
ಬೆಂಗಳೂರು: ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಸಂದಿಗ್ಧ ವಾತಾವರಣ ಸೃಷ್ಟಿಸಿರುವ ಸ್ಟಿಂಗ್ ಆಪರೇಷನ್ ಹಗರಣ ಕುರಿತಂತೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ಪೋಟಕ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಸ್ಟುಡಿಯೋದಲ್ಲಿ ಸಿಎಂ ಅವರು ಸ್ಟಿಂಗ್ ಆಪರೇಷನ್ ಕುರಿತಂತೆ ಮಾತನಾಡಿದ್ದು, ತಮ್ಮ ವಿರುದ್ಧವೇ ಸ್ಟಿಂಗ್ ಮಾಡುವ ಪ್ರಯತ್ನ ಮಾಡಿರುವ ವಿಚಾರವನ್ನು ವಿವರಿಸಿದ್ದಾರೆ.
ಕ್ಯಾಬಿನೆಟ್ ಸಭೆಯಲ್ಲಿ ತಮ್ಮ ಸರ್ಕಾರ ಸಚಿವರಿಗೆ ಸ್ಟಿಂಗ್ ಕುರಿತಂತೆ ಸಿಎಂ ಎಚ್ಚರಿಕೆ ನೀಡಿದ್ದರು. ಈ ವಿಚಾರ ರಾಜ್ಯ ರಾಜಕಾರಣದಲ್ಲಿ ಸಂಚಲನ ಉಂಟು ಮಾಡಿತ್ತು. ಆದರೆ ಈ ರೀತಿ ಕ್ಯಾಬಿನೆಟ್ ಸಭೆಯಲ್ಲಿ ಸಚಿವರಿಗೆ ಎಚ್ಚರಿಕೆ ನೀಡಲು ಕಾರಣವಾದ ಘಟನೆಯ ಬಗ್ಗೆ ಡಿಕೆ ಶಿವಕುಮಾರ್ ಅವರು, ಸುವರ್ಣ ನ್ಯೂಸ್ ನಲ್ಲಿ ಇಡೀ ಸ್ಟಿಂಗ್ ಪ್ರಯತ್ನವನ್ನ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಹೌದು, ಉದ್ಯಮಿ ಟ್ರ್ಯಾಪ್ ಮಾಡಲು ಬಂದಿದ್ದನ್ನ ಸ್ವತಃ ಡಿಕೆ ಶಿವಕುಮಾರ್ ಅವರೇ ಪತ್ತೆ ಹಚ್ಚಿದ್ದರಂತೆ. ಆತ ಮೆಟಾ ಎಐ ಕ್ಯಾಮೆರಾ ಹಾಕಿಕೊಂಡು ಬಂದಿದ್ದನ್ನು ಗಮನಿಸಿದ್ದ ಸಿಎಂ ಅವರು, ಕೂಡಲೇ ಅಧಿಕಾರಿಗಳಿಗೆ ಆತನ ಹಿನ್ನೆಲೆ ಬಗ್ಗೆ ಮಾಹಿತಿ ಕಲೆಹಾಕಲು ಸೂಚನೆ ನೀಡಿದ್ದರಂತೆ. ಈ ಸಂದರ್ಭದಲ್ಲಿ ಆತ ಸ್ಟಿಂಗ್ ಮಾಡಲು ಬಂದಿದ್ದು ಖಚಿತವಾಗಿತ್ತಂತೆ.
ಆತ ಹಾಕಿದ ಕನ್ನಡ ನೋಡಿದ ಬಳಿಕ ನನಗೆ ಡೌಟ್ ಬಂತು. ಆಗ ಈತನ ಇತಿಹಾಸ ಬಗ್ಗೆ ರಿಪೋಟ್ ನೀಡಲು ಸೂಚನೆ ನೀಡಿದ್ದೆ. ನನ್ನ ಬಳಿ ಬಂದ ಸಂದರ್ಭದಲ್ಲಿ ಮೊದಲು ಒಂದು ಕನ್ನಡ ಹಾಕಿದ್ದ. ಸತೀಶ್ ಅವರ ಬಳಿ ಹೋದ ಸಂದರ್ಭದಲ್ಲಿ ಒಂದು ಕನ್ನಡ ಹಾಕಿದ್ದ. ಚಂದ್ರಬಾಬು ನಾಯ್ಡು ಅವರ ಬಳಿ ಹೋದ ಸಂದರ್ಭದಲ್ಲಿ ಯಾವುದೇ ಕನ್ನಡಕ ಹಾಕಿರಲಿಲ್ಲ. ಐಟಿ ಸಚಿವರು ಹಾಗೂ ಕೇಂದ್ರ ಸಚಿವರ ಭೇಟಿಯ ಸಂದರ್ಭದಲ್ಲೂ ಆತ ಯಾವುದೇ ಕನ್ನಡ ಹಾಕಿರಲಿಲ್ಲ. ಆದರೆ ನನ್ನ ಬಳಿ ಹಾಗೂ ಸತೀಶ್ ಅವರ ಬಳಿ ಬಂದ ಸಂದರ್ಭದಲ್ಲಿ ಮಾತ್ರ ಮೆಟಾ ಎಐ ಕನ್ನಡಕ ಧರಿಸಿದ್ದ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಈ ಘಟನೆಯನ್ನು ಇಟ್ಟುಕೊಂಡೆ ಕ್ಯಾಬಿನೆಟ್ ನಲ್ಲಿ ಸಚಿವರಿಗೆ ಸಿಎಂ ಎಚ್ಚರಿಕೆ ನೀಡಿದ್ದರಂತೆ.