
ಬೆಂಗಳೂರು: ಮತದಾರರ ಪಟ್ಟಿ ಪರಿಷ್ಕರಣೆ (Special Intensive Revision)ಯಲ್ಲಿ ದೊಡ್ಡ ಪ್ರಮಾಣದಲ್ಲಿ ಅಕ್ರಮಗಳ ನಡೆದಿವೆ ಎಂಬ ಕಾಂಗ್ರೆಸ್‌ನ ಸಂಚಲನಕ್ಕೆ ಕಾರಣವಾಗಿದೆ. ಇದರ ಮಧ್ಯೆ ಇವತ್ತು ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ನಡೆಯಿತು.
ಈ ಪ್ರತಿಭಟನೆಗೆ ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ (Dhruv Rathee), ಕಾಕ್ರೋಚ್ ಜನತಾ ಪಾರ್ಟಿ ಮುಖ್ಯಸ್ಥ ಅಭಿಜಿತ್ ದೀಪ್ಕೆ (Abhijeet Dipke) ಭಾಗಿಯಾಗಿದ್ದರು. SIR ಅಕ್ರಮ ವಿರುದ್ಧದ ಹೋರಾಟದಲ್ಲಿ ಇವರಿಬ್ಬರ ಎಂಟ್ರಿ ದೇಶದ ಗಮನ ಸೆಳೆಯಿತು. ಜೊತೆಗೆ ಭಾರೀ ಚರ್ಚೆಗೂ ಕಾರಣವಾಗ್ತಿದೆ.
ಎಸ್‌ಐಆರ್ (SIR) ಅಕ್ರಮ ವಿರುದ್ಧದ ಹೋರಾಟ ದೇಶದ ಆಂತರಿಕ ವಿಚಾರ. ಆದರೆ ಇದನ್ನು ದೇಶದಾಚೆಗಿನ ವಿರೋಧಿಗಳು ಪ್ರೊಪಗಂಡ ರೀತಿಯಲ್ಲಿ ಬಳಸಿಕೊಳ್ಳಲು ಪ್ರಯತ್ನಿಸಿದಂತೆ. ಧ್ರುವ್ ರಾಠಿ ಮತ್ತು ದೀಪ್ಕೆ ಪ್ರತಿಭಟನೆಗೆ ಎಂಟ್ರಿ ಆಗಿರೋ ವಿಚಾರ ತಿಳಿದು ಪಾಕ್ ನಟಿಯೊಬ್ಬಳು ವಿಕೃತವಾಗಿ ಆನಂದಿಸಿದ್ದಾಳೆ ಎಂಬ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಕೇಳಿಬಂದಿವೆ.
ಅಭಿಜಿತ್ ದಿಪ್ಕೆ ಮತ್ತು ಧುವ್ ರಾಠಿ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ ಎಂಬ ವಿಚಾರವನ್ನು ನಾನು ಈಗಷ್ಟೇ ತಿಳಿದುಕೊಂಡೆ. ಈ ಪ್ರತಿಭಟನೆಗೆ ನನ್ನ ಸಂಪೂರ್ಣ ಬೆಂಬಲ ಇದೆ. ಬಿಜೆಪಿ ಸರ್ಕಾರ ಪಾಕಿಸ್ತಾನಿ ನಟರು ಭಾರತಕ್ಕೆ ಬರೋದನ್ನು ಸಂಪೂರ್ಣವಾಗಿ ನಿಲ್ಲಿಸಿದೆ. ಇದರಿಂದ ನನಗೆ ಬರಲು ಸಾಧ್ಯವಾಗುತ್ತಿಲ್ಲ. ಈ ಪ್ರತಿಭನೆ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧಗಳು ಮತ್ತೆ ಸುಧಾರಿಸುತ್ತವೆ ಎಂದು ಆಶಿಸುತ್ತೇನೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪಾಕ್ ನಟಿ ಮಹೀರಾ ಖಾನ್ ಬರೆದುಕೊಂಡಿದ್ದಾರೆ ಎನ್ನಲಾಗಿರುವ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ ಆಗಿದೆ. ಆದರೆ ಈ ಪೋಸ್ಟ್ ನಟಿ ಮಾಡಿರೋದು ನಿಜನಾ ಅನ್ನೋದಕ್ಕೆ ನಿಖರ ಉತ್ತರ ಇಲ್ಲ. ಕೆಲವರು ಇದು ಎಐ ಜನರೇಟೆಡ್ ವಿಡಿಯೋ ಎಂದು ಹೇಳುತ್ತಿದ್ದಾರೆ.
