ಚಿನ್ನ ಕೊಳ್ಳೋರಿಗೆ ಶುಭ ಶುಕ್ರವಾರ, ಸತತ ಎರಡನೇ ದಿನವೂ ಪಾತಾಳಕ್ಕೆ ಕುಸಿದ ಬಂಗಾರದ ಬೆಲೆ; ಇಂದು ಒಂದೇ ದಿನ ₹ 5,120 ಇಳಿಕೆ..!

Published : Nov 20, 2026, 12:08 PM IST
Gold Rate Today

ಸಾರಾಂಶ

ಬೆಂಗಳೂರಿನಲ್ಲಿ ಸತತ ಎರಡನೇ ದಿನವೂ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. 24 ಕ್ಯಾರಟ್ ಚಿನ್ನ 10 ಗ್ರಾಂಗೆ 5,120 ರೂ. ಹಾಗೂ 22 ಕ್ಯಾರಟ್ ಚಿನ್ನ 4,700 ರೂ. ಕುಸಿದಿದೆ. ಬೆಳ್ಳಿ ಬೆಲೆಯಲ್ಲೂ ಕೆಜಿಗೆ 5,000 ರೂ. ಇಳಿಕೆ ಕಂಡುಬಂದಿದೆ.

ಬೆಂಗಳೂರು(ನ.20): ಚಿನ್ನದ ಬೆಲೆ ಸತತ ಎರಡನೇ ದಿನವೂ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಆಭರಣ ಖರೀದಿಗೆ ಎದುರು ನೋಡುತ್ತಿರುವವರಿಗೆ ಕೊಂಚ ಸಮಾಧಾನ ತಂದಿದೆ. ನವೆಂಬರ್ 20ರ ಶುಕ್ರವಾರ 24 ಕ್ಯಾರಟ್ ಹಾಗೂ 22 ಕ್ಯಾರಟ್ ಚಿನ್ನದ ದರದಲ್ಲಿ ದೊಡ್ಡ ಮಟ್ಟದ ಕುಸಿತ ದಾಖಲಾಗಿದೆ. ಚಿನ್ನದ ಜೊತೆಗೆ ಬೆಳ್ಳಿ ಬೆಲೆಯೂ ಇಳಿಕೆಯಾಗಿದ್ದು, ಗ್ರಾಹಕರ ಗಮನ ಸೆಳೆದಿದೆ.

ಗುಡ್‌ರಿಟರ್ನ್ಸ್‌ನಲ್ಲಿ ಪ್ರಕಟಿಸಿರುವ ಬೆಂಗಳೂರಿನ ಚಿನ್ನದ ದರದ ಪ್ರಕಾರ, ನವೆಂಬರ್ 19ರಂದು ಒಂದು ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ 257 ರೂಪಾಯಿ ಇಳಿಕೆಯಾಗಿತ್ತು. ಇದೀಗ ನವೆಂಬರ್ 20ರಂದು ಮತ್ತೆ ಒಂದು ಗ್ರಾಂಗೆ 512 ರೂಪಾಯಿ ಕುಸಿತ ಕಂಡಿದೆ. ಹೀಗಾಗಿ 24 ಕ್ಯಾರಟ್ ಚಿನ್ನದ ಒಂದು ಗ್ರಾಂ ಬೆಲೆ 12,557 ರೂಪಾಯಿಗೆ ತಲುಪಿದೆ. 10 ಗ್ರಾಂ ಚಿನ್ನದ ಬೆಲೆಯಲ್ಲಿ ಒಂದೇ ದಿನ 5,120 ರೂಪಾಯಿ ಇಳಿಕೆಯಾಗಿದ್ದು, ಪ್ರಸ್ತುತ 10 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ 1,25,570 ರೂಪಾಯಿಯಾಗಿದೆ.

22 ಕ್ಯಾರಟ್ ಚಿನ್ನದ ಬೆಲೆಯಲ್ಲೂ ಭಾರೀ ಇಳಿಕೆ

ಆಭರಣ ತಯಾರಿಕೆಗೆ ಸಾಮಾನ್ಯವಾಗಿ ಬಳಸುವ 22 ಕ್ಯಾರಟ್ ಚಿನ್ನದ ಬೆಲೆಯೂ ಗಣನೀಯವಾಗಿ ಕುಸಿದಿದೆ. ನವೆಂಬರ್ 19ರಂದು ಒಂದು ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ 235 ರೂಪಾಯಿ ಇಳಿಕೆಯಾಗಿತ್ತು. ನವೆಂಬರ್ 20ರಂದು ಮತ್ತೆ 470 ರೂಪಾಯಿ ಕಡಿಮೆಯಾಗಿದೆ. ಈ ಮೂಲಕ ಒಂದು ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 11,510 ರೂಪಾಯಿಗೆ ಇಳಿದಿದೆ. 10 ಗ್ರಾಂಗೆ ಲೆಕ್ಕ ಹಾಕಿದರೆ 4,700 ರೂಪಾಯಿ ಇಳಿಕೆಯಾಗಿದ್ದು, ಪ್ರಸ್ತುತ ದರ 1,15,100 ರೂಪಾಯಿಯಾಗಿದೆ.

