
ಬೆಂಗಳೂರು: ಬಿಡಿಎ ವತಿಯಿಂದ ನಾಲ್ಕು ಲೇನ್ ಎಲಿವೇಟೆಡ್ ಕಾರಿಡಾರ್ ನಿರ್ಮಾಣದ ಕಾಮಗಾರಿ ಹಿನ್ನೆಲೆಯಲ್ಲಿ, ಇಂದು ಸಿಎಂ ಡಿಕೆ ಶಿವಕುಮಾರ್ ಅವರು ಸ್ಥಳ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ. ನಾವು ಎಲಿವೇಟೆಡ್ ಮಾಡುತ್ತಿರುವುದು, ಅಂಡರ್ ಪಾಸ್ ಮಾಡುತ್ತಿರುವುದು ಜನರಿಗೆ ಟ್ರಾಫಿಕ್ ಅನುಕೂಲ ಆಗಲಿ ಅಂತ. ಅದಕ್ಕಾಗಿ ನಾವು ಟ್ರಾಫಿಕ್ ನಿಲ್ಸಲ್ಲ ಎಲ್ಲದಕ್ಕೂ ಆಲ್ಟರ್ನೇಟಿವ್ ವ್ಯವಸ್ಥೆ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಯೋಜನೆಗೆ ಕೇಳಿ ಬರುತ್ತಿರುವ ಟೀಕೆಗಳಿಗೆ ತಿರುಗೇಟು ನೀಡಿದ ಸಿಎಂ ಡಿಕೆ ಶಿವಕುಮಾರ್, ಮುಂದೆ ಸಮಸ್ಯೆ ಆಗಬಾರದು ಅಂತ ನಾವು ಇಲ್ಲಿ ಟನಲ್ ಯೋಜನೆ ಮಾಡುತ್ತಿದ್ದೇವೆ. ಟನಲ್ ಮಾಡಿದರೂ ನಮ್ಮ ಮೇಲೆ ಆರೋಪ ಮಾಡುತ್ತಾರೆ. ಎಲಿವೆಟೆಡ್ ಯೋಜನೆ ಮಾಡಿದರೂ ಅಪದಾನೆ ಮಾಡುತ್ತಾರೆ. ಬರಿ ನೆಗೆಟಿವ್ ನಲ್ಲೇ ಎಲ್ಲರೂ ಯೋಚನೆ ಮಾಡುತ್ತಿದ್ದೀರಿ. ಜನ ಸಹ ಹಾಗೆ ಯೋಚನೆ ಮಾಡುತ್ತಿದ್ದಾರೆ. ಅದಕ್ಕೆ ಆಲ್ಟರ್ನೇಟಿವ್ ವ್ಯವಸ್ಥೆ ಎಲಿವೇಟೆಡ್ ಕಾರಿಡಾರ್ ಮಾಡುತ್ತಿದ್ದೇವೆ ಎಂದು ಹೇಳಿದರು.
ಯಾವುದೇ ಯೋಜನೆ ಆದರೂ ಒಂದು ಭೂಮಿಯ ಮೇಲೆ ಮಾಡಬೇಕು ಇಲ್ಲ ಭೂಮಿ ಒಳಗಡೆ ಕಾಮಗಾರಿ ಮಾಡಬೇಕು. ಈ ಬಿಲ್ಡಿಂಗ್ ಹೊಡೆಯೋಕೆ ಪರ್ಮಿಷನ್ ಕೊಡ್ತಾರಾ? ಕಾರ್ನರ್ ನಲ್ಲಿ ಜಾಗ ಇದೆ ಅದಕ್ಕಾಗಿ ರಕ್ಷಣಾ ಮಂತ್ರಿಗಳನ್ನ ಜಾಗ ಕೊಡಿ ಅಂತ ಕೇಳಿದ್ದೇನೆ ಅವರು ಕೊಡ್ತಾರೆ. ಈ ರಸ್ತೆ ಮುಂದೆ ಹೋಗಿ ಒಂದು ಸರ್ಕಲ್ ಕ್ರಿಯೇಟ್ ಆಗುತ್ತೆ. ರಿಂಗ್ ರೀತಿಯ ರಸ್ತೆ ಕ್ರಿಯೇಟ್ ಆಗುತ್ತದೆ. ಅಧಿಕಾರಿಗಳು ಬಂದು ನೋಡಿದ್ದಾರೆ ಮೊನ್ನೆ ಬಿಡಿಎ ಚೇರ್ಮೆನ್ ಅವರು ಬಂದು ನೋಡಿದ್ದರು. ಇವತ್ತು ನಾನು ಬಂದು ನೋಡಿದ್ದೇನೆ ಎಂದು ಸಿಎಂ ವಿವರಿಸಿದರು.
