
ಅಕ್ಟೋಬರ್ 19 ರಂದು, ವಿಶಾಖಪಟ್ಟಣಂನಿಂದ ಬೆಂಗಳೂರಿಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ IX2065 ಗೆ ಹಕ್ಕಿ ಡಿಕ್ಕಿ ಹೊಡೆದ ಘಟನೆ ಸಂಭವಿಸಿದೆ. ಈ ನಿಟ್ಟಿನಲ್ಲ ವಿಮಾನದಲ್ಲಿದ್ದ 148 ಜನ ಸಹ ನಿಟ್ಟುಸಿರು ಬಿಟ್ಟಿದ್ದಾರೆ. ಅಷ್ಟಕ್ಕೂ ಮುಂದೆನಾಯ್ತು? ಜನ ಸುರಕ್ಷಿತರಾಗಿದ್ದಾರಾ? ಈ ಕುರಿತು ಸಂಪೂರ್ಣ ಇನ್‌ಸೈಡ್ ಸ್ಟೋರಿ ಇಲ್ಲಿದೆ.
ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದ ತಕ್ಷಣ, ಸಿಬ್ಬಂದಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತ ಇಳಿಯುವಿಕೆಗೆ ಸಿದ್ಧತೆ ನಡೆಸಿ ಪ್ರಯಾಣಿಕರಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ವಿಮಾನದಲ್ಲಿದ್ದ ಎಲ್ಲರೂ ಕ್ಷಣಕಾಲ ಉಸಿರುಗಟ್ಟಿದರು. ವರದಿಗಳ ಪ್ರಕಾರ, ವಿಮಾನದಲ್ಲಿ 148 ಪ್ರಯಾಣಿಕರಿದ್ದರು. ಘಟನೆಯಲ್ಲಿ ಯಾವುದೇ ಪ್ರಯಾಣಿಕರು ಅಥವಾ ಸಿಬ್ಬಂದಿ ಗಾಯಗೊಂಡಿಲ್ಲ, ಆದರೂ ವಿಮಾನ ಸುರಕ್ಷಿತವಾಗಿ ಇಳಿಯುವವರೆಗೂ ಎಲ್ಲರೂ ಉಸಿರು ಬಿಗಿಹಿಡಿದು ನಿಂತಿದ್ದರು.
ಸುಮಾರು 148 ಜನರಿದ್ದ ವಿಮಾನ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಐಎಕ್ಷ್2065ಗೆ ಹಕ್ಕಿ ಡಿಕ್ಕಿ ಹೊಡೆದಿದೆ. ಅಲ್ಲದೇ ತಬ್ಬಿಬ್ಬಾದ ಜನರಿಗೆ ಸಿಬ್ಬಂದಿ ಎಲ್ಲ ಸುರಕ್ಷತಾ ವಿಧಾನದ ಭಾಗವಾಗಿ ಎಲ್ಲರನ್ನು ಸುರಕ್ಷಿತವಾಗಿ ಕರೆದೊಯ್ದಿದ್ದಾರೆ. ಅಲ್ಲದೇ ತದನಂತರ ಹಠಾತ್‌ನೆ ವಿಮಾನವನ್ನು ಪಾರ್ಕಿಂಗ್ ಲಾಟ್‌ಗೆ ತೆಗೆದುಕೊಂಡು ಹೋಗಿದ್ದಾರೆ. ಅಲ್ಲದೇ ಎಲ್ಲ ಸುರಕ್ಷಾ ವಿಧಾನದ ಭಾಗವಾಗಿ ಅದನ್ನು ಪರಿಶೀಲನೇ ಮಾಡಿದ್ದಾರೆ.
