
ಬೆಂಗಳೂರು (ಜೂ.23) ಬೆಂಗಳೂರಿನಲ್ಲಿ ಕನ್ನಡ ಮರೆಯಾಗುತ್ತಿದೆ, ಕನ್ನಡ ಪರಂಪರೆ, ಸಂಸ್ಕೃತಿಗಳು ಸೊರಗುತ್ತಿದೆ ಅನ್ನೋ ಕೂಗು, ಹೋರಾಟ ನಿರಂತರವಾಗಿ ನಡೆಯುತ್ತಲೇ ಇದೆ. ಕನ್ನಡ ಬಳಕೆ ಕಡಿಮೆಯಾಗುತ್ತಿದೆ ಅನ್ನೋದರಲ್ಲಿ ಎರಡು ಮಾತಿಲ್ಲ. ಇನ್ನು ಕನ್ನಡವನ್ನು ಅವಮಾನಿಸುವ, ಭಾಷೆಯನ್ನು ಅಗೌರವಿಸುವ ಹಲವರಿಗೆ ತಕ್ಕ ಪಾಠದ ಅಗತ್ಯವೂ ಇದೆ. ಆದರೆ ಇದರ ಹೆಸರಿನಲ್ಲಿ ಎಲ್ಲರನ್ನೂ ಒಂದೇ ತಕ್ಕಡಿ ತೂಗಲಾಗುತ್ತಿದೆಯಾ ಅನ್ನೋ ಚರ್ಚೆ ಇದೀಗ ಹುಟ್ಟಿಕೊಂಡಿದೆ. ಇದಕ್ಕೆ ಕಾರಣ ಕನ್ನಡಿಗ ಮಾಡಿದ ಪೋಸ್ಟ್. ಬೆಂಗಳೂರು ಆತ್ಮಹೀನ, ದ್ವೇಷಪೂರಿತವಾಗುತ್ತಿದೆ. ಕನ್ನಡಿಗರೇ ಉಸಿರುಗಟ್ಟಿದ ವಾತಾವರಣದಲ್ಲಿ ಬದುಕು ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದಿರುವ ಕನ್ನಡಿಗ, ಕೆಲ ಘಟನೆಗಳನ್ನು ಉಲ್ಲೇಖಿಸಿದ್ದಾರೆ.
ನಾನು ಕನ್ನಡಿಗ, ಬೆಂಗಳೂರು ಸಮರ್ಥಿಸಿ ಸೋತಿದ್ದೇನೆ
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ದ್ವೇಷದ ಕುರಿತು ವಿವರವಾಗಿ ರೆಡ್ಡಿಟ್‌ನಲ್ಲಿ ಬರೆದುಕೊಂಡಿರುವ ಕನ್ನಡಿಗ, ನಾನು ಕನ್ನಡಿಗ, ಬೆಂಗಳೂರು ಸಮರ್ಥಿಸಿ ಸೋತಿದ್ದೇನೆ. ಈ ನಗರ ಎದುರಿಸುತ್ತಿರುವ ಟೀಕೆಗೆ ಅರ್ಹವಾಗಿದೆ ಎಂದು ಈ ಪೋಸ್ಟ್‌ನಲ್ಲಿ ಅಸಮಾಧಾನ ತೋಡಿಕೊಂಡಿದ್ದಾನೆ. ಕರ್ನಾಟಕದ ಮತ್ತೊಂದು ನಗರದಿಂದ ಬೆಂಗಳೂರಿಗೆ ಬಂದ ಈತ ಕಳೆದ ಆರೇಳು ವರ್ಷದಿಂದ ಬೆಂಗಳೂರಲ್ಲಿ ನಲೆಸಿದ್ದಾನೆ. ಆದರೆ ಇದೀಗ ಬೆಂಗಳೂರಿನ ವಾತಾವರಣ ಕೆಟ್ಟದಾಗುತ್ತಿದೆ ಎಂದು ಬರೆದುಕೊಂಡಿದ್ದಾನೆ.
ಬಿಎಂಟಿಸಿ ಬಸ್‌ನಲ್ಲಿ ಏನಾಯ್ತು?
