ವಿಮಾನದಲ್ಲಿ ಬಂದು ಕಳ್ಳತನ ಮಾಡಿ ಫ್ಲೈಟ್‌ನಲ್ಲೇ ಎಸ್ಕೇಪ್, ಬೆಂಗಳೂರಲ್ಲಿ ಸಿಕ್ಕಿಬಿದ್ದ ಕಳ್ಳ ಅಂತಿಥವನಲ್ಲ

Published : Sep 23, 2026, 05:58 PM IST
bengaluru hitech thief

ಸಾರಾಂಶ

ಬೆಂಗಳೂರಿನ ವಿಲ್ಸನ್ ಗಾರ್ಡನ್ ಪೊಲೀಸರು ವಿಮಾನದಲ್ಲಿ ಬಂದು ಒಂಟಿ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಹೈದರಾಬಾದ್ ಮೂಲದ ಹೈಟೆಕ್ ಕಳ್ಳ ವಿನೋದ್‌ನನ್ನು ಬಂಧಿಸಿದ್ದಾರೆ. ವಿಚಿತ್ರ ಕಳ್ಳನ ಸ್ಟೋರಿ ತುಂಬಾನೇ ಇಂಟರೆಸ್ಟಿಂಗ್ ಆಗಿದೆ.

ಬೆಂಗಳೂರು: ನಗರದ ವಿಲ್ಸನ್ ಗಾರ್ಡನ್ ಪೊಲೀಸರು ಹೈಟೆಕ್ ಕಳ್ಳನೊಬ್ಬನನ್ನು ಬಂಧಿಸಿದ್ದಾರೆ. ಬಂಧನದ ಬಳಿಕ ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ತನಿಖೆಯಲ್ಲಿ ಆಘಾತಕಾರಿ ವಿಷಯ ತಿಳಿದು ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ವಿನೋದ್ ಬಂಧಿತ ಆರೋಪಿ.

ಹೈದರಾಬಾದ್ ಮೂಲದ ವಿನೋದ್, ಬೆಂಗಳೂರಿನ ಒಂಟಿ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಈತ ತುಂಬಾ ಚಾಲಕಿಯಾಗಿದ್ದಾನೆ. ವಿಮಾನದ ಮೂಲಕ ಬಂದಿಳಿಯುವ ಕಿಲಾಡಿ, ನೇರವಾಗಿ ಒಂಟಿ ಮನೆ, ಬೀಗ ಹಾಕಿರುವ ಮನೆ ಹಾಗೂ ಹೆಚ್ಚು ಜನರು ಓಡಾಡ ಮನೆಗಳನ್ನ ಮೊದಲಿಗೆ ಗುರುತು ಮಾಡುತ್ತಿದ್ದ. ನಂತರ ಹೇಗೆ ಕಳ್ಳತನ ಮಾಡಬಹುದು ಅಂತಾ ಪ್ಲಾನ್ ಮಾಡಿ, ತನ್ನ ಯೋಜನೆ ಪ್ರಕಾರವೇ ಚಿನ್ನ, ಹಣವನ್ನು ದೋಚಿ ಮತ್ತೆ ವಿಮಾನದಲ್ಲೇ ಪರಾರಿ ಆಗುತ್ತಿದ್ದ.

ಸಿಕ್ಕಿ ಬಿದ್ದಿದ್ದು ಹೇಗೆ?

ಅದೇ ರೀತಿ ವಿಲ್ಸನ್ ಗಾರ್ಡನ್ ಏರಿಯಾದ ಒಂದು ಮನೆಯನ್ನು ಗುರುತಿಸಿಕೊಂಡು ಏಕಾಏಕಿ ನುಗ್ಗಿದ್ದ. ಬಾಗಿಲು ಹಾಕಿದ್ದ ಮನೆಯ ಬೀಗ ಒಡೆದು ಹಣ ಮತ್ತು ಚಿನ್ನಾಭರಣವನ್ನು ದೋಚಿದ್ದ ಮನೆಯಲ್ಲಿದ್ದ 270 ಗ್ರಾಂ ಚಿನ್ನಾಭರಣ ಹಾಗೂ 300 ಅಮೆರಿಕನ್ ಡಾಲರ್ ಮೌಲ್ಯದ ವಿದೇಶಿ ಕರೆನ್ಸಿಯನ್ನ ಎತ್ಕೊಂಡು ವಿಮಾನದ ಮೂಲಕವೇ ಹೈದರಾಬಾದ್‌ಗೆ ಪರಾರಿ ಆಗಿದ್ದ. ಇತ್ತ ಮನೆಯ ಮಾಲೀಕರು ಕಳ್ಳತನ ಆಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿ ಕಳ್ಳನಿಗಾಗಿ ಬಲೆ ಬೀಸಿದ್ದರು. ಸಿಸಿಟಿವಿ ದೃಶ್ಯಾವಳಿ ಹಾಗೂ ಕೆಲವು ತಾಂತ್ರಿಕ ಸಾಕ್ಷ್ಯಗಳನ್ನ ಇಟ್ಕೊಂಡು ಆರೀಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಚಾರಣೆ ವೇಳೆ ಏನಂದ್ರು?

