತರಾದ ಗಿರೀಶ್ ಕಲ್ಲೊಂದನ್ನು ತಂದು ಮ್ಯಾನ್ ಹೋಲ್ ಮುಚ್ಚಿದ್ದು ಶ್ಲಾಘನೆಗೆ ಪಾತ್ರವಾಗಿದ್ದಾರೆ. 

221 ರಸ್ತೆ ಗುಂಡಿ ಮುಚ್ಚಿದ ಬೆಂಗಳೂರು ಸಂಚಾರ ಪೊಲೀಸರು!

ಪೊಲೀಸ್ ಹಿರಿಯ ಅಧಿಕಾರಿಗಳು ಜತೆಗೆ ನಾಗರಿಕರು ಸಹ ಕೆಲಸವನ್ನು ಕೊಂಡಾಡಿದ್ದಾರೆ. ಇಂಥ ಮಾದರಿ ಕೆಲಸ ಮಾಡಿದ ನಿಮಗೆ ಧನ್ಯವಾದ  ಎಂದು ಹೇಳಿದ್ದಾರೆ.

PREV
click me!

Recommended Stories

Bengaluru: ಕ್ಯಾಬ್ ಚಾಲಕನ ಮೇಲೆ ಯುವತಿ ರೇಪ್ ಆರೋಪ, ತನಿಖೆ ವೇಳೆ ಬಿಗ್ ಟ್ವಿಸ್ಟ್!
ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!