ಹೀಗಾದ ಮೇಲೆ ಯಾರೂ ತಾಣೆ ಭಯ ಬೀಳುವುದಿಲ್ಲ, ಈ ನಿಟ್ಟಿನಲ್ಲಿ ವಿಮಾನದಲ್ಲಿದ್ದ ನೂರಾರು ಜನರು ಉಸಿರು ಬಿಗಿ ಹಿಡಿದಿಟ್ಟುಕೊಂಡ ಸ್ಥಿತಿ ನಿರ್ಮಾಣವಾಗಿದ್ದು ಅಲ್ಲಿ ಕಂಡುಬಂದಿದೆ. ಅಷ್ಟೋತ್ತಿಗೆ ಹಕ್ಕಿ ಡಿಕ್ಕಿ ಹೊಡೆದ ಮಾಹಿತಿ ಹೇಳಿ, ಎಲ್ಲರ ಇಳಿಯುವಿಕೆಗೆ ಸುರಕ್ಷಿತ ಸಿದ್ಧತೆಯನ್ನು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ನಡೆಸಲಾಗಿತ್ತು ಎಂಬ ಮಾಹಿತಿಯನ್ನು ಮೂಲಗಳು ತಿಳಿಸಿವೆ. ಅದರಂತೆ ಜನ ಸುರಕ್ಷಿತವಾಗಿ ಇಳಿದಿದ್ದಾರೆ.
ಜನ ಇಳಿದ ನಂತರ, ವಿಮಾನವನ್ನು ಪಾರ್ಕಿಂಗ್ ಸ್ಟ್ಯಾಂಡ್‌ಗೆ ಕರೆದೊಯ್ಯಲಾಯಿತು, ಅಲ್ಲಿ ಸುರಕ್ಷತಾ ಕಾರ್ಯವಿಧಾನಗಳ ಭಾಗವಾಗಿ, ನೆಲದ ಎಂಜಿನಿಯರ್‌ಗಳು ಮತ್ತು ತಾಂತ್ರಿಕ ತಂಡಗಳು ವಿಮಾನದ ರಚನೆ ಮತ್ತು ಎಂಜಿನ್‌ಗಳನ್ನು ಸಂಭವನೀಯ ಹಾನಿಗಾಗಿ ಪರಿಶೀಲಿಸಲು ಪ್ರಾರಂಭಿಸಿದರು. ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದ ತಕ್ಷಣವೇ ಕಾರ್ಯಪ್ರವೃತ್ತರಾದ ವಿಮಾನದ ಸಿಬ್ಬಂದಿ ವರ್ಗದ ಸಮಯಪ್ರಜ್ಞೆ ಮತ್ತು ನಿಯಂತ್ರಣವು ಒಂದು ಸಂಭಾವ್ಯ ದೊಡ್ಡ ದುರಂತವನ್ನು ತಪ್ಪಿಸಿದೆ.
ಇಂತಹ ತುರ್ತು ಸಂದರ್ಭಗಳಲ್ಲಿ ತಲ್ಲಣಗೊಳ್ಳದೆ ಪ್ರಯಾಣಿಕರಿಗೆ ಧೈರ್ಯ ತುಂಬಿ, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ವಿಮಾನವನ್ನು ಇಳಿಸುವ ಮೂಲಕ ಸಿಬ್ಬಂದಿ ತಮ್ಮ ವೃತ್ತಿಪರತೆಯನ್ನು ಮೆರೆದಿದ್ದಾರೆ. ವಿಮಾನ ಯಶಸ್ವಿಯಾಗಿ ಇಳಿದ ಮೇಲೂ ನಿರ್ಲಕ್ಷ್ಯ ವಹಿಸದೆ, ತಾಂತ್ರಿಕ ತಂಡಗಳು ತಕ್ಷಣವೇ ಎಂಜಿನ್ ಮತ್ತು ವಿಮಾನದ ರಚನೆಯ ಪರಿಶೀಲನೆಗೆ ಇಳಿದಿರುವುದು ವಾಯುಯಾನ ವಲಯದಲ್ಲಿ ಸುರಕ್ಷತಾ ನಿಯಮಗಳಿಗೆ ನೀಡುವ ಉನ್ನತ ಆದ್ಯತೆಯನ್ನು ತೋರಿಸುತ್ತದೆ. 148 ಪ್ರಯಾಣಿಕರ ಜೀವಕ್ಕೆ ಎದುರಾಗಿದ್ದ ಆತಂಕವು ವಿಮಾನ ಸಿಬ್ಬಂದಿಯ ದಕ್ಷತೆ ಮತ್ತು ತಾಂತ್ರಿಕ ಸನ್ನದ್ಧತೆಯಿಂದಾಗಿ ಸುಖಾಂತ್ಯ ಕಂಡಂತಾಗಿದೆ.