ಕದ್ದ ಮಾಲುಗಳನ್ನ ದೆಹಲಿಗೆ ತೆಗೆದುಕೊಂಡು ಹೋಗಿದ್ದೆ. ದೆಹಲಿಯಲ್ಲಿ ವಿದೇಶಿ ಕರೆನ್ಸಿಯನ್ನು ಭಾರತೀಯ ಕರೆನ್ಸಿಗೆ ಪರಿವರ್ತನೆ ಮಾಡಿಕೊಂಡೆ. ಚಿನ್ನಾಭರಣವನ್ನು ಮಾರಿ ಹಣ ಪಡೆದಿರುವ ಬಗ್ಗೆ ಬಾಯಿಬಿಟ್ಟಿದ್ದಾನೆ. ಇನ್ನಷ್ಟು ತೀವ್ರ ವಿಚಾರಣೆ ನಡೆಸಿದಾಗ ಬಂಧಿತ ಆರೋಪಿ ವಿನೋದ್ ವೃತ್ತಿಪರ ಕಳ್ಳ ಅನ್ನೋದು ಸಾಬೀತಾಗಿದೆ. ಈ ಹಿಂದೆ ವಿವಿಧ ರಾಜ್ಯ ಹಾಗೂ ನಗರಗಳಲ್ಲಿ ಬರೋಬ್ಬರಿ 30ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.

ಸದ್ಯ ಪೊಲೀಸರು ಈತನಿಂದ ಬರೋಬ್ಬರಿ 42 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಉಳಿದಿದ್ದ 30 ವಿದೇಶಿ ಡಾಲರ್ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಹೈಟೆಕ್ ಕಳ್ಳನ ಬಂಧಿಸಿರುವ ಪೊಲೀಸರು ಮತ್ತಷ್ಟು ತನಿಖೆಗೆ ಒಳಪಡಿಸಲಿದ್ದಾರೆ. ವಿಮಾನದ ಮೂಲಕವೇ ಇಲ್ಲಿಗೆ ಬರುತ್ತಿದ್ದ ಕಳ್ಳನಿಗೆ, ಬೆಂಗಳೂರಿನಲ್ಲಿ ಯಾರಾದರೂ ಸಹಾಯ ಮಾಡುತ್ತಿದ್ದರೇ? ಈತನ ಹಿಂದೆ ಬೇರೆ ಯಾರ ಕೈವಾಡ ಇದೆಯೇ ಎಂದು ತಿಳಿಯಲು ಮುಂದಾಗಿದ್ದಾರೆ.

ಬಸದ್ಯ ಹಬ್ಬ ಸೀಸನ್‌ ಬರುತ್ತಿದೆ. ಅನೇಕ ಮಂದಿ ಹಬ್ಬಕ್ಕಾಗಿ ತಮ್ಮ ಊರುಗಳಿಗೆ ಪ್ರಯಾಣ ಬೆಳೆಸುತ್ತಾರೆ. ಇಂಥ ಕಳ್ಳರು ಬೆಂಗಳೂರಿನಂತ ಮಹಾನಗರಗಳಲ್ಲಿ ಸಾಮಾನ್ಯ. ನೀವು ತುಂಬಾ ದಿನಗಳ ಕಾಲ ಮನೆಗೆ ಹೋಗುವ ಮುನ್ನ ಸರಿಯಾಗಿ ಮನೆಯ ಬಾಗಿಲನ್ನು ಲಾಕ್ ಮಾಡಿ ಎಚ್ಚರಿಕೆಯಿಂದ ಹೋಗಿ. ಒಮ್ಮೆ ಕಳ್ಳತನವಾದ್ರೆ ಆ ವಸ್ತು ಮತ್ತೆ ಸಿಕ್ಕೇ ಬಿಡುತ್ತೇ, ಕಳ್ಳರು ಸಿಗುತ್ತಾರೆ ಅನ್ನೋದನ್ನು ಹೇಳೋಕೆ ಆಗಲ್ಲ.

PREV
Read more Articles on
click me!

Recommended Stories

ಪರಪ್ಪನ ಅಗ್ರಹಾರದಲ್ಲಿ ನಡುಗಿದ ದಾಸ, ಪ್ರದೂಷ್‌ ಮಾಫಿ ಸಾಕ್ಷಿ ಪ್ರಶ್ನಿಸಿ ದರ್ಶನ್‌ ಸಲ್ಲಿಸಿದ್ದ ಅರ್ಜಿ ವಜಾ
"UP, ಬಿಹಾರದ ಪುರುಷರಿಗೆ 'ನೋ ಎಂಟ್ರಿ': ಬೆಂಗಳೂರು ಸಿಇಒ ತಗೆದುಕೊಂಡ ಈ ವಿಚಿತ್ರ ನಿರ್ಧಾರಕ್ಕೆ ಅಸಲಿ ಕಾರಣವೇನು?"