ಇನ್ನು, ಎಲಿವೇಟೆಡ್ ಕಾರಿಡಾರ್ ನಿರ್ಮಾಣದ ಸಮಯದಲ್ಲಿ ಯಾವ ಕಾರಣಕ್ಕೂ ಟ್ರಾಫಿಕ್ ಸಂಚಾರವನ್ನು ನಿಲ್ಲಿಸೋದಿಲ್ಲ. ಕೆಲವು ದೊಡ್ಡ ದೊಡ್ಡ ಗೂಡ್ಸ್ ವೆಹಿಕಲ್ ಕೆಲವು ಟೈಮ್ ನಲ್ಲಿ ಹೋಲ್ಡ್ ಮಾಡುತ್ತೇವೆ. ಪರ್ಯಾಯ ವ್ಯವಸ್ಥೆ ಮಾಡಿದ್ದೀವಿ. ಕೆಲವು ಸೆಟ್ ಆಫ್ ಪೀಪಲ್ ಇದ್ದಾರೆ. ನಾನ್ ಏನ್ ಮಾಡಿದರೂ ವಿರೋಧ ಮಾಡೇ ಮಾಡುತ್ತಾರೆ. ಬಿಜೆಪಿ ಅವರು ದಳದವರು ಏನಾದರೂ ಕೆಲಸ ಮಾಡ್ತಾರಾ? ಅದಕ್ಕೆ ಅಂತನೇ ಒಂದು ಸೆಟ್ಟು ಹೈರ್ ಮಾಡ್ಕೊಂಡಿದ್ದಾರೆ. ಡಿಕೆ ಶಿವಕುಮಾರ್ ಏನೇ ಮಾಡಿದರೂ ಅದಕ್ಕೆ ವಿರೋಧ ಮಾಡಬೇಕು ಅಂತ, ಎಲ್ಲದಕ್ಕೂ ವಿರೋಧ ಮಾಡ್ತಾರೆ. ನಿನ್ನೆ ರಾತ್ರಿ ನಾನು ಹೆಲಿಕಾಪ್ಟರ್ ನಲ್ಲಿ ನೋಡಿದೆ. ಲಾಲ್ ಬಾಗ್ ನ್ನು ಹೆಲಿಕಾಪ್ಟರ್ ನಲ್ಲಿ ನೋಡಿದೆ. ಲಾಲ್ ಬಾಗ್ನಲ್ಲಿ ಹೋಗುತ್ತದೆ, ಬಂಡೆ ಇರೋದೇ ಬೇರೆ ಟನಲ್ ಹೋಗ್ತಾಯಿರೋದೇ ಬೇರೆ ಆದ್ರೂ ಚಿಂತೆ ಇಲ್ಲ ವಿರೋಧ ಪಾರ್ಟಿ ಇರ್ತಾರೆ. ನಮ್ಮ ಅಭಿವೃದ್ಧಿ ಡೈಜೆಸ್ಟ್ ಮಾಡ್ಕೊಳಕ್ಕೆ ಅವರಿಗೆ ಆಗ್ತಿಲ್ಲ. ಹೆಬ್ಬಾಳ ದಲ್ಲಿ ಇರೋ ಎಲಿವೇಟೆಡ್ ಕಾರಿಡಾರ್ ಗೂ ಇದಕ್ಕೂ ಸಂಬಂಧ ಇಲ್ಲ, ಇದೇ ಎಲಿವೇಟೆಡ್ ಕಾರಿಡಾರ್ ಸಪರೇಟ್ ಎಂದು ಹೇಳಿದರು.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿರುವ ಸಿಎಂ, ಇಂದು ಬೆಂಗಳೂರಿನ ಹೆಬ್ಬಾಳ ಜಂಕ್ಷನ್ನಿಂದ ಮೇಖ್ರಿ ವೃತ್ತದವರೆಗಿನ ಎಲಿವೇಟೆಡ್ ರಸ್ತೆ ಕಾಮಗಾರಿಯ ಸ್ಥಳ ಪರಿಶೀಲನೆ ನಡೆಸಿ, ಯೋಜನೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದೆ. ಕಾಮಗಾರಿಯನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ ಎಂದು ಬರೆದುಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಬಿಡಿಎ ಅಧ್ಯಕ್ಷರು ಹಾಗೂ ಶಾಸಕರಾದ ಶ್ರೀ ಎನ್.ಎ. ಹ್ಯಾರಿಸ್, ಸಚಿವರಾದ ಶ್ರೀ ಯು.ಟಿ. ಖಾದರ್, ಬಿಡಿಎ ಆಯುಕ್ತರಾದ ಶ್ರೀ ಪಿ. ಮಣಿವಣ್ಣನ್, ಬೆಂಗಳೂರು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಇಂದು ಬೆಂಗಳೂರಿನ ಹೆಬ್ಬಾಳ ಜಂಕ್ಷನ್ನಿಂದ ಮೇಖ್ರಿ ವೃತ್ತದವರೆಗಿನ ಎಲಿವೇಟೆಡ್ ರಸ್ತೆ ಕಾಮಗಾರಿಯ ಸ್ಥಳ ಪರಿಶೀಲನೆ ನಡೆಸಿ, ಯೋಜನೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದೆ. ಕಾಮಗಾರಿಯನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.
ಈ ಸಂದರ್ಭದಲ್ಲಿ ಬಿಡಿಎ ಅಧ್ಯಕ್ಷರು ಹಾಗೂ ಶಾಸಕರಾದ ಶ್ರೀ ಎನ್.ಎ. ಹ್ಯಾರಿಸ್, ಸಚಿವರಾದ ಶ್ರೀ ಯು.ಟಿ. ಖಾದರ್, ಬಿಡಿಎ ಆಯುಕ್ತರಾದ ಶ್ರೀ ಪಿ. ಮಣಿವಣ್ಣನ್, ಬೆಂಗಳೂರು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
— DK Shivakumar (@DKShivakumar) November 9, 2026