
ಬೆಂಗಳೂರು (ಡಿ.29) ಹೊಸ ವರ್ಷದ ಸಂಭ್ರಮಾಚರಣೆ ಶುರುವಾಗಿದೆ. ಪ್ರವಾಸಿ ತಾಣಗಳು ತುಂಬಿ ತುಳುಕುತ್ತಿದೆ. ಇದರ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡವರ ಫ್ರೂಟಿ ಸದ್ದು ಮಾಡುತ್ತಿದೆ. ಹೌದು, ಇದು ದೊಡ್ಡವರ ಫ್ರೂಟಿ. ಓಲ್ಡ್ ಮಾಂಕ್ ರಮ್ ಮದ್ಯದ ಹೊಸ ಪ್ಯಾಕಿಂಗ್‌ಗೆ ಪಾನಪ್ರಿಯರು ಮನಸೋತಿದ್ದಾರೆ. ಫ್ರೂಟಿ ರೀತಿಯಲ್ಲಿ ಜ್ಯೂಸ್ ಪ್ಯಾಕೆಟ್‌ನಲ್ಲಿ ಒಲ್ಡ್ ಮಾಂಕ್ ಲಭ್ಯವಿದೆ. ಫ್ರೂಟಿ ರೀತಿಯಲ್ಲಿ ಸ್ಟ್ರಾ ಬಳಸಿ ಇದನ್ನು ಕುಡಿಯುವುದು ಮಾತ್ರ ಬಾಕಿ ಎಂದು ಹಲವರು ಕಮೆಂಟ್ ಮೂಲಕ ಹೇಳಿದ್ದಾರೆ. ಬೆಂಗಳೂರಿನ ಮದ್ಯ ಔಟ್‌ಲೆಟ್‌ನಲ್ಲಿ ಮದ್ಯ ಖರೀದಿಸಿದ ಗ್ರಾಹಕರ ಹೊಸ ರಮ್ ಪ್ಯಾಕೆಟ್ ನೋಡಿ ಮನಸೋತಿದ್ದಾರೆ.
ಫ್ರೂಟಿ ಜ್ಯೂಸ್ ಪ್ಯಾಕೆಟ್ ಬಹುತೇಕರು ಗಮನಿಸಿರುತ್ತಾರೆ. ಈ ಪ್ಯಾಕೆಟ್ ಮೇಲಿನ ಭಾಗದಲ್ಲಿ ಸ್ಟ್ರಾ ಬಳಸಿ ಜ್ಯೂಸ್ ಕುಡಿಯುವ ಹಾಗೆ ಪ್ಯಾಕೆಟ್ ತಯಾರಿಸಿರುತ್ತಾರೆ. ಇದೀಗ ಮೊದಲ ನೋಟಕ್ಕೆ ಓಲ್ಡ್ ಮಾಂಕ್ ಟೆಟ್ರಾ ಬ್ಯಾಕ್ ಫ್ರೂಟಿ ಜ್ಯೂಸ್ ಪ್ಯಾಕೆಟ್ ರೀತಿಯಲ್ಲೇ ಇದೆ. ಕೇವಲ ಬಣ್ಣ ಹಾಗೂ ಚಿತ್ರದ ಮೂಲಕ ಮಧ್ಯಪ್ರಿಯರು ಇದು ಓಲ್ಡ್ ಮಾಂಕ್ ಎಂದು ಪತ್ತೆ ಹಚ್ಚುತ್ತಾರೆ. ಆದರೆ ಓಲ್ಡ್ ಮಾಂಕ್ ಬಿಟ್ಟು ಕೆಲ ತಿಂಗಳುಗಳಾಗಿದ್ದರೆ, ಗುರತೇ ಸಿಗದಷ್ಟು ಓಲ್ಡ್ ಮಾಂಕ್ ಪ್ಯಾಕೆಟ್ ಬದಲಾಗಿದೆ.