ಬೆಂಗಳೂರು ಎಲ್ಲರನ್ನು ಪ್ರೀತಿಯಿಂದ ಸ್ವಾಗತಿಸಿದೆ. ಭಾಷೆ ವಿಚಾರ ಬಂದಾಗ ಅಗೌರವದಿಂದ ಕಾಣುವ, ಅವಮಾಸುವ ವ್ಯಕ್ತಿಗಳಿಗೆ ತಕ್ಕ ಪಾಠ ಕಲಿಸಿದೆ. ಆದರೆ ಎಲ್ಲರನ್ನು ಒಂದೇ ಕಣ್ಣಿನಿಂದ ನೋಡಿ, ಹೀಯಾಳಿಸುವುದು, ವ್ಯಂಗ್ಯವಾಡುವುದು ಎಷ್ಟು ಸರಿ ಅನ್ನೋದು ಈ ಕನ್ನಡಿಗನ ಪ್ರಶ್ನೆ. ಇದಕ್ಕೆ ತನಗಾದ ಕೆಲ ಅನುಭವ ಹಂಚಿಕೊಂಡಿದ್ದಾನೆ. ಕಚೇರಿಗೆ ತೆರಳಲು ತಡವಾಗಿತ್ತು. ಹೀಗಾಗಿ ಫೋನ್ ಮೂಲಕ ಕಚೇರಿ ಕೆಲಸಗಳ ಸೂಚನೆ ನೀಡುತ್ತಿದ್ದೆ. ಇದೇ ವೇಳೆ ಬಿಎಂಟಿಸಿಗೆ ತೆರಳುತ್ತಿದ್ದ ಬಸ್ ಸಿಗ್ನಲ್ ಬಳಿ ನಿಂತಿತ್ತು.ಫೋನ್ ಕೈಯಲ್ಲಿ ಹಿಡಿದುಕೊಂಡೇ ಬಸ್ ಬಾಗಿಲು ತಟ್ಟಿ, ನಾನು ಒಳಗೆ ಬರಬಹುದೇ ಎಂದು ಕಂಡಕ್ಟರ್ ಬಳಿ ಕೇಳಿಕೊಂಡೆ. ಕಂಡಕ್ಟರ್ ಮುಂಬಾಗಿಲ ಮೂಲಕ ಒಳಬರುವಂತೆ ಸೂಚಿಸಿದರು. ಇದರಂತ ಬಸ್ ಹತ್ತಿದ ನನ್ನ ನೋಡಿ ಕಂಡಕ್ಟರ್ ಸ್ಟೈಲ್ ಆಗಿ ಫೋನ್ ಕೈಯಲ್ಲಿ ಹಿಡಿದು ಬಾಗಿಲು ತಟ್ಟುತ್ತಿಯಾ ಎಂದು ಗೇಲಿ ಮಾಡಿದರು. ಇನ್ನುಳಿದ ಪದಗಳು ನನಗೆ ಸರಿಯಾಗಿ ಕೇಳಿಸಲಿಲ್ಲ ಎಂದು ಈ ಕನ್ನಡಿ ಹೇಳಿದ್ದಾನೆ. ಫೋನ್ ಕೈಯಲ್ಲಿ ಹಿಡಿದು ಬಸ್ ಡೋರ್ ತಟ್ಟಿದ ಕಾರಣಕ್ಕೆ ಅನಾವಶ್ಯಕವಾಗಿ ಗೇಲಿ ಮಾಡಲಾಗಿತ್ತು. ಇಷ್ಟೇ ಅಲ್ಲ ಆಟೋ ಚಾಲಕರು, ಇತರ ಸಿಬ್ಬಂದಿಗಳು ಸೇರಿದಂತೆ ಹಲವರು ಒರಟಾಗಿ ಮಾತನಾಡಿದ್ದಾರೆ. ದ್ವೇಷಿಸುವ ರೀತಿ ವರ್ತಿಸಿದ್ದಾರೆ. ಅವರು ಯಾರೊಂದಿಗಾದರೂ ದ್ವೇಷ ತೀರಿಸಿಕೊಳ್ಳಲು ಕಾಯುತ್ತಿರುವಂತೆ ವರ್ತಿಸುತ್ತಾರೆ ಎಂದು ಅನುಭವಗಳನ್ನು ಹೇಳಿಕೊಂಡಿದ್ದಾರೆ.