ಕಳೆದ ಎರಡು ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಸತತ ಇಳಿಕೆ ಕಂಡುಬಂದಿರುವುದು ಗಮನಾರ್ಹ. ನವೆಂಬರ್ 19ರಂದು 24 ಕ್ಯಾರಟ್ ಚಿನ್ನದ ಒಂದು ಗ್ರಾಂ ಬೆಲೆ 13,069 ರೂಪಾಯಿ ಹಾಗೂ 22 ಕ್ಯಾರಟ್ ಚಿನ್ನದ ಬೆಲೆ 11,980 ರೂಪಾಯಿ ಇತ್ತು. ಇದೀಗ ಎರಡೂ ವಿಭಾಗಗಳ ದರದಲ್ಲಿ ಮತ್ತಷ್ಟು ಕುಸಿತ ದಾಖಲಾಗಿದೆ.

ಬೆಳ್ಳಿ ಬೆಲೆಯಲ್ಲೂ ₹5,000 ಇಳಿಕೆ

ಚಿನ್ನದ ಬೆಲೆ ಮಾತ್ರವಲ್ಲದೆ ಬೆಳ್ಳಿ ದರವೂ ಇಳಿಕೆಯಾಗಿದೆ. ನವೆಂಬರ್ 20ರಂದು ಒಂದು ಕೆಜಿ ಬೆಳ್ಳಿ ಬೆಲೆಯಲ್ಲಿ 5,000 ರೂಪಾಯಿ ಕಡಿಮೆಯಾಗಿದ್ದು, ಪ್ರಸ್ತುತ ಒಂದು ಕೆಜಿ ಬೆಳ್ಳಿಯ ಬೆಲೆ 1,75,000 ರೂಪಾಯಿಯಾಗಿದೆ. ಚಿನ್ನ ಮತ್ತು ಬೆಳ್ಳಿ ಎರಡರ ಬೆಲೆಯಲ್ಲೂ ಒಂದೇ ದಿನ ಇಳಿಕೆ ಕಂಡುಬಂದಿರುವುದು ಗ್ರಾಹಕರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ

ಚಿನ್ನ ಖರೀದಿಸಲು ಯೋಜಿಸುತ್ತಿರುವವರು ಖರೀದಿಗೂ ಮುನ್ನ ಸ್ಥಳೀಯ ಆಭರಣ ಮಳಿಗೆಗಳಲ್ಲಿ ಅಂದಿನ ದರವನ್ನು ಖಚಿತಪಡಿಸಿಕೊಳ್ಳುವುದು ಉತ್ತಮ. ಪ್ರಕಟಿಸಿರುವ ದರಗಳು ಸೂಚಕ ದರಗಳಾಗಿದ್ದು, ಜಿಎಸ್‌ಟಿ, ಟಿಸಿಎಸ್, ಮೇಕಿಂಗ್ ಚಾರ್ಜ್ ಹಾಗೂ ಇತರ ಶುಲ್ಕಗಳು ಇದರಲ್ಲಿ ಸೇರಿರುವುದಿಲ್ಲ. ಆಭರಣದ ಅಂತಿಮ ಬೆಲೆ ಈ ಶುಲ್ಕಗಳ ಆಧಾರದ ಮೇಲೆ ಬದಲಾಗಬಹುದು.

ಬೆಂಗಳೂರಿನ ಚಿನ್ನದ ದರ – ನವೆಂಬರ್ 20, 2026

ಕ್ರಮಸಂಖ್ಯೆಚಿನ್ನದ ವಿಧಒಂದು ಗ್ರಾಂ ಬೆಲೆಇಂದಿನ ಇಳಿಕೆ10 ಗ್ರಾಂ ಬೆಲೆ
124 ಕ್ಯಾರಟ್₹12,557₹512₹1,25,570
222 ಕ್ಯಾರಟ್₹11,510₹470₹1,15,100
318 ಕ್ಯಾರಟ್₹9,418₹384₹94,180

PREV
Read more Articles on
click me!

Recommended Stories

ಸಾರಿಗೆ ಮತ್ತು ವಸತಿ ಕ್ಷೇತ್ರಕ್ಕೆ ಭರ್ಜರಿ ಅನುದಾನ: 2,000 ಇವಿ ಬಸ್, ₹21,900 ಕೋಟಿ ಕಾಮಗಾರಿಗಳಿಗೆ ಸಂಪುಟ ಅಸ್ತು!
ಕಾವೇರಿ ನದಿ ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಬಿಗ್ ರಿಲೀಫ್, ತಮಿಳನಾಡು 2 ಅರ್ಜಿ ತಿರಸ್ಕರಿಸಿದ ಸುಪ್ರೀಂ