
ಬೆಂಗಳೂರಿನ ಟೌನ ಹಾಲ್‌ನಲ್ಲಿ ರಾಜ್ಯ ಉರ್ದು ಅಕಾಡೆಮಿಯಿಂದ ಉರ್ದು ಹಬ್ಬ ಹಿರಬ್ಬ ಆಯೋಜನೆ ಮಾಡಲಾಗಿತ್ತು. ಈ ವೇಳೆ ರಾಜ್ಯದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಭಾಗವಹಿಸಿ ಎಲ್ಲರಿಗೂ ಶುಭ ಕೋರಿ, ಈ ಕಾರ್ಯಕ್ರಮಕ್ಕೆ ಯಾವ ಸಿಎಂ ಕೂಡ ಬಂದಿಲ್ಲ, ನೀವು ಬಂದು ಶುಭ ಹಾರೈಸಬೇಕು ಅಂದು, ಈ ನಿಟ್ಟಿನಲ್ಲಿ ಬಹಳ ಸಂತೋಷದಿಂದ ಬಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ ಎಂದು ಸಿಎಂ ಡಿಕೆಶಿ ಹೇಳಿದ್ದಾರೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.
ಟೌನ್ ಹಾಲ್‌ನಲ್ಲಿ ನಡೆದ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಭಾಷೆ ಗಳು ಬೇರೆ ಬೇರೆ ಇರಬಹುದು, ಮಾನವೀಯತೆ, ಮಾನವ ಧರ್ಮ ಮುಖ್ಯ. ನೋವು, ಸಂತೋಷ ಎರಡರಲ್ಲೂ ಕಣ್ಣೀರು ಹಾಕುತ್ತೀವಿ. ಧರ್ಮ ಯಾವುದಾದರು ತತ್ವ ಒಂದೇ, ದೇವನೊಬ್ಬ ನಾಮ ಹಲವು. ಜಗತ್ತಿನ ಯಾವುದೇ ದೇಶಕ್ಕೆ ಹೋದ್ರು ಸಂಗೀತದ ಭಾಷೆ ಒಂದೇ. ಭಾಷೆಯನ್ನು ನಾವು ಗುರುತಿಸ್ತೀವಿ ಆದರೆ ಸಾಹಿತ್ಯ ಒಂದೇ. ಈ ನಿಟ್ಟಿನಲ್ಲಿ ಕತ್ತರಿ ಸಮಾಜವನ್ನು ಒಡೆಯುತ್ತೆ, ಸೂಜಿ ಒಂದು ಗೂಡಿಸುತ್ತೆ ನಮ್ಮ ಪಕ್ಷ , ಸರ್ಕಾರ ಯಾವುತ್ತು ಕತ್ತರಿ ಕೆಲಸ ಮಾಡಲ್ಲ ಎಂದರು.
ಶಾಲೆಗಳಲ್ಲಿ ಮಾತೃಭಾಷೆ ಅಂತಾ ಬರೆಸಿಕೊಳ್ತಾರೆ. ಭಾಷೆಗಳಲ್ಲಿ ಮಾನವೀಯತೆ, ಸಂಸ್ಕೃತಿ ಗಮನದಲ್ಲಿಟ್ಟುಕೊಳ್ಳಬೇಕು. ಉರ್ದು ಹೃದಯದ ಭಾಷೆ, ವಿಶ್ವಮಟ್ಟದ ಭಾಷೆ, ಉರ್ದುಗೆ ಗಡಿನೇ ಇಲ್ಲ. ಜ್ಞಾನ ಯಾವ ಭಾಷೆಯಲ್ಲಿ ಇರಲಿ, ಅದು ತತ್ವ, ಸಿದ್ಧಾಂತಕ್ಕೆ ಸಂಬಂಧಿಸಿದ್ದು. ಯಾವ ಭಾಷೆಯನ್ನು ಅಗೌರವದಿಂದ ಕಾಣಬಾರದು. ಎಲ್ಲಾ ಧರ್ಮದವರು ಇವತ್ತು ಉರ್ದು ಭಾಷೆ ಕಲಿತು ಮಾತಾಡ್ತಿದ್ದಾರೆ. ಉರ್ದು