ಕನ್ನಡ ಮಾತನಾಡಿದ ಬಳಿಕ ಸಾಫ್ಟ್
ಇದಕ್ಕಿಂತ ಹೆಚ್ಚು ಹತಾಶೆಗೊಳಿಸುವ ವಿಚಾರ ಎಂದರೆ ನಾನು ಹೇಗೆ ಡ್ರೆಸ್ ಧರಿಸಿದ್ದೇನೆ ಅನ್ನೋದರ ಮೇಲೆ ವರ್ತನೆಗಳು ಬದಲಾಗುತ್ತದೆ. ಉತ್ತಮವಾಗಿ, ಆಫೀಸ್ ಲುಕ್ ಅಥವಾ ಸಭ್ಯವಾಗಿ ಕಾಣಿಸಿಕೊಂಡಾಗ ಹಲವರ ವರ್ತನೆಗಳು ಬದಲಾಗುತ್ತದೆ. ನಾನು ಕೂದಲಿಗೆ ಎಣ್ಣೆ ಹಚ್ಚಿ, ಕುರ್ತಾದಲ್ಲಿ ಕಾಣಿಸಿಕೊಂಡರೆ ಯಾವುದೇ ಸಮಸ್ಯೆ ಇಲ್ಲ. ಯಾವಾಗ ನಾನು ಹೆಚ್ಚು ಆದಾಯಗಳಿಸುವ ವ್ಯಕ್ತಿಯಂತೆ ಕಾಣಿಸುತ್ತೇನೆ, ಅವಾಗ ಸಮಸ್ಯೆಗಳು ಶುರುವಾಗುತ್ತಿದೆ ಎಂದು ಈತ ರೆಡ್ಡಿಟ್ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.
ಆತ್ಮಹೀನವಾಗುತ್ತಿದೆಯಾ ಬೆಂಗಳೂರು?
ನನಗೆ ಮಾತ್ರವಲ್ಲ, ಹಲವು ಗೆಳೆಯರಿಗೂ ಇದೇ ಅನುಭವ. ನಾವು ಕನ್ನಡದಲ್ಲಿ ಪ್ರತಿಕ್ರಿಯಿಸಿದ ತಕ್ಷಣ ದುರುಗುಟ್ಟುತ್ತಿದ್ದವರು ಅಥವಾ ಒರಟಾಗಿ ಮಾತನಾಡುವವರು ಮೃಧುವಾಗುತ್ತಾರೆ. ಮಾತುಗಳು ಸರಳವಾಗುತ್ತದೆ. ನಗರ ಬೆಳೆದಿದೆ. ಇದರಿಂದ ಕೆಲವರು ಅಸಮಾಧಾನಗೊಂಡಿದ್ದಾರೆ. ಈ ಅಸಮಾಧಾನ, ಸಿಟ್ಟನ್ನು ಆರ್ಥಿಕವಾಗಿ ಉತ್ತಮರಂತೆ ಕಾಣಿಸಿಕೊಳ್ಳುವ ಕನ್ನಡಿಗರ ಮೇಲೆ ತೋರಿಸುತ್ತಿದ್ದಾರೆ ಎಂದು ಈತ ಹೇಳಿಕೊಂಡಿದ್ದಾನೆ.ಬೆಂಗಳೂರಿನಲ್ಲಿ ಅಸುರಕ್ಷಿತ ಹೆಚ್ಚಾಗುತ್ತಿದೆ. ಬೆಂಗಳೂರು ಆತ್ಮಹೀನವಾಗುತ್ತಿದೆ ಎಂದ ಎನಿಸುತ್ತಿದೆ ಎಂದಿದ್ದಾರೆ.
ಕನ್ನಡಿಗರು ಎಷ್ಟು ಪ್ರೀತಿಯಿಂದ ಜನರನ್ನು ಸ್ವಾಗತಿಸುತ್ತಾರೆ, ಎಷ್ಟು ಭಿನ್ನವಾಗಿದ್ದಾರೆ ಎಂಬುದು ತಿಳಿದುಕೊಳ್ಳಲು ವಿಮಾನ ನಿಲ್ದಾಣಕ್ಕೆ ತೆರಳಿ. ನೀವು ಬೆಂಗಳೂರಿನಿಂದ ಬೇರೆಗೆಡೆ ತೆರಳುವವರೇ ಆಗಿರಲಿ, ಬೆಂಗಳೂರಿಗೆ ಆಗಮಿಸುವವರೇ ಆಗಿರಲಿ, ಪ್ರೀತಿಯಿಂದ ಸ್ವಾಗತಿಸುತ್ತಾರೆ. ಸಿಬ್ಬಂದಿಗಳು ವಿನಯದಿಂದ ವರ್ತಿಸುತ್ತಾರೆ. ಇವರು ಇದೇ ನಗರದವರೇ ಎಂದು ಅಚ್ಚರಿಯಾಗುತ್ತದೆ ಎಂದು ರೆಡ್ಡಿಟ್ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.