ಗ್ರಾಹಕನೊಬ್ಬ ಮದ್ಯ ಔಟ್‌ಲೆಟ್‌ನಲ್ಲಿ ಓಲ್ಡ್ ಮಾಂಕ್ ಟೆಟ್ರಾ ಪ್ಯಾಕ್ ಖರೀದಿಸಿದ್ದಾರೆ. ಬಳಿಕ ಇದರ ಹೊಸ ಶೈಲಿಯ ಪ್ಯಾಕೆಟ್‌ಗೆ ಮನಸೋತಿದ್ದಾರೆ. ಇದೇ ವೇಳೆ ವಿಡಿಯೋ ಮೂಲಕ ಕೆಲ ಮಾಹಿತಿ ನೀಡಿದ್ದಾರೆ. ಓಲ್ಡ್ ಮಾಂಕ್ ಇದೀಗ ಜ್ಯೂಸಿ ಪ್ಯಾಕೆಟ್‌ನಲ್ಲಿ ಲಭ್ಯವಿದೆ. ಜ್ಯೂಸ್ ಎಂದು ನೇರವಾಗಿ ಸ್ಟ್ರಾ ಬಳಸಿ ಕುಡಿಯಬೇಡಿ. ಸೂಚನೆ: ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ. ಈ ರೀಲ್ ಕೇವಲ ಮಾಹಿತಿಗಾಗಿ, ಜಾಗೃತಿಗಾಗಿ ಎಂದು ಗ್ರಾಹಕರ ವಿಡಿಯೋ ಮೂಲಕ ಹೇಳಿದ್ದಾನೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಆಗುತ್ತಿದ್ದಂತೆ ಭಾರಿ ವೈರಲ್ ಆಗಿದೆ. ಹಲವರು ಈ ವಿಡಿಯೋಗೆ ಕಮೆಂಟ್ ಮಾಡಿದ್ದಾರೆ. ಇದು ದೊಡ್ಡವರ ಫ್ರೂಟಿ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಹಲವರು ಮೊದಲ ನೋಟಕ್ಕೆ ಇದು ಜ್ಯೂಸ್ ರೀತಿಯೇ ಕಾಣುತ್ತಿದೆ ಎಂದಿದ್ದಾರೆ. ವಿಡಿಯೋಗೆ ಭರ್ಜರಿ ಕಮೆಂಟ್‌ಗಳು ವ್ಯಕ್ತವಾಗಿದೆ.
ಚಳಿಗಾಲ ಬಂತು ಎಂದರೆ ಮದ್ಯಪ್ರಿಯರು ಓಲ್ಡ್ ಮಾಂಕ್ ಮೊರೆ ಹೋಗುತ್ತಾರೆ. ಈ ಬಾರಿ ಹೊಸ ವರ್ಷ ಸಂಭ್ರಮಾಚರಣೆ ಬೆನ್ನಲ್ಲೇ ಭಾರಿ ಚಳಿ ವಾತಾವರಣ ನಿರ್ಮಾಣಗೊಂಡಿದೆ. ದೇಶದೆಲ್ಲೆಡೆ ಚಳಿ ಗಾಳಿ ಹೆಚ್ಚಾಗಿದೆ. ಇದರ ಬೆನ್ನಲ್ಲೇ ಓಲ್ಡ್ ಮಾಂಕ್ ಹೊಸ ಪ್ಯಾಕೆಟ್‌ನೊಂದಿಗೆ ಹೊಸ ಆಕರ್ಷಣೆಯೊಂದಿಗೆ ಮಾರುಕಟ್ಟೆ ತಲುಪಿದೆ.
ವಿಶೇಷ ಸೂಚನೆ: ಮದ್ಯಪಾನ ಆರೋಗ್ಯಕ್ಕೆ ಹಾನಿಕಾರ, ಮದ್ಯಪಾನದ ವ್ಯಸನಿಗಳಾಗಬೇಡಿ,