ಅಕಾಡೆಮಿಗೆ ಹೆಚ್ಚು ಹಣ ಒದಗಿಸ್ತೀವಿ, ಅದಕ್ಕೆ ಏನು ಬೇಕೊ ಮಾಡ್ತೀನಿ. ಮುಂದಿನ ವಾರ ಅಲ್ಪಸಂಖ್ಯಾತ ಶಾಸಕರನ್ನು ಕರೆದು ಮಾತಾಡ್ತೀನಿ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಯಾರ ಮನಸ್ಸಿಗು ನೋವು ಆಗಬಾರದು. ಸಂವಿಧಾನದ ಚೌಕಟ್ಟಿನಲ್ಲಿ ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗೊ ಕೆಲಸ ನಮ್ಮ ಸರ್ಕಾರ ಮಾಡುತ್ತೆ. ಈ ನಿಟ್ಟಿನಲ್ಲಿ ಸಮಾಜವನ್ನು ಸೂಜಿಯಿಂದ ಹೊಲೆಯುವ ಕೆಲಸ ನಾವು ಮಾಡಬೇಕು. ಸಮಾಜದ ಜನರ ಸಮಸ್ಯೆ ಬಗ್ಗೆ ನಾವೆಲ್ಲಾ ಕೂತು ಚರ್ಚೆ ಮಾಡಿ. ಸಂವಿಧಾನದ ಅಡಿಯಲ್ಲಿ ನಿಮಗೆ ಏನೇನು ಸಿಗಬೇಕು ಅದನ್ನು ಸಿಗೋತರ ಮಾಡ್ತೀವಿ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯನವರು ನಮ್ಮ ನಾಯಕರು, ಅವರತ್ರ ಅನೇಕ ವಿಚಾರ ಚರ್ಚೆ ಮಾಡಿದ್ದೇನೆ. ಎಸ್ಸಿ ಎಸ್ಟಿಗೆ ಸಂಭಂದಿಸಿದ ಕೋರ್ಟ್ ಆದೇಶ ಇದೆ. ಶಾಸಕರ ಸಭೆ ಕರೆದಿದ್ದೇವೆ. ನಂತರ ಬೇರೆ ಬೇರೆ ಸಮುದಾಯದ ಶಾಸಕರ ಸಭೆ ಕರೆಯುತ್ತೇನೆ. ಪಕ್ಷದ ವಿಚಾರ,ಸ್ಥಳೀಯ ಸಂಸ್ಥೆಗಳ ಚುನಾವಣೆ ಇದೆ. ಇದೆಲ್ಲವನ್ನ ಚರ್ಚೆ ಮಾಡಿದ್ದೇನೆ ಎಂದು ಹೇಳಿದ್ದಾರೆ.
ನಮ್ಮ ಪಕ್ಷದ ಕಮೀಟ್‌ಮೆಂಟ್ ಏನಿದೆ ಅದನ್ನ ಮಾಡ್ತೇವೆ. ಜಾತಿಗಣತಿ ಜಾರಿ ವಿಚಾರದಲ್ಲಿ ನಮ್ಮ ಪಕ್ಷದ ಸಿದ್ದತೆ ಇದೆ. ಆ ವಿಚಾರವಾಗಿ ನಮ್ಮ ಭದ್ದತೆ ಇದೆ. ನ್ಯಾಯಾಲಯದ ತಿರ್ಮಾನಗಳನ್ನ ವಾಚ್ ಮಾಡ್ತಾ ಇದ್ದೇವೆ ಎಂದಿದ್ದಾರೆ. ಈ ನಿಟ್ಟಿನಲ್ಲಿ ಸಭೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಯು ಟಿ ಖಾದರ್, ಆಹಾರ ಸಚಿವ ರಿಜ್ವಾನ್ ಅರ್ಷದ್, ಬಿಡಿಎ ಅಧ್ಯಕ್ಷ ಎನ್ ಎ ಹ್ಯಾರಿಸ್ ಸೇರಿದಂತೆ ಹಲವು ಅಲ್ಪಸಂಖ್ಯಾತ ನಾಯಕರು ಉಪಸ್ಥಿತರಿದ್ದರು.