ಪಾಕ್ ನಟಿ ಮಾಡಿದ್ದಾಳೆ ಎನ್ನಲಾಗುತ್ತಿರುವ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಪಾಕ್ ನಟಿ ಹಗಲು ಗನಸು ಕಾಣೋದನ್ನು ಬಿಟ್ಟು ಕ್ಯಾಮೆ ನೋಡಲಿ. ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೋರಿಸೋದು ಯಾಕೆ ಎಂದು ನೆಟ್ಟಿಗರು ಜಾಡಿಸುತ್ತಿದ್ದಾರೆ. ಅಷ್ಟೇ ಅಲ್ಲ, ಪಾಕಿಸ್ತಾನಿ ಪ್ರಜೆಗಳಿಗೆ ಆಹಾರವಾದ ಈ ಪ್ರತಿಭಟನೆಯ ವಿರುದ್ಧವೂ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತದ ಒಳಗೆ ನಡೆಯುತ್ತಿರುವ ಪ್ರತಿಭಟನೆಗೆ ಶತ್ರು ದೇಶದ ಜನರು ಬೆಂಬಲಿಸಿದರೇ.. ಪ್ರತಿಭಟನೆ ನೆಪದಲ್ಲಿ ಶತ್ರು ದೇಶದ ಅಂತರ್ಯುದ್ದ ಪ್ರಚೋದಿಸಲು ಪ್ರಯತ್ನಿಸುತ್ತಿದ್ದಾರಾ.. ಎಂಬ ಪ್ರಶ್ನೆ ಸೋಶಿಯಲ್ ಮೀಡಿಯಾದಲ್ಲಿ ಎದ್ದಿದೆ.
ಪಾಕ್ ನಟಿ ಅಕ್ಟೋಬರ್ 10 ರಂದು ನಡೆಯುವ ಪ್ರತಿಭಟನೆಯನ್ನು ಉಲ್ಲೇಖಿಸಿ ಈ ರೀತಿ ಬರೆದುಕೊಂಡಿದ್ದಾರೆ. ಸಿಜೆಪಿ ಪಕ್ಷದ ನೇತೃತ್ವದಲ್ಲಿ ದೆಹಲಿಯ ಜಂತರ್ ಮಂತರ್‍ನಲ್ಲಿ ಪ್ರತಿಭಟನೆ ನಡೆಯಲಿದೆ. ಕೇಂದ್ರ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ, ಚುನಾವಣಾ ಅಕ್ರಮಗಳ ವಿರುದ್ಧ ಪ್ರತಿಭಟನೆ ನಡೆಯಲಿದೆ. ಅಹಿಂಸಾತ್ಮಕಾಗಿ ನಡೆಯುವ ಪ್ರತಿಭಟನೆಯಲ್ಲಿ ಅಭಿಜಿತ್ ದೀಪ್ಕೆ, ಸೌರವ್ ದಾಸ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ.
पाकिस्तानी अभिनेत्री महिरा खान 10 अक्टूबर के विरोध प्रदर्शन का समर्थन करते हुए एक इंस्टा स्टोरी पोस्ट की जिसमें कहा: “अभी सुना कि अभिजीत डिपके और ध्रुव राठी 10 अक्टूबर को बीजेपी सरकार के खिलाफ विरोध प्रदर्शन करने वाले हैं। इस विरोध प्रदर्शन को पूर्ण समर्थन।
मैं नहीं आ पाऊंगी क्योंकि बीजेपी ने पाकिस्तानी अभिनेताओं को भारत में प्रवेश करने पर प्रतिबंध लगा दिया है। उम्मीद है कि इस विरोध प्रदर्शन के बाद भारत और पाकिस्तान के बीच संबंध फिर से सुधर जाएंगे।”
फिर भी, भारत में लोग सोच रहे हैं कि यह एक सच्चा विरोध प्रदर्शन है।
नहीं भाई, यह मोदी, बीजेपी और हिंदुत्व के खिलाफ सत्ता परिवर्तन का विरोध प्रदर्शन है।
अगर वे सफल हो गए, तो पाकिस्तानी भारत लौट आएंगे, और हम 2007 जैसी स्थिति फिर से देख सकते हैं।
— 🇮🇳Jitendra pratap singh🇮🇳 (@jpsin1) October 8, 2026